ರಾವೂರ; ರಸ್ತೆ ದುರಸ್ಥಿ ಯಾವಾಗ?

ವಾಡಿ: ಏ.29: ಪಟ್ಟಣ ಸಮೀಪದ ರಾವೂರ ಗ್ರಾಮದಿಂದ ವಾಡಿ ಪಟ್ಟಣಕ್ಕೆ ಹಾದು ಹೋಗುವ ರಸ್ತೆಯು ಗುಂಡಿಗಳ ತಾಣವಾಗುತ್ತಿದ್ದು, ಜನರು ದುರಸ್ಥಿ ಕಾರ್ಯ ಯಾವಾಗ ಎಂದು ಸಂಬಂಧಪಟ್ಟವರಿಗೆ ಕೇಳುತ್ತಿದ್ದಾರೆ.

ನೂತನ ಶಹಾಬಾದ ತಾಲ್ಲೂಕಿನ ರಾವೂರ ಗ್ರಾಮದ ಮುಖ್ಯರಸ್ತೆಯು ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಕೆಲಸವು ಡಾಂಬರಿಕರಣದಿಂದ ಮಾಡಿದ್ದು ಅದು ವಾಡಿ ಪಟ್ಟಣಕ್ಕೆ ಸೇರುವ ಸ್ವಲ್ಪ ಮುಂದೆ ಸಿಮೆಂಟ ರಸ್ತೆಗೆ ಜೊಡೆಣೆ ಮಾಡಲಾಗಿದೆ. ಆದರೆ, ರಸ್ತೆಯು ದಿನದಿಂದ ದಿನಕ್ಕೆ ಹದಗೆಡುತ್ತಿದೆ. ನಿನ್ನೆ ಸುರಿದ ಮಳೆಯಿಂದ ರಸ್ತೆಯು ಚರಂಡಿಯಾಗಿ ಮಾರ್ಪಟಿತ್ತು. ಬೈಕ್ ಸವಾರನೊಬ್ಬ ಹೋಗುವಾಗ ಮೋಬೈಲ್ ಜಮಾವಣೆಗೊಂಡ ನೀರಿನಲ್ಲಿ ಮುಳಗಿತ್ತು. ಇನ್ನು ಇಲ್ಲಿ ಹಲವಾರು ಜನ ಬಿದ್ದು ನೋವು ಅನುಭವಿಸಿರುವ ಘಟನೆಗಳು ಜರುಗಿವೆ. ಈ ಕುರಿತು ಸಂಘ-ಸಂಸ್ಥೆಗಳು ರಸ್ತೆಗೆ ಮಣ್ಣು ಹಾಕಿ ಸಂಬಂಧಪಟ್ಟವರ ಗಮನ ಸೆಳೆದರು ಪ್ರಯೋಜನವಾಗಿಲ್ಲ. ಮಳೆಗಾಲದಲ್ಲಿ ಸಮಸ್ಯೆ ಇನ್ನು ಹೆಚಾಗುವ ಸಾಧ್ಯತೆಗಳಿದ್ದು ಸಂಬಂಧಪಟ್ಟವರು ದುರಸ್ಥಿ ಕಾರ್ಯಕ್ಕೆ ಮುಂದಾಗಬೇಕಿದೆ ಎಂದು ಸ್ಥಳೀಯರ ಒತ್ತಾಯವಾಗಿದೆ.