ರಾಷ್ಟ್ರಕವಿ ಕುವೆಂಪು ರವರ 119ನೇ ಜಯಂತಿ

ಬೀದರ:ಡಿ.30:ಕರ್ನಾಟಕ ರಕ್ಷಣಾ ವೇದಿಕೆ ಕಾವಲುಗಾರ ಪಡೆ ಬೀದರ ಜಿಲ್ಲಾ ಘಟಕದ ವತಿಯಿಂದ ನವಜೀವನ ವಿಶೇಷ ಬುದ್ದಿಮಾಂದ್ಯ ಮಕ್ಕಳ ವಸತಿಯುತ ಶಾಲೆ ಬೀದರ ಶಾಲೆಯಲ್ಲಿ ರಾಜ್ಯಾಧ್ಯಕ್ಷರಾದ ಎಚ್. ಸುರೇಶ ರವರ ನೇತೃತ್ವದಲ್ಲಿ ರಾಷ್ಟ್ರಕವಿ ಕುವೆಂಪು ರವರ 119ನೇ ಜಯಂತೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು.
ಕುವೆಂಪು ಅವರ ಸಾಹಿತ್ಯ ನಾವು ತಿಳಿದುಕೊಳ್ಳಬೇಕಾಗಿದೆ. ಅವರ ಆದರ್ಶಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಕೊಳ್ಳಬೇಕಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಕಾವಲುಪಡೆ ಜಿಲ್ಲಾಧ್ಯಕ್ಷರಾದ ಅವಿನಾಶ ಬುದರ್ಕರ್ ಅವರು ನುಡಿದರು.

ಈ ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷರಾದ ವೀರಶೆಟ್ಟಿ ಪಾಟೀಲ, ಸ್ಟೀಫನ್ ಪಾಲ್ ಜಿಲ್ಲಾ ಉಪಾಧ್ಯಕ್ಷರು, ಬೀದರ ತಾಲೂಕಾಧ್ಯಕ್ಷ ಮಿಥುನ ಆರ್ಯ, ಶ್ರೀಕಾಂತ ಭವಾನಿ, ಜಿಲ್ಲಾಧ್ಯಕ್ಷರು ಕನ್ನಡಿಗರ ರಕ್ಷಣಾ ವೇದಿಕೆ ಬೀದರ, ಸಬಾಸ್ಟಿನ್, ಮಾರ್ಟಿನ್ ಇನ್ನೀತರರು ಉಪಸ್ಥಿತರಿದ್ದರು.