ರಾಯರ ಆರಾಧನಾ ಮಹೋತ್ಸವ


ಮುನವಳ್ಳಿ,ಆ.31: ಪಟ್ಟಣದ ಶ್ರೀ ರಾಘವೇಂದ್ರಸ್ವಾಮಿ ದೇವಸ್ಥಾನದಲ್ಲಿ 352 ನೇ ಆರಾಧನಾ ಮಹೋತ್ಸವ ಅ.2 ರವರೆಗೆ ವಿಜೃಂಭಣೆಯಿಂದ ಆಚರಿಸಲಾಗುವುದು ಶುಕ್ರವಾರ ದಿ. 1ರಂದು ಮಧ್ಯಾರಾಧನೆ, ಶನಿವಾರ 2ರಂದು ಉತ್ತರಾರಾಧನೆ ಅಂಗವಾಗಿ ಬೆಳಗ್ಗೆ 7-30 ಗಂಟೆಗೆ ಅಷ್ಟೋತ್ತರ, 8-30 ಗಂಟೆಯಿಂದ 11 ಗಂಟೆಯವರೆಗೆ ಪಂಚಾಮೃತ ಅಭಿಷೇಕ, ಅಲಂಕಾರ, ಮಹಾಪೂಜೆ ನಂತರ 11-30 ರಿಂದ 12-30 ಗಂಟೆಯವರೆಗೆ ಶ್ರೀ ಸತ್ಯನಾರಾಯಣ ಪೂಜೆ, ನೈವೇದ್ಯ ಮತ್ತು ಮಹಾಮಂಗಳಾರತಿ, ಸಂಜೆ 6 ಗಂಟೆಗೆ ಪಲ್ಲಕ್ಕಿ ಸೇವೆ, ದೀಪೋತ್ಸವ, ಭಜನೆ, ಅಷ್ಟಾವಧಾನ ಸೇವೆ, ರಾತ್ರಿ 9 ಗಂಟೆಗೆ ಮುಕ್ತಾಯ ಸಮಾರಂಭ ನಡೆಯಲಿದೆ, ಶ್ರೀ ಮಠದ ಮಹಿಳಾ ಭಜನಾ ಮಂಡಲದವರಿಂದ ಆರಾಧನಾ ಮಹೋತ್ಸವದ ಮೂರು ದಿನ ಸಂಜೆ 6-30 ಕ್ಕೆ ತಾರತಮ್ಯ ಪ್ರಕಾರ ಭಜನೆ ಜರಗುವದು, 3 ದಿನ ಸಂಜೆ ಹುಬ್ಬಳ್ಳಿಯ ವಾಸುದೇವ ಆಚಾರ್ಯ ಸಾಂಗ್ಲಿ ಇವರಿಂದ ಗುರುವಾರ ಶುಕ್ರವಾರ ಶನಿವಾರ ಸಂಜೆ 6 ರಿಂದ 8 ರವರೆಗೆ ಪ್ರವಚನ ಜರಗುವದು. ಸುತ್ತಮುತ್ತಲಿನ ಬ್ರಾಹ್ಮನ ಸಮಾಜದವರು ಭಕ್ತಾದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ತನು,ಮನ,ಧನದಿಂದ ಸೇವೆ ಸಲ್ಲಿಸಿ ಯಶಸ್ವಿಗೊಳಿಸಲು ಬ್ರಾಹ್ಮನ ಸಮಾಜದ ಅಧ್ಯಕ್ಷ ಹೆಬಸೂರ ಪ್ರಕಟಣೆಯಲ್ಲಿ ತಿಳಿಸಿರುವರು.