ರಾಷ್ಟ್ರಧ್ವಜದ ಅಂಗೀಕಾರ ದಿವಸ ಆಚರಣೆ

ದಾವಣಗೆರೆ.ಜು.೨೨; ಭಾರತ ಸೇವಾದಳ ಸಾಂಸ್ಕೃತಿಕ ಭವನದಲ್ಲಿ  ಇಂದು  ಭಾರತೀಯ ರಾಷ್ಟ್ರಧ್ವಜ ಅಂಗೀಕಾರ ದಿವಸವನ್ನು ಆಚರಿಸಲಾಯಿತು.ಜುಲೈ 22 1947 ರಂದು  ನೆಹರೂರವರು  ಭಾರತಕ್ಕೆ ತ್ರಿವರ್ಣ ಧ್ವಜವನ್ನು ಪರಿಚಯಿಸಿ   ಇನ್ನು ಮುಂದೆ  ಇದು ನಮ್ಮ ಭಾರತದ ರಾಷ್ಟ್ರಧ್ವಜವಾಗಲಿದೆ ಎಂದರು.  ಇದರ ಸ್ಮರಣಾರ್ಥ ಇಂದು ಭಾರತ ಸೇವಾದಳ ಭವನದಲ್ಲಿ ರಾಷ್ಟ್ರಧ್ವಜದ ಅಂಗೀಕಾರ ದಿವಸವನ್ನು ಆಚರಿಸಲಾಗಿದ್ದು, ಜಿಲ್ಲಾಧ್ಯಕ್ಷ  ಪ್ರೊ. ಚನ್ನಪ್ಪ ಪಲ್ಲಾಗಟ್ಟೆ,  ಜಿಲ್ಲಾ ಕಾರ್ಯದರ್ಶಿ ಅರವಿಂದ ಜೆ ಕೂಲಂಬಿ,  ಕೋಶಾಧ್ಯಕ್ಷ ಎಂ.ರುದ್ರಯ್ಯ,  ಕೇಂದ್ರ ಸಮಿತಿ ಸದಸ್ಯರಾದ ನಾಗರಾಜ್. ಟಿ ರವರು,  ವಲಯ ಸಂಘಟಕ  ಅಣ್ಣಯ್ಯ,ಎಂ. ಡಾ. ಚಂದ್ರಪ್ಪ, ಜಯಪ್ಪ. ಕೆ. ಟಿ. ಕೆ. ಬಿ.ಪರಮೇಶ್ವರಪ್ಪ, ಹನುಮಂತಪ್ಪ, ಸಂಘಮೇಶ್, ಶ್ರೀಕಾಂತ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು