ರಾರಾಜಿಸುತ್ತಿರುವ ಬ್ಯಾನರ್‍ಗಳು

ಧಾರವಾಡ, ಏ.10: ಮತದಾರರ ಜಾಗೃತಿ ಹಿನ್ನೆಲೆಯಲ್ಲಿ ಜಿಲ್ಲೆಯ ನಗರ ಪಟ್ಟಣಗಳಲ್ಲಿ ನೂರಾತು ಬೃಹತ್ ಪ್ರದರ್ಶನ ಫಲಕಗಳಲ್ಲಿ ಮತದಾರರ ಜಾಗೃತಿ ಕುರಿತಾದ ಬ್ಯಾನರ್‍ಗಳು ಸಾರ್ವಜನಿಕರ ಗಮನ ಸೆಳೆಯುತ್ತಿವೆ. ಜಿಲ್ಲಾ ಪಂಚಾಯತ್‍ನ ಸ್ವೀಪ್ ಸಮಿತಿ ಅಡಿಯಲ್ಲಿ ವಾರ್ತಾ ಇಲಾಖೆಯ 50 ಫಲಕಗಳಲ್ಲಿ ಹಾಗೂ ಇನ್ನಿತರೇ ಇಲಾಖೆಗಳಿಗೆ ಸೇರಿದ ಹಲವರು ಫಲಕಗಳಲ್ಲಿ ಮತದಾರರ ಜಾಗೃತಿ ಬ್ಯಾನರ್‍ಗಳನ್ನು ಅಳವಡಿಸಲಾಗಿದೆ.