ಸಂಜೆವಾಣಿ ವಾರ್ತೆ
ಸಿರುಗುಪ್ಪ, ಜು.22: ತಾಲೂಕಿನ ರಾರಾವಿ ಗ್ರಾಮ ಪಂಚಾಯಿತಿಗೆ 30 ತಿಂಗಳ ಎರಡನೇ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಗಳಿಗೆ ಚುನಾವಣೆ ನಡೆಯಿತು.
ಅಧ್ಯಕ್ಷ ಸ್ಥಾನಕ್ಕೆ ಅನುಸೂಚಿತ ಪಂಗಡ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮೀಸಲಾತಿ ನಿಗದಿಯಾಗಿತ್ತು. ಇಲ್ಲಿ ಒಟ್ಟು 17 ಸದಸ್ಯರ ಬಲಾಬಲ ಇದ್ದು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಅಭ್ಯರ್ಥಿ ಗುಬ್ಬಿ ಹನುಮಂತಮ್ಮ ಗಂಡ ಪಕೀರಪ್ಪ 10 ಮತಗಳನ್ನು ಪಡೆದು ವಿಜೇತರಾದರು, ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಆರ್.ಲಕ್ಷ್ಮಿ ಗಂಡ ರಾಘವೇಂದ್ರರಾವ್ 9 ಮತಗಳನ್ನು ಪಡೆಯುವ ಮೂಲಕ ವಿಜೇತರಾಗಿದ್ದಾರೆಂದು ಚುನಾವಣಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಹೇಶ್ ಘೋಷಣೆ ಮಾಡಿದರು.
ವಿಜೇತ ಅಭ್ಯರ್ಥಿಗಳು ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳಾಗಿದ್ದರಿಂದ ಘೋಷಣೆಯ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಮತ್ತು ಕಾರ್ಯಕರ್ತರು ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಹಿರಿಯ ಮುಖಂಡ ಚೊಕ್ಕ ಬಸವನಗೌಡ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್. ಕರಿಬಸಪ್ಪ, ಮುಖಂಡರಾದ ದೊಡ್ಡನಗೌಡ, ಜಯರಾಮರೆಡ್ಡಿ, ಹಗರೆಪ್ಪ, ನಟರಾಜ, ಕೆ.ಶೇಖರಪ್ಪ, ಕರಡಿ ಮಲ್ಲಿಕಾರ್ಜುನ, ಧರ್ಮನಗೌಡ, ಕೆ.ಬಸವನಗೌಡ, ಈರಣ್ಣ, ಜಿ.ಯಲ್ಲಪ್ಪ ಹಾಗೂ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಅಭಿಮಾನಿಗಳು ಮತ್ತು ಗ್ರಾಮ ಪಂಚಾಯತಿಯ ಎಲ್ಲಾ ಸದಸ್ಯರು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮಾಬುನ್ನಿ, ಪಿಡಿಒ ಸಾಕೀರ್ ಮತ್ತು ಪಂಚಾಯಿತಿ ಸಿಬ್ಬಂದಿ ವರ್ಗದವರು ಮತ್ತು ಗ್ರಾಮಸ್ಥರು ಇದ್ದರು.