ರಾಷ್ಟಪ್ರೇಮ ರೂಪಗೊಳ್ಳಲು ದೈಹಿಕ ಶಿಕ್ಷಣವೂ ಪ್ರೇರಣೆಯಾಗಲಿದೆ: ಡಾ.ಹನುಮಂತಯ್ಯ ಪೂಜಾರಿ

ಸಂಡೂರು :ಡಿ:23 ಮಕ್ಕಳ ಬೆಳವಣಿಗೆ, ಒಳ್ಳೆ ಆರೋಗ್ಯ ಸೃಷ್ಟಿ ಹಾಗೂ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ರೂಪಗೊಳ್ಳಲು ದೈಹಿಕ ಶಿಕ್ಷಣ ಯುವಜನಾಂಗಕ್ಕೆ ಅಗತ್ಯವಾಗಿದೆ ಎಂದು ಅಕ್ಕಮಹಾದೇವಿ ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕ ಡಾ.ಹನುಮಂತಯ್ಯ ಪೂಜಾರಿ ಅಭಿಪ್ರಾಯ ಪಟ್ಟರು. ಅವರು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ವ್ಯಾಪ್ತಿಯ ಸ್ನಾತಕೋತ್ತರ ಕೆಂದ್ರ ನಂದಿಹಳ್ಳಿಯಲ್ಲಿ ಜರುಗಿದ ದೈಹಿಕ ಶಿಕ್ಷಣ ಮತ್ತು ರಾಷ್ಟ್ರಪ್ರೇಮ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
ಅವರು ಸಂಡೂರಿನ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದಲ್ಲಿ ಜರುಗಿದ ದೈಹಿಕ ಶಿಕ್ಷಣ ಮತ್ತು ರಾಷ್ಟ್ರಪ್ರೇಮ ಎಂಬ ವಿಶೇಷ ಉಪನ್ಯಾಸವನ್ನು ದಿ. 22ರಂದು ನಡೆದ ವಿಶೇಷ ಸಭೆಯಲ್ಲಿ ಮಾತನಾಡಿದರು. ಒಬ್ಬನೊಡನೆ ಒಂದು ವರ್ಷ ಮಾತನಾಡುವುದಕ್ಕಿಂತಲೂ ಅವನೊಡನೆ ಒಂದು ಗಂಟೆ ಆಟವಾಡಿದರೆ ಅವನನ್ನು ಹೆಚ್ಚು ಅರ್ಥಮಾಡಿಕೊಳ್ಳ ಬಹುದು ಎಂಬ ಗ್ರೀಸ್ ತತ್ವಜ್ಞಾನಿ ಪ್ಲೇಟೋ ಅವರ ಉಕ್ತಿಯಲ್ಲಿ ದೈಹಿಕ ಶಿಕ್ಷಣದ ಮಹತ್ವ ಅಡಗಿದೆ ಎಂದರು. ಆಟ,ಕ್ರೀಡೆಗಳ ದೈಹಿಕ ಶಿಕ್ಷಣದ ಅವಿಭಾಜ್ಯ ಅಂಗಗಳಾಗಿವೆ ಮೇಜರ್ ಧ್ಯಾನ್ ಚಾಂದ್,ಸಚಿನ್ ತೆಂಡೂಲ್ಕರ್ರಾಹುಲ್ ದ್ರಾವಿಡ್,ದೀಪಾ ಮಲ್ಲಿಕ್, ಹಿಮಾದಾಸ್ ಸೌರವ್ ಗಂಗೂಲಿ ಪಿ.ಟಿ.ಉಷಾ, ಕರ್ಣಂ ಮಲ್ಲೇಶ್ವರಿ ಕ್ರೀಡೆಗಳ ಮೂಲಕ ದೇಶದ ಕೀರ್ತಿಪತಾಕೆಯನ್ನು ಹಾರಿಸಿದ್ದಾರೆ ಅವರ ಸಾಧನೆ ರಾಷ್ಟ್ರಪ್ರೇಮದ ಮೂಲಕ ಸಾಧ್ಯವಾಗಿದೆ ಎಂದರು.
ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಚಂದ್ರಶೇಖರ್ ಅಜಾದ್, ಸುಭಾಷ್ ಚಂದ್ರ ಭೋಷ್, ವೀರ್ ಸಾರ್ವಕರ್, ಭಗತ್ ಸಿಂಗ್, ರಾಜಗುರು,ಸುಖದೇವ್ ಸೇರಿದಂತೆ ಸಾವಿರಾರ ದೇಶ ಭಕ್ತರ ತ್ಯಾಗ ಬಲಿದಾನಗಳು ರಾಷ್ಟ್ರಪ್ರೇಮದ ಕುರುಹುಗಳಾಗಿವೆ ಎಂದು ನುಡಿದರು. ಹಿರಿಯ ಪ್ರಾಧ್ಯಾಪಕ ಡಾ.ಪಿ.ಸಿ.ನಾಗನೂರು ಕಾರ್ಯಕ್ರಮ ಉದ್ಘಾಟಿಸಿದರು. ಕೇಂದ್ರ ನಿರ್ದೇಶಕ ಡಾ.ರವಿ.ಬಿ. ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಕ್ರೀಡಾ ನಿರ್ದೇಶಕ ಶಿವರಾಮ್ ರಾಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಹೊನ್ನೂರ್ ಸ್ವಾಮಿ, ಡಾ.ಮುಬಾರಕ್, ಡಾ.ಚೌಡಪ್ಪ, ಪ್ರೋ.ಎಂ.ಡಿ.ಖಣದಾಳಿ, ಕೆ.ಜಿ.ಸುಮಾ,ಬಸವರಾಜ್ ಇಳಗಾನೂರ್, ರಮೇಶ್ ರಾಯಚೂರ್, ಡಾ.ಕರಿಬಸಮ್ಮ, ಡಾ.ನಾಗರಾಜ್ ಹಾಗೂ ಭೋದಕೇತರ ಸಿಬ್ಬಂಧಿ ಹಾಜರಿದ್ದರು. ಕೆ.ಪಾಪಯ್ಯ ವಂದಿಸಿದರು. ಡಾ.ಮಲ್ಲಯ್ಯ ಕಾರ್ಯಕ್ರಮ ನಿರೂಪಿಸಿದರು.