ರಾವೂರ: ಆಮೆಗತಿಯಲ್ಲಿ ನೀರು ಶುದ್ದಿಕರಣ ಘಟಕ

ವಾಡಿ:ನ.4: ಪಟ್ಟಣ ಸಮೀಪದ ರಾವೂರ ಗ್ರಾಮದ ದಲಿತ ಬಡಾವಣೆಯಲ್ಲಿ ನೂತನವಾಗಿ ನಿರ್ಮಾಣ ಮಾಡುತ್ತಿರುವ ಕುಡಿಯುವ ಶುದ್ದ ನೀರಿನ ಘಟಕದ ಕೆಲಸವು ಪಿಡಿಓ ಕಾವೇರಿ ರಾಠೋಡ ನಿಶ್ಕಾಳಜಿಯಿಂದ ಆಮೇಗತಿಯಲ್ಲಿ ಸಾಗುತ್ತಿದೆ ಹಾಗೂ ಕಳಪೆ ಮಟ್ಟದಿಂದ ಕೂಡಿದೆ ಎಂದು ದಲಿತ ಯುವ ಮುಖಂಡರಾದ ಶಿವಲಿಂಗ ನಡುವೀನಕೇರಿ, ಬಸವರಾಜ, ತಿಪ್ಪಣ್ಣ ಆರೋಪಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಮಾರ್ಚ 2019ರಲ್ಲಿ ಬಾಲವಿಕಾಸ ಸಮಿತಿಯ ಜೊತೆಗೆ ಕಾನೂನಾತ್ಮಕ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. 14ನೇ ಹಣಕಾಸು ಯೋಜನೆಯಡಿ ಮೊದಲ ಕಂತಿನಲ್ಲಿ 50 ಸಾವಿರ ರೂ. ಮಂಜೂರ ಪಡೆಯಲಾಗಿದೆ. ಆದರೆ, ಕೆಲಸ ಮಾತ್ರ ಆಮೇಗತಿಯಲ್ಲಿ ಸಾಗುತ್ತಿದೆ. ಅಲ್ಲದೇ ಕಾಮಗಾರಿಯು ಕಳಪೆ ಮಟ್ಟದಿಂದ ಕೂಡಿದೆ. ಒಪ್ಪಂದದ ಅವಧಿಯ ಕಾಲಾವಕಾಶ ಮುಗಿಯುವುದಕ್ಕೆ ಒಂದಿದ್ದು, ಪಿಡಿಓ ಸಂಪೂರ್ಣ ಬೇಜವ್ದಾರಿ ತೊರುತ್ತಿದ್ದಾರೆ. ಇದರಿಂದ ಜನರಿಗೆ ರಾಡಿ ನೀರೆ ಗತಿಯಾಗಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ. ಆದಷ್ಟು ಬೇಗನೆ ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡದೇ ಇದ್ದರೇ ತಾಲ್ಲೂಕು ಪಂಚಾಯತಿ ಎದುರು ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.