ರಾಷ್ಟ್ರದಲ್ಲಿ ಆಚಾರ ವಿಚಾರ ಭಿನ್ನವಿದ್ದರೂ, ಏಕತೆಯಲ್ಲಿ ಅಡ್ಡಿಯಾಗಿಲ್ಲ: ಉಪ್ಪಿನ್


ಹುಬ್ಬಳ್ಳಿ,ನ.22- ಸರ್ವ ಭಾಷಾ ಸಹಿಷ್ಣತೆ ನಮ್ಮಲ್ಲಿದ್ದರೆ ದೇಶದ ಏಕತೆಯನ್ನು ಸದಾಕಾಯಬಹುದು. ದೇಶ ಭಾಷೆಯನ್ನು ಕಟ್ಟುವ ಸಮಾಜ ನಮ್ಮದಾಗಬೇಕು. ಭಾಷೆಯಿಲ್ಲದೆ ನಾವಿಲ್ಲ,ನಾವಿಲ್ಲದೆ ಭಾಷೆಯಿಲ್ಲಾ ಎಂದು ಮಹಿಳಾ ಮಹಾವಿದ್ಯಾಲಯದ ಗ್ರಂಥಪಾಲಕರು ಸಹನಾ ಉಪ್ಪಿನ್ ಹೇಳಿದರು.
ರಾಷ್ಟ್ರೀಯ ಐಕ್ಯತಾ ಸಪ್ತಾಹದ 3ನೇ ದಿನದಂದು ಮುರುಸಾವಿರ ಮಠದ ಶ್ರೀ ಜಗದ್ಗುರು ವಿದ್ಯಾವರ್ಧಕ ಸಂಘ ಕಲಾ ಹಾಗೂ ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಶನಿವಾರ ನಡೆದ ಭಾಷಾ ಸೌಹಾರ್ದತಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕಾಶ್ಮೀರದಿಂದ-ಕನ್ಯಾಕುಮಾರಿ, ಗುಜರಾತಿನಿಂದ ಪಶ್ಚಿಮ ಬಂಗಾಳದವರೆಗೆ ಭಾರತವು ವಿಶಾಲವಾಗಿ ಹಬ್ಬಿದೆ. ರಾಷ್ಟ್ರದಲ್ಲಿ ಹಿಂದೂ, ಕ್ರೈಸ್ತ, ಬೌದ್ಧ, ಜೈನ್ ಹಲವಾರು ಧರ್ಮದವರ ಭಾಷೆ ಆಚಾರ-ವಿಚಾರ, ತೊಡುಗೆಗಳಲ್ಲಿ ಭಿನ್ನತೆಯಿದ್ದರು ಏಕತೆಯಲ್ಲಿ ಅಡ್ಡಿಯಾಗಿಲ್ಲ ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಹಿಳಾ ಮಹಾವಿದ್ಯಾಲಯದ ಪಾಚಾರ್ಯರರು ಡಾ.ಲಿಂಗರಾಜ ಅಂಗಡಿ ಮಾತನಾಡಿ ಹಲವಾರು ಸಾಹಿತಿಗಳು ಭಾಷೆಯ ಬಗ್ಗೆ ಹಲವಾರೂ ಕೃತಿಗಳನ್ನು ಬರೆದು ಈಗಾಗಲೇ ಭಾಷೆಯನು ್ನಅತ್ಯಂತ ಉತ್ತುಂಗ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಪ್ರತಿಯೊಬ್ಬ ನಾಗರಿಕನಿಗೂ ಭಾಷೆಯ ಬಗ್ಗೆ ಅಭಿಮಾನ ಇರಲೇಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಗೀತ ವಿಭಾಗದ ಮುಖ್ಯಸ್ಥರು ಜ್ಯೋತಿಲಕ್ಷೀ ಡಿ.ಪಿ,ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥರು ಮಹೇಶ್ವರಿ ಉದಗಟ್ಟಿ, ನಿವೃತ ಜಿಲ್ಲಾ ವೈದ್ಯಾಧಿಕಾರಿ ಜಿ.ಆರ್ ತಮ್ಮನಗೊಂಡ,ಇಂಗ್ಲಿಷ ವಿಭಾಗದ ಮುಖ್ಯಸ್ಥರು ಡಾ.ಸಿ ಸಲಿಯಾ ಡಿಕ್ರೂಜ್, ಉಪನ್ಯಾಸಕ ವೃಂದದವರು, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ರಾಷ್ಟ್ರೀಯ ಸೇವಾ ಯೋಜನೆ ಘಟಕದ ಅಧಿಕಾರಿಗಳು ಡಾ. ಶಿವಲೀಲಾ ಸಿದ್ದವೀರೆ ಕಾರ್ಯಕ್ರಮವನ್ನು ನೆರವೇರಿಸಿದರು.
ರಾಷ್ಟ್ರೀಯ ಸೇವಾ ಯೋಜನೆ 2020 ದಕ್ಷಿಣ ವಲಯ ಮಟ್ಟದ ಪೂರ್ವಬಾವಿ ಗಣಗಾರಾಜ್ಯೋತ್ಸವ ಪಥಸಂಚಲನ ಶಿಬಿರಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿನಿ ಕು. ಪ್ರೇಕ್ಷಾ ಎಸ್ ತಿಮ್ಮಗೌಡರ ಗೆ ಮಹಾವಿದ್ಯಾಲಯದ ಪರವಾಗಿ ಶುಭಕೋರಿ ಸನ್ಮಾನಿಸಲಾಯಿತು.