ರಾಯಣ್ಣ-ಕನಕದಾಸರ ಭವನ ನಿರ್ಮಿಸಲು ಒತ್ತಾಯ

ಕಲಬುರಗಿ,ಮೇ.22-ಭಕ್ತಶ್ರೇಷ್ಠ ಕನಕದಾಸ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಅವರ ಭವನಗಳನ್ನು ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರ ಮತ್ತು ಹಳ್ಳಿಗಳಲ್ಲಿ ನಿರ್ಮಿಸುವಂತೆ ಹೈದ್ರಾಬಾದ ಕರ್ನಾಟಕ ಗೊಂಡ, ರಾಜಗೊಂಡ, ಕಾಡುಕುರುಬ, ಜೇನು ಕುರುಬ ಪ.ಪ. ಸಂಘ ಶಾಸಕ ಎಂ.ವೈ.ಪಾಟೀಲ ಅವರಿಗೆ ಮನವಿಪತ್ರ ಸಲ್ಲಿಸಿ ಒತ್ತಾಯಿಸಿದೆ.
ಜಿಲ್ಲೆಯ ಪ್ರತಿ ತಾಲ್ಲೂಕು ಮತ್ತು ಗ್ರಾಮಗಳಲ್ಲಿ ಭವನಗಳನ್ನು ನಿರ್ಮಾಣ ಮಾಡುವುದರಿಂದ ಅವರ ಹೆಸರು ಶಾಶ್ವತವಾಗಿರಲು ಸಹಕಾರಿಯಾಗುತ್ತದೆ. ಹಾಗಾಗಿ ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕೆಂದು ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ಎಸ್.ಎಂ.ರಾಯಪಲ್ಲಿ, ಲಕ್ಷ್ಮಣರಾವ ಪೊಲೀಸ್, ಶಿವಾಜಿ ಎಸ್.ಪಟ್ಟಣ ಇದ್ದರು.