ರಾಷ್ಟ್ರದ ಏಳಿಗೆಗೆ ಕಾರ್ಮಿಕರ ಶ್ರಮ ಶ್ಲಾಘನೀಯ : ಸುಭಾಶ್ಚಂದ್ರ ಬರ್ಮಾ

ಕಲಬುರಗಿ, ಮೇ 1:ರಾಷ್ಟ್ರದ ಏಳ್ಗೆಗೆ ಕಾರ್ಮಿಕರ ಶ್ರಮ ಅತ್ಯಂತ ಮಹತ್ವದ್ದಾಗಿದೆ ಎಂದು ಲೆಕ್ಕ ಪತ್ರ ಇಲಾಖೆ ಉಪ ನಿರ್ದೇಶಕರಾದ ಹರ್ಷವರ್ಧನ ಬರ್ಮಾ ಹೇಳಿದರು.

ಅವರು ಇಂದಲ್ಲಿ ಚನ್ನಮಲ್ಲೇಶ್ವರ ಕಲ್ಯಾಣ ಮಂಟಪದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಉತ್ತರ ವಲಯ ವತಿಯಿಂದ ಜರುಗಿದ ಕಾರ್ಮಿಕ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅವರು ಮಾತನಾಡುತ್ತಾ ಕೈಗಾರಿಕೆಗಳು, ಶಾಲಾ ಕಾಲೇಜುಗಳು, ಸರ್ಕಾರಿ ಇಲಾಖೆಗಳು ಸೇರಿ ಎಲ್ಲಾ ಕ್ಷೇತ್ರಗಳಲ್ಲಿಯೂ ಕಾರ್ಮಿಕರ ಮಹತ್ವ ಅತ್ಯಂತ ಮಹತ್ವದ್ದಾಗಿದೆ. ಕಾರ್ಮಿಕರಿಲ್ಲದೆ ಎಲ್ಲಾ ಕೆಲಸ ಕಾರ್ಯಗಳು ನಡೆಯುವುದು ಅಸಾಧ್ಯವಾಗಿದ್ದು, ಆದಕಾರಣ ಇಂದು ಕಾರ್ಮಿಕರ ಗೌರವ ಸಲ್ಲಿಸಲು ವಿಶ್ವದೆಲ್ಲೆಡೆ ಕಾರ್ಮಿಕ ದಿನಾಚರಣೆ ಆಚರಿಸಲಾಗುತ್ತಿದೆ ಕಾರ್ಮಿಕರಿಲ್ಲದೆ ಜಗತ್ತೇ ಇಲ್ಲಾ ಎನ್ನುವದು ಸತ್ಯ, ಕಾರ್ಮಿಕರಿಗೆ ಗೌರವ ಸಲ್ಲಿಸಲು ನಮ್ಮೆಲ್ಲರ ಆದ್ಯ ಕರ್ತವವ್ಯವಾಗಿದೆ ಎಂದು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತು ಉತ್ತರ ವಲಯ ಅಧ್ಯಕ್ಷರಾದ ಪ್ರಭುಲಿಂಗ ಮುಲಗೆ ಅವರು ಮಾತನಾಡುತ್ತಾ ಕಾರ್ಮಿಕರಿಲ್ಲದೆ ಜಗತ್ತು ಇಲ್ಲ, ಕಾರ್ಮಿಕರ ದುಡಿಮೆಯಿಂದಲೇ ದೇಶದ ಅಭಿವೃದ್ಧಿ ಸಾಧ್ಯ. ಕಾರ್ಮಿಕರು ಅತ್ಯಂತ ಶ್ರದ್ದೇಯಿಂದ ಶ್ರಮವಹಿಸಿ ದುಡಿಯುತ್ತಿರುವುದ ಪರಿಣಾಮವೇ ಇಂದು ದೊಡ್ಡ ಮತ್ತು ಚಿಕ್ಕ ಚಿಕ್ಕ ಉದ್ದಿಮೆಗಳು ನಡೆಯುತ್ತಿರುವುದು ನಾವು ಇಂದು ಕಾಣುತ್ತಿದ್ದೇವೆ. ಕಾರಣ ಇಂದು ಕಾರ್ಮಿಕರಿಗೆ ಗೌರವ ಸಲ್ಲಿಸಲು ಕಾರ್ಮಿಕ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದು ಅವರು ನುಡಿದರು.

ಸನ್ಮಾನ : ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಖಾಜಾಬೀ ಪೋಲಿಸ ಇಲಾಖೆ, ಸಂಗೋಷ ಗೌಳಿ, ರಮೇಶ ಹಡಪದ, ಶ್ರೀನಿವಾಸ, ಜ್ಯೋತಿ ಡಿಗ್ಗಿ ಯವರನ್ನು ಸನ್ಮಾನಿಸಲಾಯಿತು.

ಚನ್ನಮಲ್ಲೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಧೂಳಪ್ಪಾ ಹಾದಮನಿ, ಆಡಳಿತ ಮಂಡಳಿಯ ಸದಸ್ಯರಾದ ಚನ್ನಮಲ್ಲಯ್ಯಾ ಹಿರೇಮಠ, ಶಾಲೆ ಮುಖ್ಯ ಗುರುಗಳಾದ ಶ್ವೇತಾ ಮುತ್ತಾ ಅತಿಥಿಗಳಾಗಿ ಆಗಮಿಸಿದ್ದರು.

ವೇದಿಕೆ ಮೇಲೆ ಗೌರವ ಕಾರ್ಯz Àರ್ಶಿಗಳಾದ ಹಣಮಂತರಾಯ ದಿಂಡೂರೆ, ನಾಗೇಶ ತಿಮ್ಮಾಜಿ, ಗೌರವ ಕೋಶಾಧ್ಯಕ್ಷರಾದ ಶ್ರೀಕಾಂತ ಪಾಟೀಲ ದಿಕ್ಸಂಗಾ, ಲೆಕ್ಕ ಪತ್ರ ಇಲಾಖೆ ಎಫ್.ಡಿ.ಎ ಹರ್ಷವರ್ಧನ ಸೇರಿ ಅನೇಕರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ನಾಗೇಶ ತಿಮ್ಮಾಜಿ ನಿರೂಪಿಸಿದರು. ಕಸಾಪ ಉತ್ತರ ವಲಯ ಅಧ್ಯಕ್ಷರಾದ ಪ್ರಭುಲಿಂಗ ಮುಲಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೊನೆಯಲ್ಲಿ ಹಣಮಂತರಾಯ ದಿಂಡೂರೆ ವಹಿಂದಿಸಿದರು.