ರಾವೂರ ಮಜೀದನಲ್ಲಿ ಬಕ್ರೀದ ಶಾಂತಿ ಸಭೆ

ವಾಡಿ: ಜೂ.26: ಶಾಂತಿ ಸುವ್ಯವಸ್ಥೆ ಹಾಳಾಗುವ ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡದೇ ಶಾಂತಿಯುತವಾಗಿ ಬಕ್ರೀದ ಹಬ್ಬ ಆಚರಿಸಬೇಕೆಂದು ವಾಡಿ ಪಿಎಸ್‍ಐ ಮಹಾಂತೇಶ ಪಾಟೀಲ ಹೇಳಿದರು.

ಪಟ್ಟಣ ಸಮೀಪದ ರಾವೂರ ಗ್ರಾಮದ ಜಾಮೀಯಾ ಮಸಜೀದನಲ್ಲಿ ಪೋಲಿಸ್ ಇಲಾಖೆ ವತಿಯಿಂದ ಹಮ್ಮಿಕೊಂಡ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು. ಗೋಹತ್ಯೆ ನಿಷೇಧ ಕಾನೂನು ಜಾರಿಯಲ್ಲಿದ್ದು, ನಿಯಮ ಬದ್ದವಾಗಿ ಅನುಮತಿಸಿದ ಜಾನುವಾರು ಮತ್ತು ವಯಸ್ಸಿನ ದೃಢಿಕರಣ ಸಂಬಂಧಪಟ್ಟ ಅಧಿಕಾರಿಗಳಿಂದ ಅನುಮತಿ ಪತ್ರ ಪಡೆದು ಬಕ್ರೀದ ಹಬವನ್ನು ಆಚರಿಸಬೇಕು, ಪ್ರಾಣಿಗಳ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯಬಾರದು. ಕಾನೂನು ಪಾಲನೆ ಮಾಡದೇ ಇದ್ದರೇ ಮುಲ್ಲಾಜಿಲ್ಲದೆ ಕ್ರಮ ವಹಿಸಲಾಗುವುದು ಎಂದರು.

ಗ್ರಾಮದ ಹಿರಿಯ ಮುಖಂಡ ಶ್ರೀನಿವಾಸ ಸಗರ ಮಾತನಾಡಿ, ಬಕ್ರೀದ ಹಬ್ಬವು ಧಾರ್ಮಿಕ ಹಿನ್ನೆಲೆ ಹಾಗೂ ಇತಿಹಾಸವುಳ್ಳ ಹಬ್ಬವಾಗಿದೆ. ಮುಸ್ಲಿಂಮರಿಗೆ ರಂಜಾನ್ ಮತ್ತು ಬಕ್ರೀದ ಪವಿತ್ರ ಹಬ್ಬಗಳಾಗಿವೆ. ಪ್ರವಾದಿ ಇಸ್ಮಾಯಿಲ ಅವರ ಸವಿ ನೆನಪಿಗಾಗಿ ಹಬ್ಬವನ್ನು ಆಚರಿಸುವ ಹಿನ್ನೆಲೆ ಇದೆ. ಗ್ರಾಮದಲ್ಲಿ ಯಾವುದೇ ಜಾತಿ ಭೇದಬಾವ ಇಲ್ಲದೆ ಹಬ್ಬಗಳನ್ನು ಆಚರಿಸುತ್ತಾ ಬಂದಿದ್ದೆವೆ. ಸಣ್ಣ ಪುಟ್ಟ ಘಟನೆ ಬಿಟ್ಟರೇ ಗ್ರಾಮವು ಶಾಂತಿಗೆ ಹೆಸರು ವಾಸಿಯಾಗಿದೆ ಎಂದರು.

ಜಿ.ಪಂ ಮಾಜಿ ಸದಸ್ಯ ಗುಂಡಣ್ಣ ಬಾಳಿ ಮಾತನಾಡಿದರು. ನ್ಯಾಯವಾದಿ ಮಲಿಕಪಾಶಾ ಮೌಜನ್ ಪ್ರಸ್ತಾವಿಕವಾಗಿ ಮಾತನಾಡಿದರು. ಸಮಾಜದ ಹಿರಿಯ ಮುಖಂಡ ಅಬ್ದುಲ ಅಜೀಜ ಸೇಠ, ಹಿರಿಯ ಮುಖಂಡ ಶೇಖ ಅಹ್ಮದ ಕರ್ನೂಲ, ಗ್ರಾ.ಪಂ ಸದಸ್ಯ ಯುನುಷ ಪ್ಯಾರೆ, ವಿಶೇಷ ಪೇದೆ ಲಕ್ಷ್ಮಣ, ಶೇಖ ಮಹೆಬೂಬ, ಸಾಹೇಬಗೌಡ ತಳವಾರ, ಛೋಟುಮಿಯ್ಯಾ ಆಡಕಿ, ಮಹಿಬೂಬ ಧರಿ, ದೇವಿಂದ್ರ ತಳವಾರ, ಚಂದ್ರಕಾಂತ ಗುದ್ದಗಲ್, ಅಮೀರ ಮೂಸಾವಾಲೇ, ಪುಂಡಲಿಕ್ ಕೆಸಬಳ್ಳಿ, ಅಲ್ಲಾಬಕ್ಷ ಮೌಜನ್, ಜಾವೀದ ಕರ್ನೂಲ, ಖಾಜಾಮಿಯ್ಯಾ ದಂಡೋತ್ತಿ, ರುಕುಮ ಮುದೇಲ್, ಗುರು ಗುತ್ತೇದಾರ, ಸಾಬಣ್ಣ ತುಮಕೂರ, ಬಾಬಾ ಮುದೇಲ, ರಹೀಮಾನ್ ಪೀರಾವಾಲೇ, ಮಹಮ್ಮದ ದಿಗ್ಗಾಂವ, ರಾಮು ಕಿರಣಗಿ, ಬಾಬು ಹಳ್ಳಿ, ಸಾದಿಕ ಮಾಸುಲದಾರ, ಖದೀರ ಮೌಜನ್, ಆಜಮಖಾನ್, ಮೋಸಿನ ಆಡಕಿ, ಮಹಿಬೂಬಪಾಶಾ ಮೌಜನ್, ರಹೀಮಾನ ಪಟೇಲ್ ಸೇರಿದಂತೆ ಅನೇಕರು ಇದ್ದರು.