ರಾಷ್ಟ್ರದ ರಕ್ಷಣೆಯಲ್ಲಿ ಸಿಆರ್‍ಪಿಎಫ್ ಪಾತ್ರ ಅನನ್ಯ

ಕಲಬುರಗಿ:ಎ.10: ರಾಷ್ಟ್ರದ ರಕ್ಷಣೆಯಲ್ಲಿ ಯೋಧರ ಪಾತ್ರ ಪ್ರಮುಖವಾಗಿದೆ. ಮಳೆ,ಚಳಿ,ಬಿಸಿಲು,ಹಗಲು-ರಾತ್ರಿಯೆನ್ನದೇ, ಮನೆ, ಸಂಸಾರವನ್ನು ಬಿಟ್ಟು ದೇಶದ ಗಡಿಯನ್ನು ಕಾಯುವ ಮೂಲಕ, ದೇಶದ ರಕ್ಷಣೆ ಮಾಡುವ ಸೈನಿಕರ ಸೇವೆ ಪೂಜ್ಯನೀಯವಾಗಿದೆ. ಪ್ರ್ರತಿಯೊಬ್ಬ ಸೈನಿಕನಿಗೆ ದೇಶದ ಹಿತವೇ ಪ್ರಮುಖವಾದ ಗುರಿಯಾಗಿದೆ. ರಾಷ್ಟ್ರದ ರಕ್ಷಣೆಯಲ್ಲಿ ಸಿಆರ್‍ಪಿಎಫ್ ಯೋಧರು ತಮ್ಮದೇ ಆದ ಅನನ್ಯವಾದ ಕೊಡುಗೆಯನ್ನು ನೀಡುತ್ತಿದ್ದಾರೆ ಎಂದು ಉತ್ತಮ ಸಿಆರ್‍ಪಿಎಫ್ ಯೋಧ ಪ್ರಶಸ್ತಿ ಪುರಷ್ಕøತ ಮಾಜಿ ಯೋಧ ಚಂದ್ರಕಾಂತ ಹೇಳಿದರು.

    ನಗರದ ಆಳಂದ ರಸ್ತೆಯ ದೇವಿ ನಗರದ ಬಿರಾದಾರ ಕಾಂಪೆಕ್ಸ್ ಆವರಣದಲ್ಲಿ 'ಬಸವೇಶ್ವರ ಸಮಾಜ ಸೇವಾ ಬಳಗ'ದ ವತಿಯಿಂದ ಭಾನುವಾರ ಸಂಜೆ ಜರುಗಿದ 'ಸಿಆರ್‍ಪಿಎಫ್ ಶೌರ್ಯ ದಿನಾಚರಣೆ'ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತದ್ದರು.
   ಛತ್ತಿಸಗಡ ರಾಜ್ಯದ ಆಗಿನ ದಂತೆವಾಡ, ಪ್ರಸ್ತುತ ಸುಕುಮಾ ಜಿಲ್ಲೆಯ ತಾಡಮಿಡಲಾ ಎಂಬ ಪ್ರದೇಶದಲ್ಲಿ ಏ.9, 2000 ರಲ್ಲಿ ಸಿಆರ್‍ಪಿಎಫ್ ಯೋಧರು ನಕ್ಸಲೈಟ್ ಜೊತೆಗೆ ಸೆಣಸಾಡಿ 200ಕ್ಕೂ ಅಧಿಕ ಜನರನ್ನು ಹತ್ಯೆಮಾಡಿದರು. ಕೆಲವು ಜನ ನಕ್ಸಲೈಟ್‍ರನ್ನು ವಶಪಡಿಸಿಕೊಳ್ಳಲಾಯಿತು. ಇದರಲ್ಲಿ 76 ಜನ ಸಿಆರ್ ಪಿಎಫ್ ಯೋಧರು ಹುತಾತ್ಮರಾದರು. ಇದರ ನೆನಪಿಗಾಗಿ ಪ್ರತಿವರ್ಷ ಏ.9ರಂದು 'ಸಿಆರ್‍ಪಿಎಫ್ ಶೌರ್ಯ ದಿನ'ವನ್ನಾಗಿ ಆಚರಿಸಲಾಗುತ್ತದೆ ಎಂದು ದಿನಾಚರಣೆಯ ಹಿನ್ನಲೆಯನ್ನು ವಿವರಿಸಿದರು.
   ಎಚ್.ಬಿ.ಪಾಟೀಲ, ಶಿವಯೋಗಪ್ಪ ಬಿರಾದಾರ, ಬಸಯ್ಯಸ್ವಾಮಿ ಹೊದಲೂರ, ದೇವೇಂದ್ರಪ್ಪ ಗಣಮುಖಿ, ನಬಿಲಾಲ್ ಎಸ್. ಸೇರಿದಂತೆ ಇನ್ನಿತರರಿದ್ದರು.