ರಾಷ್ಟ್ರಧ್ವಜಕ್ಕೆ ಗೌರವ,ಹೆಚ್ಚಿನ ಒತ್ತು ನೀಡಿ

ಮಾನ್ವಿ,ಜ.೨೦-
ಜನವರಿ ೨೬ ರಂದು ಸರ್ಕಾರಿ ಇಲಾಖೆಯವರು ಹಾಗೂ ಶಾಲೆ ಕಾಲೇಜಿನವರು ಕಡ್ಡಾಯವಾಗಿ ಮಹಾತ್ಮ ಗಾಂಧಿಯವರ ಹಾಗೂ ಡಾ ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ಕಡ್ಡಾಯವಾಗಿ ಇಟ್ಟು ಪೂಜೆ ಸಲ್ಲಿಸಬೇಕು ಹಾಗೂ ತಾಲೂಕ ಆಡಳಿತದಿಂದ ನಡೆಯುವ ಕಾರ್ಯಕ್ರಮಕ್ಕೆ ಕಡ್ಡಾಯವಾಗಿ ಆಗಮಿಸಬೇಕು ಎಂದು ತಾಲೂಕ ಆಡಳಿತ ಉಪ ದಂಡಧಿಕಾರಿ ಅಬ್ದುಲ್ ವಾಹೀದ್ ಹೇಳಿದರು.
ಇಂದು ತಾಲೂಕ ಆಡಳಿತದಿಂದ ನಡೆದ ಪೂರ್ವಭಾವಿ ಸಭೆಯಲ್ಲಿ ವಿವಿಧ ಸಂಘಟನೆ ಮುಖಂಡರು ಮಾತಾನಾಡಿ ಬಹಳ ಪ್ರಮುಖವಾಗಿ ಪ್ಲಾಸ್ಟಿಕ್ ಧ್ವಜ ನಿಷೇಧ, ಮಕ್ಕಳಿಗೆ ಬಹುಮಾನವಾಗಿ ಸಂವಿಧಾನವನ್ನು ನೀಡಬೇಕು ಹಾಗೂ ರೈತ ಭವನವನ್ನು ಕಾರ್ಯಕ್ರಮಕ್ಕೆ ಬಳಕೆ ಮಾಡುವಂತೆ ಸಲಹೆ ನೀಡಿದರು, ಪಟ್ಟಣದ ಎಲ್ಲ ವೃತ್ತದಲ್ಲಿ ದೀಪದ ಅಲಂಕಾರದ,ಸಾಂಸ್ಕೃತಿಕ ಕಾರ್ಯಕ್ರಮವನ್ನು ಮಕ್ಕಳ ಪರೀಕ್ಷೆಯ ಅನುಗುಣವಾಗಿ ಮಾಡಲಾಗುತ್ತದೆ ಮತ್ತು ಪ್ರತಿ ಬ್ಯಾಂಕಿನಲ್ಲಿ ಕಡ್ಡಾಯವಾಗಿ ಆಚರಣೆ ಮಾಡಬೇಕು ಇಲ್ಲವಾದರೆ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳಲಾಗುತ್ತದೆ ಎಂದರು. ನಂತರ ಸನ್ಮಾನಿಸುವ ಗಣ್ಯರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಅಧಿಕಾರಿ ಅಬ್ದುಲ್ ವಾಹಿದ್ ಉಪ ದಂಡಧಿಕಾರಿ, ಆರೋಗ್ಯಧಿಕಾರಿ ಚಂದ್ರಶೇಖರಯ್ಯ ಸ್ವಾಮಿ, ಸಿ ಪಿ ಐ ಮಹಾದೇಪ್ಪ ಪಂಚಮುಖಿ, ಸಿಡಿಪಿಓ ಮನ್ಸೂರು ಅಲಿ,ಪುರಸಭೆ ಅಧಿಕಾರಿ ಗಂಗಾಧರ, ಮುಖಂಡರಾದ ಕಸಪಾ ಮಾಜಿ ಅಧ್ಯಕ್ಷ ಮಹಮ್ಮದ್ ಮುಜೀಬ್, ದೊಡ್ಡಪ್ಪ ಹೂಗಾರ,ಹುಸೇನಪ್ಪ ಮಾಸ್ಟರ್, ಬಸನಗೌಡ, ಪ್ರಭುರಾಜಕೊಡ್ಲಿ, ಶರಣಯ್ಯ ಸ್ವಾಮಿ, ಚನ್ನಬಸವ ಮಾಡಗಿರಿ, ಹನುಮಂತ ಕೋಟೆ, ಎಲ್ಲಾ ಇಲಾಖೆಯ ತಾಲೂಕ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.