
ಕಲಬುರಗಿ:ಜು.22: ಕೇಸರಿ, ಬಿಳಿ, ಹಸಿರು ಬಣ್ಣ ಹಾಗೂ ನಡುವೆ ಅಶೋಕ ಚಕ್ರವಿರುವ ಭಾರತ ದೇಶದ ತ್ರಿವರ್ಣ ಧ್ವಜವು ಭಾರತದಲ್ಲಿರುವ ಎಲ್ಲರಿಗೂ ಒಂದೇಯಾಗಿರುವ ದೇಶದ ಸ್ವಾತಂತ್ರ್ಯ, ಸಾರ್ವಭೌಮ, ಹೆಮ್ಮೆಯ, ಗೌರವ ಹಾಗೂ ಸಮಾನತೆಯನ್ನು ಸಾರುವ ಸಂಕೇತವಾಗಿದ್ದು, ಪ್ರತಿಯೊಬ್ಬ ಭಾರತೀಯ ರಾಷ್ಟ್ರಧ್ವಜಕ್ಕೆ ಗೌರವ ನೀಡಬೇಕು ಎಂದು ಉಪನ್ಯಾಸಕ, ಎನ್.ಎಸ್.ಎಸ್ ಅಧಿಕಾರ ಎಚ್.ಬಿ.ಪಾಟೀಲ ಹೇಳಿದರು.
ನಗರದ ನ್ಯೂ ರಾಘವೇಂದ್ರ ಕಾಲನಿಯಲ್ಲಿನ 'ಮುತ್ತಾ ಟ್ಯೂಟೋರಿಯಲ್ಸ್'ನಲ್ಲಿ 'ಬಸವೇಶ್ವರ ಸಮಾಜ ಸೇವಾ ಬಳಗ'ದ ವತಿಯಿಂದ ಶನಿವಾರ ಬೆಳೆಗ್ಗೆ ಏರ್ಪಡಿಸಲಾಗಿದ್ದ ಬಳಗದ 2999ನೇ ಕಾರ್ಯಕ್ರಮವು ಆದ 'ರಾಷ್ಟ್ರಧ್ವಜ ಅಂಗೀಕಾರ ಸ್ವೀಕಾರ ದಿನಾಚರಣೆ'ಯ ಕಾರ್ಯಕ್ರಮದಲ್ಲಿ ಧ್ವಜಕ್ಕೆ ಗೌರವಿಸಿ ನಂತರ ಅವರು ಮಾತನಾಡುತ್ತಿದ್ದರು.
ಭಾರತದ ಸಂವಿಧಾನ ರಚನಾ ಸಭೆಯು ಜುಲೈ-22,1947ರಂದು ತ್ರಿವರ್ಣ ಧ್ವಜವನ್ನು ಅಂಗೀಕರಿಸಿತು. ಧ್ವಜದ ಬಣ್ಣಗಳು ತ್ಯಾಗ, ಶಾಂತಿ, ಪ್ರಗತಿ, ಸತ್ಯ, ಸಮೃದ್ಧಿಯನ್ನು ಸೂಚಿಸುತ್ತವೆ. ರಾಷ್ಟ್ರಧ್ವಜ ಅವರೋಹಣ, ಆರೋಹಣ ಪದ್ಧತಿಯ ಬಗ್ಗೆ ತಿಳಿದುಕೊಳ್ಳಬೇಕು. ರಾಷ್ಟ್ರಧ್ವಜವನ್ನು ಸರಿಯಾಗಿ ಜೊಪಾನವಾಗಿ ಇಡಬೇಕು. ಹರಿದ, ಮಾಸಿದ, ಪ್ಲಾಸ್ಟಿಕ್ ದ್ವಜವನ್ನು ಆರೋಹಣ ಮಾಡಬಾರದು. ವಿದ್ಯಾರ್ಥಿ ದೆಸೆಯಿಂದಲೇ ರಾಷ್ಟ್ರಧ್ವಜ, ರಾಷ್ಟ್ರಗೀತೆಗಳ ಚೆನ್ನಾಗಿ ತಿಳಿದುಕೊಂಡು ದೇಶಪ್ರೇಮ ಬೆಳೆಸಿಕೊಂಡು, ರಾಷ್ಟ್ರಕ್ಕೆ ಸೇವೆ ಸಲ್ಲಿಸುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯಸ್ಥ ಶಿವಕುಮಾರ ಮುತ್ತಾ, ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗಪ್ಪ ಬಿರಾದಾರ, ಶಿಕ್ಷಕರಾದ ಪ್ರೀಯಾಂಕಾ ವಾಲಿ, ಪ್ರಮೋದ ಕುಲಕರ್ಣಿ, ಲಕ್ಷ್ಮೀ ಇಚಿಡಿ, ಭೀಮಾಶಂಕರ, ವಿಶ್ವನಾಥ ನಂದರ್ಗಿ, ಪ್ರಮುಖರಾದ ಪ್ರಜ್ವಲ್, ಶಿವಾಜಿ, ಲಕ್ಷ್ಮೀಕಾಂತ, ಸಂದೀಪ, ಅರುಣ, ಪ್ರತೀಕ್, ಗೌರಿಶಂಕರ, ರಾಜು, ಸುಮೀತ್, ಮನೋಜ್, ಕಾರ್ತಿಕ್, ವಿಶ್ವರಾಜ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.