ರಾಷ್ಟ್ರಕವಿ ಕುವೆಂಪು ಜನ್ಮಾದಿನಾಚರಣೆ

ರಾಯಚೂರು,ಡಿ.೨೯- ವಿಶ್ವ ಮಾನವ, ಶ್ರೇಷ್ಠ ಕವಿ ಮತ್ತು ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ರಾಷ್ಟ್ರಕವಿ ಕುವೆಂಪು ಅವರ ಜನ್ಮಾದಿನಾಚರಣೆಯನ್ನು ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ವತಿಯಿಂದ ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಕುವೆಂಪು ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಸರಳವಾಗಿ ಆಚರಿಸಲಾಯಿತು.
ಪ್ರತಿ ಕುವೆಂಪು ಅವರ ಜನ್ಮಾದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿತ್ತು. ಆದರೆ ಕೋರೊನಾ ವೈರಸ್ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲಾಗುತ್ತಿದೆ ಎಂದು ಹಿರಿಯ ಸಾಹಿತಿ ವೀರಹನುಮಾನ್ ಹೇಳಿದರು.
ಕುವೆಂಪು ಅವರು ಶ್ರೇಷ್ಠ ಕವಿ. ಅವರಿಗೆ ಹಲವಾರಿ ಪ್ರಶಸ್ತಿಗಳು ಒಲಿದು ಬಂದಿವೆ. ಅವರ ಜೀವನ ಮತ್ತು ಆದರ್ಶಗಳನ್ನು ಎಲ್ಲರೂ ಮೈಗೂಡಿಗೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಮಂಗಲ ವಿನಾಯಕ್, ಭೀಮನಗೌಡ ಇಟಗಿ, ಜೆ.ಎಲ್. ಈರಣ್ಣ, ದಂಡಪ್ಪ ಬಿರಾದಾರ್ ರಂಗಸ್ವಾಮಿ, ವಿ.ಎನ್. ಅಕ್ಕಿ, ವಿದ್ಯಾಸಾಗರ್, ದಸ್ತಗೀರ್ ಸಾಬ್ ದಿನ್ನಿ, ಆಂಜನೇಯ ಜಾಲಿಬೆಂಚಿ, ಕರಿಯಪ್ಪ ಮಾಸ್ಟರ್, ಇಸ್ಮಾಯಿಲ್, ವಿನೋದ್ ಕುಮಾರ್, ಸಿದ್ದು ನರಸಿಂಹಲು, ಮುರಳಿಧರ ಕುಲಕರ್ಣಿ, ಸುರೇಶ, ರಾಘವೇಂದ್ರ, ಅಮರೇಶ ಸೇರಿದಂತೆ ಇನ್ನಿತರರು ಇದ್ದರು.