ರಾಶಿಯಂತ್ರಕ್ಕೆ ಸಿಲುಕಿ ಮಹಿಳೆ ಸಾವು

ಭಾಲ್ಕಿ ಅ 13: ತಾಲೂಕಿನ ವರವಟ್ಟಿ (ಬಿ) ಗ್ರಾಮದಲ್ಲಿ ಇಂದು ಬೆಳಿಗ್ಗೆ ಹೊಲದಲ್ಲಿ ಸೋಯಾ ರಾಶಿ ಮಾಡುವಾಗ ರಾಶಿ ಯಂತ್ರಕ್ಕೆ ಸಿಲುಕಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.
ವರವಟ್ಟಿ (ಬಿ) ಗ್ರಾಮದ ಸಂಗೀತಾ ಶ್ರೀಧರ ಸದವಾಲೆ (32 ) ಎಂಬುವವರೇ ಮೃತ ರೈತ ಮಹಿಳೆ.
ನಾಡ ಹಬ್ಬ ಉಪವಾಸದ ದಿನದಂದು, ನಡೆದ ಈ ದುರ್ಘಟನೆ ಗ್ರಾಮಸ್ಥರಲ್ಲಿ ದಿಗ್ಭ್ರಮೆ ಉಂಟುಮಾಡಿದೆ.
ಸ್ಥಳಕ್ಕೆ ಖಟಕ ಚಿಂಚೋಳಿ ಠಾಣೆ ಪೆÇಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.
ಅತಿಯಾದ ಮಳೆಗೆ ಸಿಲುಕಿ ಅಳಿದುಳಿದ ಸೋಯಾ ಬೆಳೆ ರಾಶಿಗೆ ಈ ರೈತ ಮಹಿಳೆ ಮುಂದಾಗಿದ್ದರು ಎಂದು ತಿಳಿದುಬಂದಿದೆ.