ರಾವೂರ ಶ್ರೀಸಿದ್ದಲಿಂಗೇಶ್ವರ್ ಜಾತ್ರೆ ರದ್ದು

ವಾಡಿ:ಎ.27: ಇಂದಿನಿಂದ ಮೆ 10 ರವರೆಗೆ ನಡೆಯಬೇಕಿದ್ದ ಶ್ರೀಸಿದ್ದಲಿಂಗೇಶ್ವರ್ ಜಾತ್ರೆಯನ್ನು ಕೋವಿಡ್ 2ನೇ ಅಲೇಯಿಂದಾಗಿ ರದ್ದು ಪಡಿಸಲಾಗಿದ್ದು, ಧಾರ್ಮಿಕ, ಸಾಂಪ್ರದಾಯಿಕ ಆಚರಣೆಗಳು ಕೇವಲ 5 ಜನರಿಗೆ ಸೀಮಿತವಾಗಿರುತ್ತವೆ ಎಂದು ತಹಸೀಲ್ದಾರ್ ಉಮಾಕಾಂತ ಹಳ್ಳೇ ಹೇಳಿದರು.

ಪಟ್ಟಣ ಸಮೀಪದ ರಾವೂರ ಶ್ರೀಸಿದ್ದಲಿಂಗೇಶ್ವರ ಮಠದಲ್ಲಿ, ತಾಲ್ಲೂಕಾಡಳಿತ, ಪೋಲಿಸ್ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಶಾಂತಿ ಸಭೆಯಲ್ಲಿ ಮಾತನಾಡುತ್ತಾ, ಕಳೆದ ಬಾರಿ ಮಾಡಿದ ತಪ್ಪು ಈ ಸಲ ಮಾಡುವುದು ಬೇಡ. ಯಾವುದೇ ಕಾರಣಕ್ಕೆ ಜಾತ್ರೆಯನ್ನು ಮಾಡದೇ ಇಲಾಖೆಗೆ ಸಹಕರಿಸಬೇಕೆಂದು ಮನವಿ ಮಾಡಿದರು.

ಪಿಎಸ್‍ಐ ವಿಜಯಕುಮಾರ ಬಾವಗಿ ಮಾತನಾಡಿ, 2ನೇ ಅಲೇ ಹಾಗೂ ಸರ್ಕಾರದ ಲಾಕ್‍ಡೌನ್ ನಾಳೆಯಿಂದ 14 ದಿನಗಳವರೆಗೆ ಪ್ರಾರಂಭವಾಗುತ್ತಿದ್ದು, ಜಾತ್ರೆಗೆ ಅವಕಾಶ ಇರುವುದಿಲ್ಲ. ಸಂಪ್ರದಾಯ ಬದ್ದವಾಗಿ ಆಚರಿಸಿಕೊಂಡು ಬರುವ ಕಾರ್ಯಗಳಿಗೆ ಸೀಮಿತ ಜನರಿಗೆ ಮಾತ್ರ ಅವಕಾಶ ಇರುತ್ತದೆ. ಬ್ಯಾಂಡ್-ಬ್ಯಾಂಜೋ, ಮೆರವಣಿಗೆ, ಪಠಾಕಿ ಸಿಡಿಸುವುದಕ್ಕೆ ಅವಕಾಶವಿಲ್ಲ. ದೇವರ ದರ್ಶನಕ್ಕೆ ತೆರೆ ಎಳೆಯಲಾಗಿದೆ. ಯಾರು ಕೂಡಾ ಮಠದ ಹತ್ತಿರ ಬರಬಾರದು. ಮನೆಯಲ್ಲಿಯೇ ಪೂಜೆ ಮಾಡಬೇಕು. ಹೊರಗಡೆಯಿಂದ ಬಂದ ಭಕ್ತಾಧಿಗಳಿಗೆ ವಸತಿ ಇರುವುದಿಲ್ಲ. ಪಾರ್ಸೆಲ್ ಪ್ರಸಾದಕ್ಕೆ ಅವಕಾಶ ಇರುತ್ತದೆ ಎಂದರು.

ಪಿಡಿಓ ಕಾವೇರಿ ರಾಠೋಡ ಮಾತನಾಡಿ, ಕಳೆದ ವರ್ಷ ಜಾಣ ಕುರುಡುತನ ಪ್ರದರ್ಶನ ಮಾಡಲಾಯಿತ್ತು. ಆದರೆ, ಈ ವರ್ಷ ಯಾವುದೇ ಕಾರ್ಯ ಕೈಗೊಳ್ಳುವ ಮುನ್ನ ಮಾಹಿತಿ ನೀಡಬೇಕು. ಪಾಸ್ ನೀಡುವ ಮೂಲಕ ನಿಯಮ ಬದ್ದವಾಗಿ ಅವಕಾಶ ನೀಡುತ್ತೆವೆ. ಲಾಕ್‍ಡೌನ್ ಇರುವುದರಿಂದ ಜಾತ್ರೆ ಮಾಡಬೇಡಿ ಎಂದು ಮನವಿ ಮಾಡಿಕೊಂಡರು.

ಸಿದ್ದಲಿಂಗೇಶ್ವರ್ ಸಂಸ್ಥಾನ ಮಠದ ಕಾರ್ಯದರ್ಶಿ ಗುಂಡಣ್ಣ ಬಾಳಿ ಪ್ರಸ್ತಾವಿಕವಾಗಿ ಮಾತನಾಡಿದರು. ಮಠದ ಉತ್ತರಾಧಿಕಾರಿ ಪೂಜ್ಯ ಸಿದ್ದಲಿಂಗ ದೇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಗ್ರಾಪಂ ಅಧ್ಯಕ್ಷೆ ದೇವಕಿ ನಾರಾಯಣ, ಪ್ರೋಬೇಷನ್ರಿ ಪಿಎಸ್‍ಐ ದೇವಿಂದ್ರರೆಡ್ಡಿ, ಗ್ರಾಮಲೇಕ್ಕಿಗ ಮಾರುತಿ, ಗ್ರಾಮದ ಮುಖಂಡರಾದ ಚೆನ್ನಣ್ಣ ಬಾಳಿ, ಅಬ್ದುಲ್ ಅಜೀಜ್ ಸೇಠ್, ಅಣ್ಣರಾವ ಬಾಳಿ, ಗುರುನಾಥ ಗುದ್ದಗಲ್, ತಿಪ್ಪಣ್ಣ ವಗ್ಗರ, ಸಾಹೇಬಗೌಡ ತಳವಾರ, ಯುನುಷ ಪ್ಯಾರೇ, ಬಸವರಾಜ ಮಡ್ಡಿ, ಮಾಳಪ್ಪ ಪೂಜಾರಿ, ಮಹಿಬೂಬ ಧರಿ, ರವಿ ನಡುವಿನಕೇರಿ, ರಾಮು ಕಿರಣಗಿ, ಅಮೃತ ಗೋಗಿ ಸೇರಿದಂತೆ ವಿಶೇಷ ಪೇದೆ ದೊಡ್ಡಪ್ಪ ಪೂಜಾರಿ, ದತ್ತು ಜಾನೆ ಇದ್ದರು. ಶಿಕ್ಷಕ ಸಿದ್ದಲಿಂಗ ಬಾಳಿ ನಿರೂಪಿಸಿ ವಂದಿಸಿದರು.