ರಾಯಣ್ಣ ತತ್ವ ಸಿದ್ದಾಂತಗಳು ನಮಗೆಲ್ಲ ದಾರಿದೀಪ

ಬಸವಕಲ್ಯಾಣ:ಡಿ.30: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರು ಬ್ರೀಟಿಷರ ವಿರುದ್ಧ ಹೋರಾಡಿದ ಕೆಚ್ಚೆದೆಯ ಸ್ವಾತಂತ್ರ್ಯ ಯೋಧ, ರಾಯಣ್ಣನವರು ಸ್ವಾತಂತ್ರ್ಯಕ್ಕಾಗಿ ಹೋರಾಡಿ ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಮಹಾನ ವ್ಯಕ್ತಿಯಾಗಿದ್ದಾರೆ ಅವರ ಬದುಕು ಸ್ಪೂರ್ತಿದಾಯಕ ಎಂದು ಮಾಜಿ ಸಚಿವ ರಾಜಶೇಖರ ಬಿ. ಪಾಟೀಲ ಹೇಳಿದರು.
ತಾಲೂಕಿನ ರಾಂಪೂರವಾಡಿಯಲ್ಲಿ ಗುರುವಾರ ಸಂಜೆ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಅವರ ಅಭಿಮಾನಿ ಬಳಗದ ವತಿಯಿಂದ ಆಯೋಜಿಸಿರುವ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಅವರ ಮೂರ್ತಿ ಪ್ರತಿಷ್ಠಾಪನೆಯ ಸಮಾರಂಭದಲ್ಲಿ ಮೂರ್ತಿ ಅನಾವರಣಗೊಳಿಸಿ ಮಾತನಾಡಿ, ಸಂಗೊಳ್ಳಿ ರಾಯಣ್ಣನವರ ಬದುಕು ಮತ್ತು ಹೋರಾಟ ಚರಿತ್ರಾರ್ಹ ಮಾತ್ರವಲ್ಲ, ನಿರಂತರ ಸ್ಫೂರ್ತಿದಾಯಕವೂ ಆಗಿದೆ. ಅವರ ಬದುಕು, ಹೋರಾಟ, ಸಾಹಸ, ತತ್ವ, ಸಿದ್ಧಾಂತಗಳನ್ನು ನಮ್ಮೆಲ್ಲರಿಗೂ ದಾರಿ ದೀಪವಾಗಿ ಅವರ ತತ್ವ ಆದರ್ಶಗಳು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಸಾರ್ವತ್ರಿಕ ವಿಧಾನ ಸಭಾ ಚುನಾವಣೆಯ ಮುಂಚೆ ಕಾಂಗ್ರೇಸ್ ಪಕ್ಷ ನೀಡಿದ ಗ್ಯಾರಂಟಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಈಡೇರಿಸುವ ಮೂಲಕ ಎಲ್ಲಾ ಸಮಾಜ, ವರ್ಗದವರಿಗೂ ನ್ಯಾಯ ನೀಡಿ ರಾಜ್ಯ ಅಭಿವೃದ್ದಿಯ ಪಥದತ್ತ ಸಾಗಿಸುತ್ತಿದ್ದಾರೆ. ಅಭಿವೃದ್ದಿಗಾಗಿ ಅನುದಾನ ತರುವೆ, ಕ್ಷೇತ್ರದ ಕಷ್ಟ-ಸುಖಗಳಲ್ಲಿ ಸದಾ ಭಾಗಿಯಾಗಿ ನಿಮ್ಮ ಸೇವೆ ಮಾಡಲು ಬದ್ದ ಎಂದು ತಿಳಿಸಿದರು.
ಈ ವೇಳೆ ಪೂಜ್ಯ ಹುಲಿಜಂತಿ ಮಾಳಿಂಗರಾಯ ಸ್ವಾಮೀಜಿ ಸಾನಿಧ್ಯ ವಹಿಸಿದರು. ಪ್ರಮುಖರಾದ ಗ್ರಾಪಂ ಅಧ್ಯಕ್ಷ ಚಂದ್ರಕಾಂತ ಬೋಳಸೂರೆ, ಶ್ರೀನಿವಾಸರೆಡ್ಡಿ ಕಮಲಾಪುರೆ, ಶಿವರಾಜ ಗಂಗಶೆಟ್ಟಿ, ಪ್ರಕಾಶ ಕಾಡಗೊಂಡ, ಪ್ರದೀಪ ಬೇಂದ್ರೆ, ಗುಂಡಪ್ಪ ಗೊರ್ಟೆ, ಅಶೋಕ ಗೊರ್ಟೆ, ಕಲ್ಲಪ್ಪ ಮಾಸ್ಟರ್, ರಾಮಣ್ಣ ತೆಳಕುಂಟಿ, ಶ್ರೀಧರ ತೆಲಂಗ, ಆನಂದ ಬೋಳಸೂರೆ, ಶಿವಾನಂದ ಹುಡಗಿ, ನಾರಾಯಣ ರಾಂಪುರೆ ಸೇರಿದಂತೆ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಅವರ ಅಭಿಮಾನಿ ಬಳಗದವರು, ಸ್ಥಳೀಯ ಮುಖಂಡರು ಸೇರಿದಂತೆ ಗ್ರಾಮಸ್ಥರು ಪ್ರಮುಖರು ಉಪಸ್ಥಿತರಿದ್ದರು.