ರಾಷ್ಟ್ರದ ಅಭಿವೃದ್ಧಿಗೆ ಸಹಕಾರಿ ಸಂಸ್ಥೆಗಳ ಕೊಡುಗೆ ಅನನ್ಯ

ಕಲಬುರಗಿ:ನ.18: ರಾಷ್ಟ್ರದ ಅನೇಕ ಜನಸಾಮಾನ್ಯರ ಆರ್ಥಿಕ ಜೀವನದ ಸುಗಮ ನಿರ್ವಹಣೆಗೆ ಸಾಕಷ್ಟು ಸಹಾಯಕರವಾಗಿ ಸಹಕಾರಿ ಸಂಸ್ಥೆಗಳು ಸೇವೆ ಸಲ್ಲಿಸುತ್ತಿವೆ. ಸಾಲಗಾರರು ಸೂಕ್ತ ಸಮಯಕ್ಕೆ ಸಾಲ ಮರುಪಾವತಿ ಮಾಡುವ ಮೂಲಕ ಬೆಳೆಯುವದರ ಜೊತೆಗೆ ಸಂಸ್ಥೆಯ ಬೆಳವಣಿಗೆ ಸಾಧ್ಯವಾಗುತ್ತದೆ. ರಾಷ್ಟ್ರದ ಅಭಿವೃದ್ಧಿಗೆ ಸಹಕಾರಿ ಸಂಸ್ಥೆಗಳ ಕೊಡುಗೆ ಅನನ್ಯವಾಗಿದೆ ಎಂದು ಅರ್ಥಶಾಸ್ತ್ರ ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಹೇಳಿದರು.

ನಗರದ ಜಗತ್ ಪ್ರದೇಶದ ಭೀಮನಗರದಲ್ಲಿರುವ 'ಸಿದ್ಧಾರ್ಥ ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡ ಪತ್ತಿನ ಸಹಕಾರ ಸಂಘ' ಮತ್ತು 'ಜಯಾ ಹರಿಜನ-ಗಿರಿಜನ ಮಹಿಳಾ ವಿವಿದೋದ್ಧೇಶ ಸಹಕಾರ ಸಂಘ' ಇವುಗಳ ಕಾರ್ಯಾಲಯದಲ್ಲಿ 'ಬಸವೇಶ್ವರ ಸಮಾಜ ಸೇವಾ ಬಳಗ' ಮತ್ತು 'ಸುಜಯ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ'ಗಳು ಸಂಯುಕ್ತವಾಗಿ ಬುಧವಾರ ಏರ್ಪಡಿಸಿದ್ದ 'ಅಖಿಲ ಭಾರತ 68ನೇ ಸಹಕಾರ ಸಪ್ತಾಹ' ಆಚರಣೆಯ ಕಾರ್ಯಕ್ರಮವನ್ನು ಸಹಕಾರಿ ಚಳುವಳಿ ಪಿತಾಮಹ ಸಣ್ಣರಾಮಣ್ಣಗೌಡ ಸಿದ್ದನಗೌಡ ಪಾಟೀಲ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. 

ಸಂಘದ ಅಧ್ಯಕ್ಷ ಸುನೀಲಕುಮಾರ ಎಚ್.ವಂಟಿ ಮಾತನಾಡಿ, ಸಹಕಾರಿ ಸಂಸ್ಥೆಗಳ ಬಗ್ಗೆ ವ್ಯಾಪಕವಾಗಿ ಜನಜಾಗೃತಿ ಮೂಡಬೇಕು. ಈ ಕೇತ್ರವನ್ನು ರಾಜಕೀಯ ಮುಕ್ತವಾಗಿ ಬೆಳೆಸಿದರೆ, ಇನ್ನೂ ಹೆಚ್ಚಿನ ಜನರಿಗೆ ಅನಕೂಲವಾಗಲು ಸಾಧ್ಯವಾಗುತ್ತದೆ. ಸಹಕಾರಿ ಸಂಸ್ಥೆಗಳ ಸದುಪಯೋಗವನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು. ಇಲ್ಲಿ ವಿಶ್ವಾಸ ಪ್ರಮುಖವಾಗಿದೆ. ಸಾಲ ಮರುಪಾವತಿ ಉತ್ತಮ ರೀತಿಯಿಂದ ಜರುಗಿದರೆ ಸಂಘಗಳು ಬೆಳವಣಿಗೆ ಕಾಣಲು ಸಾಧ್ಯವಾಗುತ್ತದೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಬಸಯ್ಯಸ್ವಾಮಿ ಹೊದಲೂರ, ಶರಣಬಸಪ್ಪ ಮಾಲಿ ಬಿರಾದಾರ ದೇಗಾಂವ, ಚನ್ನಬಸಪ್ಪ ಗಾರಂಪಳ್ಳಿ, ಚಿದಾನಂದ ಗುಡ್ಡಾ, ಡಾ.ಪುತ್ತುರ್, ಸೋಮಶೇಖರ ಯೆಳಮೇಲಿ, ವೈಜನಾಥ ವಂಟಿ, ಪವನಕುಮಾರ ಘೋರ್ಪಡೆ, ಜಯಶ್ರೀ ಎಸ್.ವಂಟಿ, ಸಂಘದ ಉಪಾಧ್ಯಕ್ಷ ಬಸವರಾಜ ಪಿ.ನಂದೂರ, ಕಾರ್ಯದರ್ಶಿ ಬುದ್ದಿವಂತಪ್ಪ ಟಿ.ಗೌಳಿ, ನಿದೇರ್ಶಕರುಗಳಾದ ಅಂಬಾರಾಯ ಎಂ.ನೂಲಕರ್, ಮರೆಪ್ಪ ವೈ.ಬೆಣ್ಣೂರ, ನವರತ್ನ ಬಿ., ಅಮೂಲ ಆರ್., ದೀಪಕ ಬಿ., ರೇಣುಕಾ ಎ., ಹರ್ಷಾ ಎ., ಸುರೇಖಾ ಜೆ., ಲಕ್ಷ್ಮೀಬಾಯಿ ಗಿ., ಸೂರ್ಯಕಾಂತ ಎಚ್.ಜಿಡಗಿ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.