ರಾಯ ಸಂಸ್ಥೆಯಿಂದ ಕಕ ವಿಮೋಚನಾ : ವಿಷ್ಣು ಹುಟ್ಟು ಹಬ್ಬ ಆಚರಣೆ

ರಾಯಚೂರು.ಸೆ.೧೯- ರಾಯ ಸ್ವಯಂ ಸೇವಾ ಸಂಸ್ಥೆಯಿಂದ ಶನಿವಾರ ನಗರದ ತಿಮ್ಮಾಪೂರು ಪೇಟೆ ಸರಕಾರಿ ಶಾಲೆಯಲ್ಲಿ ಕಲ್ಯಾಣ ಕರ್ನಾಟಕ ವಿಮೋಚನಾ ದಿನ ಮತ್ತು ವಿಷ್ಣುವರ್ಧನ್ ರವರ ೭೨ ನೆಯ ಜನ್ಮದಿನೋತ್ಸವ ಆಚರಿಸಲಾಯಿತು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಾಹಿತಿ ಪಲುಗುಲ ನಾಗರಾಜ ರವರು ಮಾತನಾಡುತ್ತ ಕಲ್ಯಾಣ ಕರ್ನಾಟಕ ಕೇವಲ ಹೆಸರಿಗೆ ಕಲ್ಯಾಣ ಪದ ಬಳಕೆ ಆಗದಿರಲಿ ಇಲ್ಲಿನ ಸಮಸ್ಯೆಗಳ ಬಗ್ಗೆ ಅಭಿವೃದ್ಧಿಗೆ ಮುಂದಾಗಲಿ ಎಂದರು. ಕಲ್ಯಾಣ ಕರ್ನಾಟಕ ಅಂದರೆ ಕಲ್ಬುರ್ಗಿ ಮಾತ್ರ ಸೀಮಿತವಾಗಿದೆ ಮುಖ್ಯ ಮಂತ್ರಿಗಳು ಕಲ್ಯಾಣ ಕರ್ನಾಟಕದ ಇತರೆ ಜಿಲ್ಲೆಗಳಲ್ಲಿ ಭಾಗವಹಿಸಿ ವಿಮೋಚನಾ ದಿನ ಆಚರಿಸಬೇಕು ಎಂದರು. ವಿಷ್ಣುವರ್ಧನ್ ರವರು ನಾಲ್ಕು ದಶಕಗಳ ಕಾಲ ಕನ್ನಡ ಚಿತ್ರರಂಗದ ಸೇವೆ ಸಲ್ಲಿಸಿದ್ದಾರೆ ಅವರು ಇಂದು ನಮ್ಮಲ್ಲಿಲ್ಲ ಆದರೆ ಸರಕಾರಗಳು ಸ್ಮಾರಕ ಮಾಡದೇ ಇರುವದು ಬೇಸರದ ಸಂಗತಿ ಎಂದರು.
ರಾಯ ಸೇವಾ ಸಂಸ್ಥೆಯ ಅಧ್ಯಕ್ಷ ಮಂಜುನಾಥ ನಾಡಗೌಡ ಮಾತನಾಡಿ ನಮ್ಮ ಸಂಸ್ಥೆ ಮೂಲಕ ಈ ಶಾಲೆಯ ಮಕ್ಕಳಿಗೆ ಊಟದ ತಟ್ಟೆ , ಗ್ಲಾಸ್ ಮತ್ತು ನೋಟ್ ಬುಕ್ ನೀಡುತ್ತಿದ್ದೇವೆ ಮಕ್ಕಳು ಇದನ್ನು ಬಳಸಿಕೊಳ್ಳಲು ತಿಳಿಸಿದರು.ವೇದಿಕೆಯಲ್ಲಿ ತಿಮ್ಮಪ್ಪ, ಕೆ.ಟಿ.ಶ್ರೀನಿವಾಸ, ಭೀಮಣ್ಣ ಒಪ್ಪುಲ, ರಂಗನಾಥ, ಹನುಮಂತ ಯಾದವ, ಶ್ರೀಹರಿ, ರಾಘವೇಂದ್ರ, ವೆಂಕಟೇಶ ರವರು ಉಪಸ್ಥಿತಿ ಇದ್ದರು.ಸುನಿತಾ,ಭಾರತಿ ವಿಧ್ಯಾರ್ಥಿನಿಯರು ಪ್ರಾರ್ಥಿಸಿದರು ಶಿಕ್ಷಕಿ ಗೀತಾರಾಣಿ ನಿರೂಪಣೆ ಮಾಡಿದರು. ಶಾಲೆಯ ಶಿಕ್ಷಕ ಬಳಗ ಮಕ್ಕಳು ಹಾಜರಿದ್ದರು.