
ಕಲಬುರಗಿ,ಮೇ.22-ನೂತನ ಸಂಸತ್ ಭವನದ ಉದ್ಘಾಟನೆ ರಾಷ್ಟ್ರದ ಪ್ರಥಮ ಪ್ರಜೆಯಾದ ರಾಷ್ಟ್ರಪತಿಗಳಿಂದ ಆಗಲಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದರು.
ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಡಿಗಲ್ಲು ಹಾಕಲೂ ಮೋದಿನೇ, ಉದ್ಘಾನೆಗೂ ಮೋದಿನೇ, ಸಿಂಹ ಅಳವಡಿಕೆಗೂ ಮೋದಿನೇ ಬೇಕಾ ? ಎಂದು ಪ್ರಶ್ನಿಸಿದರು.
ಚುನಾವಣೆ ಸಂದರ್ಭದಲ್ಲಿ ಸಾಕಷ್ಟು ರೈಲು ಬಿಟ್ರಿ, ಸಂಸತ್ ಭವನ ಉದ್ಘಾಟನೆಗೆ ರಾಷ್ಟ್ರಪತಿ ಅವರಿಗೆ ಕೊಡಬಾರದಾ ? ಹಿಂದುಳಿದವರಿಗೆ ರಾಷ್ಟ್ರಪತಿ ಮಾಡಿದ್ದಿವಿ ಅಂತಿರಿ.. ಆದರೆ, ಇಂತದ್ದಕ್ಕೆಲ್ಲಾ ನೀವೆ ಮುಂದಾಗ್ತಿರಿ. ಇದು ರಾಷ್ಟ್ರದ ಪ್ರತಿಷ್ಠೆಯ ಪ್ರಶ್ನೆ ಯಾಕೆ ರಾಷ್ಟ್ರಪತಿ ಅವರಿಗೆ ಕರೆಸ್ತಿಲ್ಲ, ಮೋದಿ ಎಲ್ಲಾನೂ ತಾನೇ ಅಂತಾನೆ.. ಬರೀ ತೋರಿಸಲಿಕ್ಕೆ ಮಾಡಿದ್ರೆ ಏನು ಉಪಯೋಗ ? ಎಂದು ಖರ್ಗೆ ಪ್ರಶ್ನಿಸಿದರು.
ಲೋಕಸಭೆ ಚುನಾವಣೆಯಲ್ಲೂ ಬಹುಮತದ ವಿಶ್ವಾಸ
ವಿಧಾನ ಸಭಾ ಚುನಾವಣೆಯೇ ಬೇರೆ, ಲೋಕ ಸಭಾ ಚುನಾವಣೆಯೇ ಬೇರೆ, ಆದರೆ ರಾಜ್ಯದ ಜನರ ಈ ತೀರ್ಮಾನ ನೋಡಿದರೆ ರಾಜ್ಯದಲ್ಲಿ ಎಂ.ಪಿ ಚುನಾವಣೆಯಲ್ಲೂ ನಮಗೆ ಬಹುಮತ ಬರುವ ವಿಶ್ವಾಸವಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ದೇಶಾದ್ಯಂತ ಬಹುಮತ ಪಡೆಯುವ ದಿಕ್ಕಿನಲ್ಲಿ ಪ್ರಯತ್ನ ನಡೆಯುತ್ತಿದೆ. ಇವತ್ತು ದೆಹಲಿಯ ತಮ್ಮ ನಿವಾಸದಲ್ಲಿ ಪ್ರತಿಪಕ್ಷಗಳ ಸಂಘಟನೆಗಾಗಿ ಸಭೆ ಕರೆದಿರುವುದಾಗಿ ತಿಳಿಸಿದ ಅವರು, ಸಮಾನ ಮನಸ್ಕರನ್ನ ಕರೆಯಿಸಿ ಮಾತುಕತೆ ನಡೆಸುವುದಾಗಿ ತಿಳಿಸಿದರು. ಶುಭ ಸೂಚನೆ ಇದೆ, ಅಪೆÇೀಜಿಶನ್‍ಗೆ ಯಶಸ್ಸು ಸಿಗುತ್ತೇ ಎನ್ನುವ ನಂಬಿಕೆ ಇದೆ ಎಂದರು.
ಜನತೆಯ ಗೆಲುವು
ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿನ ಕಾಂಗ್ರೆಸ್ ಪಕ್ಷದ ಗೆಲುವು ಕರ್ನಾಟಕ ಜನತೆಯ ಗೆಲುವಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಈ ಭ್ರಷ್ಟ ಸರಕಾರ ತೆಗೆದು ಹಾಕಲು ಜನ ನಿರ್ಧಾರ ಕೈಗೊಂಡಿದ್ದರು. ಅದರ ಫಲ ಕಾಂಗ್ರೆಸ್‍ಗೆ ಸಿಕ್ಕಿದೆ. ರಾಜ್ಯದ ಜನತೆಗೆ ನೀಡಿರುವ ಭರವಸೆ ಈಡೇರಿಸುವುದು ಸರಕಾರದ ಜವಾಬ್ದಾರಿ.
ಸಿಎಂ, ಡಿಸಿಎಂ ಎಲ್ಲಾ ಸೇರಿ ಐದು ಗ್ಯಾರೆಂಟಿ ಈಡೇರಿಸಲುವ ಬಗ್ಗೆ ನಿರ್ಣಯ ಕೈಗೊಂಡಿದ್ದು ಸ್ವಾಗತಾರ್ಹ. ಇವು ಪಕ್ಷದ ಗೆಲುವಿಗೆ ಕಾರಣವಾದ ಗ್ಯಾರೆಂಟಿಗಳು. ಈ ಗ್ಯಾರೆಂಟಿಗಳನ್ನು ಅನುಷ್ಠಾನ ತರಲೇಬೇಕು,
ಸರಕಾರ ಈ ದಿಕ್ಕಿನಲ್ಲಿ ನಿರ್ಣಯ ಕೈಗೊಂಡಿದೆ. ಸದ್ಯದಲ್ಲೇ ಅನುಷ್ಠಾನಕ್ಕೆ ತಂದು ಜನರಿಗೆ ತಲುಪಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶೀಘ್ರವೇ ರಾಜ್ಯ ಸಚಿವ ಸಂಪುಟ ವಿಸ್ತರಣೆ
ಸದ್ಯದಲ್ಲೇ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು, ಕಲ್ಯಾಣ ಕರ್ನಾಟಕ, ಮುಂಬೈ ಕರ್ನಾಟಕಕ್ಕೆ ತಲಾ ನಾಲ್ಕೈದು ಮಂತ್ರಿ ಸ್ಥಾನ ಸಿಗಲಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಶೀಘ್ರವೇ ಸಚಿವ ಸಂಪುಟ ವಿಸ್ತರಣೆ ಆಗಲಿದ್ದು, ಕಲ್ಯಾಣ ಕರ್ನಾಟಕಕ್ಕೆ ನಾಲ್ಕೈದು ಸಚಿವ ಸ್ಥಾನ ಸಿಗಲಿದ್ದು, ಮುಂಬೈ ಕರ್ನಾಟಕಕ್ಕೂ ನಾಲ್ಕೈದು ಮಂತ್ರಿ ಸ್ಥಾನ ಸಿಗಲಿದೆ ಎಂದು ಹೇಳಿದರು.
ಕೊಟ್ಟ ಭರವಸೆ ಈಡೇರಿಸುವುದು ನಮ್ಮ ಜವಾಬ್ದಾರಿಯಾಗಿದೆ. ಈಗಾಗಲೇ 5 ಗ್ಯಾರಂಟಿಗಳ ಬಗ್ಗೆ ನಿರ್ಣಯ ತೆಗೆದುಕೊಂಡಿದ್ದಾರೆ. ಯಾರಿಗೆ ಹೇಗೆ ಸಿಗಬೇಕು ಎಂಬುದರ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಗುತ್ತದೆ. ಕರ್ನಾಟಕ ವಿಧಾನಸಭೆ ಚುನಾವಣೆ ಲೋಕಸಭೆ ಚುನಾವಣೆ ಮೇಲೆ ಪ್ರಭಾವ ಬೀರುತ್ತೆ. ಜನ ಹೀಗೆ ಬೆಂಬಲ ಕೊಟ್ಟಿದ್ದು ನೋಡಿದರೆ ಕರ್ನಾಟಕದ ವಿಧಾನಸಭೆ ಚುನಾವಣೆಯ ಫಲಿತಾಂಶ ಮುಂಬರುವ ಲೋಕಸಭೆ ಚುನಾವಣೆಯ ಮೇಲೆ ಖಂಡಿತ ಪ್ರಭಾವ ಬೀರುತ್ತೆ ಎಂದರು.