ರಾಷ್ಟ್ರದ ಅಭಿವೃದ್ಧಿಗೆ ಎನ್‍ಜಿಓಗಳ ಕೊಡುಗೆ ಅವಿಸ್ಮರಣೀಯ

ಕಲಬುರಗಿ:ಫೆ.27: ಕಲೆ, ಸಾಹಿತ್ಯ, ಪರಂಪರೆ, ಪರಿಸರ ಸಂರಕ್ಷಣೆ, ಮಹಿಳಾ ಸಬಲೀಕರಣ, ನಿರುದ್ಯೋಗ ನಿವಾರಣೆ, ಶಿಕ್ಷಣ, ಸಾಮಾಜಿಕ ಪಿಡುಗುಗಳ ನಿರ್ಮೂಲನೆ, ಸಾಮಾಜಿಕ ಜಾಗೃತಿ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಎನ್‍ಜಿಓಗಳು ಕಾರ್ಯನಿರ್ವಹಿಸುತ್ತಿವೆ. ಎಲ್ಲಾ ಕಾರ್ಯಗಳು ಸರ್ಕಾರದಿಂದಲೇ ಮಾಡುವುದು ಅಸಾಧ್ಯ. ಅಂತಹ ಸಂದರ್ಭದಲ್ಲಿ ಸರ್ಕಾರೇತರ ಸಂಸ್ಥೆಗಳು ಉತ್ತಮವಾಗಿ ಕಾರ್ಯ ಮಾಡುವ ಮೂಲಕ ರಾಷ್ಟ್ರದ ಅಭಿವೃದ್ಧಿಗೆ ಅನೇಕ ವರ್ಷಗಳಿಂದ ತಮ್ಮದೇ ಆದ ಅವಿಸ್ಮರಣೀಯವಾದ ಕೊಡುಗೆಯನ್ನು ನೀಡುತ್ತಿವೆ ಎಚಿದು ರಾಜ್ಯ ಸಮತಾ ಸೈನಿಕ ದಳದ ಅಧ್ಯಕ್ಷ ಬಿ.ಚನ್ನಕೃಷ್ಣಪ್ಪ ಅವರು ಹೇಳಿದರು.
‘ಸುಜಯ್ ಶಿಕ್ಷಣ ಮತ್ತು ಕಲ್ಯಾಣ ಸಂಸೆ’್ಥ, ‘ಬಸವೇಶ್ವರ ಸಮಾಜ ಸೇವಾ ಬಳಗ’, ‘ಹೈದ್ರಾಬಾದ ಕರ್ನಾಟಕ ಸಿದ್ದಾರ್ಥ ಸೇವಾ ಸಂಸ್ಥೆ’, ‘ಕಲ್ಪವೃಕ್ಷ ಸೇವಾ ಸಂಸೆ’್ಥ, ‘ಅಂತರಂಗ ಸಾಂಸ್ಕøತಿಕ ಸೇವಾ ಸಂಸೆ’್ಥ, ‘ಮಹಾದೇವಿ ನಾದ ಮಧುರ ಸಾಹಿತ್ಯ ಸಾಂಸ್ಕøತಿಕ ಕಲಾ ಸಂಸ್ಥೆ’, ‘ರಂಗಾಂತರಂಗ ಸಾಂಸ್ಕøತಿಕ ಕಲಾ ಸಂಘ’, ‘ಅಕ್ಕಮಹಾದೇವಿ ಕಲಾ ಸಾಂಸ್ಕøತಿಕ ಸಾಹಿತ್ಯ ಮಹಿಳಾ ಸಂಘ’ ಇವೆಲ್ಲವುಗಳ ಸಂಯುಕ್ತ ಆಶ್ರಯದಲ್ಲಿ ನಗರದ ಕಲಾ ಮಂಡಳದಲ್ಲಿ ಸೋಮವಾರ ಸಂಜೆ ಏರ್ಪಡಿಸಲಾಗಿದ್ದ ‘ವಿಶ್ವ ಎನ್ ಜಿಓ ದಿನಾಚರಣೆ’, ಸಾಧಕರು, ಬಾಲ ಕಲಾವಿದರಿಗೆ ಸತ್ಕಾರ, ಕಲಾ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿಅವರು ಮಾತನಾಡುತ್ತಿದ್ದರು.
ಪ್ರಸ್ತುತ ಸಂದರ್ಭದಲ್ಲಿ ರಾಜಕೀಯ ಪ್ರತಿನಿಧಿಗಳಿಗೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಇಚ್ಛಾಶಕ್ತಿಯ ಕೊರತೆಯಿದೆ. ಇಂತಹ ಸಂದರ್ಭದಲ್ಲಿ ಸರ್ಕಾರೇತರ ಸಂಸ್ಥೆಗಳು ಅಭಿವೃದ್ಧಿಯ ಕೆಲಸವನ್ನು ಒಂದು ಸವಾಲಾಗಿ ತೆಗೆದುಕೊಂಡು ಕೆಲಸಮಾಡಬೇಕಾಗಿದೆ. ‘ರವಿ ಕಾಣದನ್ನು ಕವಿ ಕಂಡ, ಕವಿ ಕಾಣದನ್ನು ಎನ್‍ಜಿಓಗಳು ಕಂಡವು’ ಎಂಬ ಮಾತು ಎನ್‍ಜಿಓದ ಮಹತ್ವವನ್ನು ಸಾರುತ್ತದೆ. ಸಾಮಾಜಿಕ ಜಾಗೃತಿ, ಪ್ರತಿಶತ ಸಾಕ್ಷರತಾ ದರದ ಸಾಧನೆ, ಜನಸಾಮಾನ್ಯರ ಸಮಸ್ಯೆಗೆ ಸ್ಪಂದಿಸುವ, ದೀನ-ದಲಿತ, ಬಡವರು, ಅಸಹಾಯಕರು, ನಿರ್ಗತಿಕರಿಗೆ ಸಹಾಯ ಮಾಡುವ ಮೂಲಕ ನಿರ್ಗತಿಕರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕಾರ್ಯ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಎನ್‍ಜಿಓಗಳು ಮಾಡುವಂತೆ ಸಲಹೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸುಜಯ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯ ಅಧ್ಯಕ್ಷ ಡಾ.ಸುನೀಲಕುಮಾರ ಎಚ್.ವಂಟಿ, ಸರ್ಕಾರದ ಅಥವಾ ವ್ಯಕ್ತಿ, ಸಂಸ್ಥೆಗಳಿಂದ ಅನುದಾನ ಪಡೆಯಲಿಕ್ಕೆ ಎನ್‍ಜಿಓಗಳು ಆರಂಭಿಸಿದರೆ ಉಪಯೋಗವಿಲ್ಲ. ಎನ್‍ಜಿಓದ ನೈಜ ಧ್ಯೇಯೋದ್ಧೇಶಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡು ಕೆಲಸ ಮಾಡಬೇಕು. ಯಾವುದೇ ಒಂದು ಪೈಸೆ ಹಣ ಪಡೆಯದೆ, ಪ್ರತಿಫಲಾಪೇಕ್ಷೆಯಿಲ್ಲದೆ, ಇಲ್ಲಿಯವರೆಗೆ 2616 ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಾಜಕ್ಕೆ ಅಮೋಘವಾದ ಕಒಡುಗೆಯನ್ನು ನೀಡುತ್ತಿರುವ ಬಸವೇಶ್ವರ ಸಮಾಜ ಸೇವಾ ಬಳಗ ಮಾದರಿಯಾಗಿದೆ ಎಂದರು.
ಎಚ್.ಬಿ.ಪಾಟೀಲ, ಎಂ.ಬಿ.ನಿಂಗಪ್ಪ, ಪ್ರೊ.ಈಶ್ವರ ಇಂಗನ್, ನಂದಕುಮಾರ ತಳಕೇರಿ, ಎಸ್.ಬಿ.ಹರಿಕೃಷ್ಣ, ಶಾಂತಾಬಾಯಿ ಅಗಸ್ಥ್ಯತೀರ್ಥ, ಸುದರ್ಶನ ಭವಾನಿ, ಮಲ್ಲೇಶಿ ಬಡಿಗೇರ, ಸಂಜೀವ ಡಿ.ಮಾಲೆ, ಭೀಮಶ್ಯಾ, ಬಸವರಾಜ ಎಸ್.ಪುರಾಣೆ, ಶಿವಯೋಗಪ್ಪ ಬಿರಾದಾರ, ಬಸಯ್ಯಸ್ವಾಮಿ ಹೊದಲೂರ, ಹಣಮಂತ ವಂಟಿ, ಜಯಶ್ರೀ ಎಸ್.ವಂಟಿ, ಸುಜಯ್ ಎಸ್.ವಂಟಿ, ಪ್ರೊ.ರಮೇಶ ಯಾಳಗಿ, ದೇವರಾಜ ಕನ್ನಡಗಿ, ಸಾಯಬಣ್ಣ ಹೋಳ್ಕರ್, ಲಲಿತಾ, ರಾಮು ಸೇರಿದಂತೆ ಮತ್ತಿತರರು ಇದ್ದರು.
ಅಂತರಂಗ ಸಾಂಸ್ಕøತಿಕ ಸೇವಾ ಸಂಸ್ಥೆಯ ಮಕ್ಕಳಿಂದ ಜರುಗಿದ ಆಕರ್ಷಕ ಜಾನಪದ ನೃತ್ಯ ಮನಸೂರೆಗೊಳಿಸಿತು. ಬಾಲಕಲಾವಿದರಾದ ಎಲ್ಲಾ ಮಕ್ಕಳಿಗೆ ಮತ್ತು ಸಂಸ್ಥೆಯ ಮುಖ್ಯಸüರಿಗೆ ಸತ್ಕರಿಸಿ, ಗೌರವಿಸಲಾಯಿತು.