ರಾಯರ 352 ನೇ ಪೂರ್ವಾರಾಧನೆ-ವಿವಿಧ ಧಾರ್ಮಿಕ ಕಾರ್ಯಕ್ರಮ


ಸಂಜೆವಾಣಿ ವಾರ್ತೆ
ಹೊಸಪೇಟೆ, ಸೆ.01:  ನಗರದ ವಿವಿಧ ಶ್ರೀರಾಘವೇಂದ್ರ ಸ್ವಾಮಿ ಮಠಗಳಲ್ಲಿ ಶ್ರೀರಾಯರ 352 ನೇ ಆರಾಧನೋತ್ಸವ ನಿಮಿತ್ತ ಗುರುವಾರ ಪೂರ್ವಾರಾಧನೆ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿತು.
ಸ್ಥಳೀಯ ವಿಜಯಚಿತ್ರ ಮಂದಿರ ಪ್ರದೇಶದ ಶ್ರೀರಾಯರ ಮಠ, ಗಾಂಧಿ ಕಾಲೋನಿ, ರಾಣಿಪೇಟೆ, ಸೇರಿದಂತೆ ವಿವಿಧೆಡೆ ಶ್ರೀರಾಘವೇಂದ್ರ ಸ್ವಾಮಿಗಳ ಆರಾಧನೋತ್ಸವ ನಿಮಿತ್ತ ಪೂರ್ವಾರಾಧನೆ ನಡೆಯಿತು.  ಬೆಳಿಗ್ಗೆ ರಾಯರ ಬೃಂದಾವನಕ್ಕೆ ಫಲ ಪಂಚಾಮೃಅಭಿಷೇಕ, ಸರ್ವಸೇವೆ, ಮಹಾಪೂಜೆ, ಕನಕಾಭಿಷೇಕ ನೆರವೇರಿಸಲಾಯಿತು. ಬಳಿಕ ಹಸ್ತೋದಕ, ನೇವೈದ್ಯ, ಮಹಾಮಂಗಳಾರತಿ ಜರುಗಿತು. ಭಜನೆ, ಸಾಮೂಹಿಕ ಅಷ್ಠೋತ್ತರ‌ ಪಾರಾಯಣ ಮಾಡಲಾಯಿತು. ಆರಾಧನೆ ನಿಮಿತ್ತ ಬಂದ ಭಕ್ತರಿಗೆ ಅನ್ನ ಸಂತರ್ಪಣೆ‌ ನಡೆಯಿತು. ರಾಜ್ಯದಲ್ಲಿ ವಿಶೇಷವಾಗಿ ಮಳೆ ಬೆಳೆಯಾಗಿ ಸಮೃದ್ಧಿಹೊಂದಲಿ ಎಂದು ಪ್ರಾರ್ಥನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀಮಠದ ಗುರುರಾಜ್ ದಿಗ್ಗಾವಿ, ನರಸಿಂಹ ಮೂರ್ತಿ, ಭೀಮಸೇನಾಚಾರ್ಯ  ಟೀಕಾಚಾರ್ಯ, ಕೃಷ್ಣಮೂರ್ತಿ, ಪವನಾಚಾರ್ಯ, ದಾಸ ಸಾಹಿತ್ಯ ಪ್ರಾಜೆಕ್ಟ್ ಜಿಲ್ಲಾ ಕೋ-ಆರ್ಡಿನೇಟರ್ ಅನಂತ ಪದ್ಮನಾಭ ಇತರರಿದ್ದರು.