ರಾಯಣ್ಣನ ದೇಶಭಕ್ತಿ ಸ್ಮರಣೀಯ

ನವಲಗುಂದ,ಆ.29: ರಾಯಣ್ಣನ ದೇಶಭಕ್ತಿಯನ್ನು ಪ್ರತಿಯೊಬ್ಬರು ಅನುಸರಿಸಿ ಒಗ್ಗಟ್ಟಿನಿಂದ ಎಲ್ಲ ಕೆಲಸವನ್ನು ಮಾಡಬೇಕೆಂದು ಮಾಜಿ ಶಾಸಕ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಅಶೋಕ ಪಟ್ಟಣ ಹೇಳಿದರು.
ಅವರು ಪಟ್ಟಣದ ಗಾಂಧಿ ಮಾರ್ಕೆಟ್‍ನಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತ್ಯೋತ್ಸವ ಹಾಗೂ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂಗೊಳ್ಳಿ ರಾಯಣ್ಣನ ನಡೆದುಬಂದ ದಾರಿಯನ್ನು ಅನೇಕರು ಹೇಳಿದ್ದಾರೆ. ಕಿತ್ತೂರ ಸಂಸ್ಥಾನ ನಾಡು ನುಡಿಗಾಗಿ ಆತನ ಹೋರಾಟ ಅವಿಸ್ಮರಣೆಯವಾಗಿದೆ ಎಂದು ಹೇಳಿದರು. ಇನ್ನು ರಾಜ್ಯ ಹಾಗೂ ದೇಶದಲ್ಲಿ ಕಾಂಗ್ರೆಸ್ ಜನಪರ ಯೋಜನೆಗಳನ್ನು ಸರಕಾರ ಈ ಹಿಂದೆಯೇ ತೆಗೆದುಕೊಂಡು ಬಂದಿದೆ. ಅದನ್ನು ಬಿಟ್ಟು ಇವತ್ತಿನ ಯುವಕರು ಮೋದಿ ಜಪ ಮಾಡುತ್ತಿದ್ದಾರೆ. ಯುವಕರಿಗೆ 18 ವರ್ಷಕ್ಕೆ ಮತದಾನವನ್ನು ನೀಡಿರುವುದೇ ಕಾಂಗ್ರೆಸ್ ಸರಕಾರ ಎಂಬುದನ್ನು ಮರೆತಿರುತ್ತಾರೆಂದು ಹೇಳಿದರು.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಫೌಂಡೇಷನ್ ಸಂಸ್ಥಾಪಕ ಹಾಗೂ ಮಾಜಿ ಜಿ.ಪಂ ಉಪಾಧ್ಯಕ್ಷ ಶಿವಾನಂದ ಕರಿಗಾರ ಮಾತನಾಡಿ ಸಂಗೊಳ್ಳಿ ರಾಯಣ್ಣನ ಸ್ಫೂರ್ತಿ ನಮ್ಮಗೆಲ್ಲರಿಗೂ ಸಿಗುವಂತಾಗಬೇಕು ಎಂದರು.
ಅತಿಥಿಗಳಾಗಿ ಆಗಮಿಸಿದ ಮಾಜಿ ಸಚಿವ ಕೆ.ಎನ್.ಗಡ್ಡಿ ಮಾತನಾಡಿದರು. ಪಟ್ಟಣದ ಅಜಾತ ನಾಗಲಿಂಗ ಸ್ವಾಮಿ ಮಠದ ವೀರೇಂದ್ರ ಸ್ವಾಮೀಜಿಯವರು ಸಾನಿದ್ಯ ವಹಿಸಿದ್ದರು.
ಮುಖಂಡರಾದ ಡಾ.ಸುರೇಶ ಕಮ್ಮಾರ, ರಾಜಶೇಖರ ಮೆಣಸಿನಕಾಯಿ, ಅನೀಲಕುಮಾರ ಪಾಟೀಲ, ವಿಜಯಗೌಡ ಪಾಟೀಲ, ಬಸವರಾಜ ಗುರಿಕಾರ, ವಿಜಲಯಕ್ಷ್ಮೀ ಕೆ. ಪಾಟೀಲ, ಗೌರಮ್ಮ ನಾಡಗೌಡ್ರ, ಸಿರಾಜ ಧಾರವಾಡ, ಚೇತನ ಹಿರೇಕೆರೂರ, ಶಿವಾನಂದ ಮುತ್ತಣ್ಣವರ, ಮಾಲತೇಶ ಗೊರವರ, ಆನಂದ ಕೆಸರಪ್ಪನವರ, ಹನಮಂತ ಕರಿಗಾರ, ಸದಾನಂದ ಡಂಗನವರ, ಚಂಬಣ್ಣ ಹಾಳದೋಟರ, ಬಾಬಾಜಾನ ನದಾಫ, ಸುರೇಶ ಜೆಟ್ಟೆನ್ನವರ, ಸದಾನಂದ ಕೆಂಚಪ್ಪನವರ, ಸುರೇಶ ಗೋಕಾರ, ಡಿ.ಡಿ.ಟೋಪೋಜಿ, ರಾಜು ಕರಿಗಾರ, ಗುರುನಾಥ ಹಡಪದ, ಮಾರುತಿ ನಾಗರಹಳ್ಳಿ, ಶಂಕರ ಪಾತ್ರದ, ಚಿದಾನಂದ ಹೂಲಿ, ರಾಜೇಶ್ವರರಾವ್ ದೇಸಾಯಿ, ಶಶಿ ದೇಸಾಯಿ, ನಿಂಗಪ್ಪ ಗೊರವರ, ಮೃತ್ಯುಂಜಯ ಅಣ್ಣಿಗೇರಿ ಹಾಗೂ ಇತರರು ಉಪಸ್ಥಿತರಿದ್ದರು. ಎಮ್.ಎಮ್.ಹುಬ್ಬಳ್ಳಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.