
ಇಂಡಿ:ಆ.10: ಭಾರತ ಸೇವಾದಳಕ್ಕೆ ಶಿಕ್ಷಕರೇ ಅಡಿಗಲ್ಲು. ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಸೇವಾದಳದ ಶಾಖೆಗಳನ್ನು ಎಲ್ಲ ಶಾಲೆಗಳಲ್ಲೂ ತೆರೆಯಬೇಕು. ಆ ಮೂಲಕ ಇಂದಿನ ಪೀಳಿಗೆಯಲ್ಲಿ ದೇಶಭಕ್ತಿ. ರಾಪ್ಟ್ರಪ್ರೆ?ಮ ಶಿಸ್ತನ್ನು ಬೆಳೆಸಬೇಕು ಎಂದು ಇಂಡಿ ಕ್ಷೇತ್ರ ಸಮನ್ವಯಾಧಿಕಾರಿ ಎಸ್ ಆರ್ ನಡಗಡ್ಡಿ ಹೇಳಿದರು.
ಅವರು ತಾಲೂಕಿನ ಹಿರೇರೂಗಿ ಗ್ರಾಮದಲ್ಲಿ ಭಾರತ ಸೇವಾದಳ ಜಿಲ್ಲಾ ಸಮಿತಿ ಹಾಗೂ ಕೆಬಿಎಸ್, ಕೆಜಿಎಸ್,
ಯುಬಿಎಸ್ ಶಾಲೆಯ ಸಹಯೋಗದಲ್ಲಿ ಹಮ್ಮಿಕೊಂಡ ಕ್ವಿಟ್ ಇಂಡಿಯಾ ಚಳುವಳಿ ದಿನದ ನಿಮಿತ್ತ ರಾಷ್ಟ್ರಧ್ವಜ- ರಾಷ್ಟ್ರಗೀತೆ ಕುರಿತ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಭಾರತ ಸೇವಾದಳದ ಜಿಲ್ಲಾ ವಲಯ ಸಂಘಟಕ ನಾಗೇಶ ಡೋನೂರ ಮಾತನಾಡಿ,ಭಾರತ ದೇಶದ ಪಂಚ ಕಳಸ ಎನ್ನಿಸಿಕೊಂಡಿರುವ ರಾಷ್ಟ್ರಧ್ವಜ, ರಾಷ್ಟ್ರಗೀತೆ, ರಾಷ್ಟ್ರಲಾಂಛನ, ರಾಷ್ಟ್ರಭಾಷೆ ಮತ್ತು ಸಂವಿಧಾನವನ್ನು
ಎಲ್ಲ ಭಾರತೀಯರು ಗೌರವಿಸಬೇಕು. ಇವು ದೇಶಪ್ರೇಮ, ದೇಶಭಕ್ತಿಯ ಸಂಕೇತಗಳಾಗಿವೆ ಎಂದು ಹೇಳಿದರು.
ಜಿಲ್ಲಾ ಸಂಪನ್ಮೂಲ ವ್ಯಕ್ತಿ ಜಿ ಜಿ ಬರಡೋಲ ಮಾತನಾಡಿ, ರಾಷ್ಟ್ರೀಯ ಹಬ್ಬ ಸೇರಿ ಹಲವು ವಿಶೇಷ ಸಂದರ್ಭಗಳಲ್ಲಿ ರಾಷ್ಟ್ರಧ್ವಜ ಹಾರಿಸುವಾಗ ಧ್ವಜಸಂಹಿತೆ ಕಡ್ಡಾಯವಾಗಿ ಪಾಲಿಸಬೇಕು. ರಾಷ್ಟ್ರಗೀತೆ ಹಾಡುವಾಗಲೂ ಸಮಯ ಪಾಲನೆಗೆ ಮಹತ್ವ ಕೊಡಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆಬಿಎಸ್ ಮುಖ್ಯ ಶಿಕ್ಷಕ ಅನಿಲ ಪತಂಗಿ ಮಾತನಾಡಿ, ರಾಷ್ಟ್ರಧ್ವಜ ಆರೋಹಣ, ಅವರೋಹಣದ ನಿಯಮಗಳನ್ನು ಪ್ರತಿಯೊಬ್ಬರು ಅರಿತಿರಬೇಕು. ಮಕ್ಕಳಿಗೂ ಇದರ ಬಗ್ಗೆ ಮಾಹಿತಿ ಕೊಡಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.
ಶಿಕ್ಷಕ ಸಂತೋಷ ಬಂಡೆ ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳಲ್ಲಿ ರಾಷ್ಟ್ರಭಕ್ತಿ, ದೇಶಪ್ರೆ?ಮ, ಶಿಸ್ತು,ನಾಯಕತ್ವ ಗುಣ,ಸೇವಾಮನೋಭಾವ ಬೆಳೆಸಲು ಸೇವಾದಳವು ಸಹಕಾರಿಯಾಗಿದೆ ಎಂದು ಹೇಳಿದರು.
ಕೆಜಿಎಸ್ ಮುಖ್ಯ ಶಿಕ್ಷಕಿ ವ್ಹಿ ವೈ ಪತ್ತಾರ,ಯುಬಿಎಸ್ ಮುಖ್ಯ ಶಿಕ್ಷಕ ಎ ಎಂ ಬೆದ್ರೇಕರ, ಶಿಕ್ಷಕರಾದ ಎಸ್ ಎಸ್ ಅರಬ, ಎಸ್ ಎಂ ಪಂಚಮುಖಿ,ಎಸ್ ಡಿ ಬಿರಾದಾರ, ಜೆ ಎಂ ಪತಂಗಿ,ಸಾವಿತ್ರಿ ಸಂಗಮದ, ಜೆ ಸಿ ಗುಣಕಿ, ಎಂ ಎಂ ಪತ್ತಾರ, ಸುರೇಶ ದೊಡ್ಯಾಳಕರ, ಎಸ್ ಎನ್ ಡಂಗಿ, ಎಸ್ ಬಿ ಕುಲಕರ್ಣಿ, ಎನ್ ಬಿ ಚೌಧರಿ, ಎಸ್ ಪಿ ಪೂಜಾರಿ,
ಯಲ್ಲಮ್ಮಸಾಲೋಟಗಿ, ಆಶಾ ಕೋರಳ್ಳಿ ಉಪಸ್ಥಿತರಿದ್ದರು.
ಶಿಕ್ಷಕ ಎಸ್ ಆರ್ ಚಾಳೇಕರ ಕಾರ್ಯಕ್ರಮ ನಿರ್ವಹಿಸಿದರು. ಈ ಸಂದರ್ಭದಲ್ಲಿ ಮಕ್ಕಳಿಗೆ ಮತ್ತು ಶಿಕ್ಷಕರಿಗೆ ರಾಷ್ಟ್ರಗೀತೆ ಹಾಡುವ ವಿಧಾನ ಹಾಗೂ ರಾಷ್ಟ್ರಧ್ವಜ ಕಟ್ಟುವ ರೀತಿಯನ್ನು ತಿಳಿಸಲಾಯಿತು.