ರಾವತ್ ನಿಧನಕ್ಕೆ ಪಾಕ್ ಸಂತಾಪ

ನವದೆಹಲಿ, ಡಿ ೯- ಸಿಡಿಸಿ ಬಿಪಿನ್ ರಾವತ್ ಅವರ ನಿಧನಕ್ಕೆ ಪಾಕಿಸ್ತಾನದ ಟ್ವಿಟರ್ ಪ್ಲಾಟ್‌ಫಾರ್ಮ್ ನಲ್ಲಿ ಪ್ರತಿಕ್ರಿಯಿಸಿ ಸಂತಾಪ ಸೂಚಿಸಿದೆ.

ಈ ಸುದ್ದಿ ಕೇಳಿ ಆಘಾತಗೊಂಡಿದ್ದೇವೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ. ಪಾಕಿಸ್ತಾನ ಸೇನಾ ಮುಖ್ಯಸ್ಥ ಬಜ್ವಾ, ಜಂಟಿ ಮುಖ್ಯಸ್ಥರ ಸಮಿತಿಯ ಅಧ್ಯಕ್ಷ ಜನರಲ್ ನದೀಮ್ ಘಟನೆಯ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಹೆಲಿಕಾಪ್ಟರ್‌ನಲ್ಲಿದ್ದವರ ಸಾವಿಗೆ ಸಂತಾಪ ಸೂಚಿಸಿದ್ದಾರೆ.

ಸೇನಾ ತಂತ್ರ ಮತ್ತು ಯೋಜನೆಯಲ್ಲಿ ಅವರನ್ನು ಮೀರಿಸುವವರು ಸದ್ಯಕ್ಕೆ ಯಾರು ಇಲ್ಲ, ಪಾಕ್ ನ ಎಲ್ಲ ಕುಟಿಲ ತಂತ್ರಗಳನ್ನು ವಿಫಲಗೊಳಿಸಿದ್ದರ ಹಿಂದೆ ರಾವತ್ ಅವರ ಕಾರ್ಯತಂತ್ರ ಅಡಗಿತ್ತು. ರಾವತ್ ಸುದ್ದಿ ಪ್ರಕಟಿಸಿರುವ ಪಾಕ್ ಸುದ್ದಿ ಮಾಧ್ಯಮಗಳು ಅವರ ಹಿನ್ನಲೆ ಏನು ಎಂಬ ಲಿಂಕ್ ನ್ನು ಕೂಡ ಪ್ರಕಟಿಸಿದೆ.