ರಾಯಚೂರ ಜಿಲ್ಲಾ ಉಸ್ತುವಾರಿ ಸಚಿವರಾಗಿ ಶರಣುಪ್ರಕಾಶ ಪಾಟೀಲ ನೇಮಕಕ್ಕೆ ಸ್ವಾಗತ

ಲಿಂಗಸುಗೂರ,ಜೂ.೧೧-
ಕಾಂಗ್ರೆಸ್ಸ್ ಪಕ್ಷದ ಹೈಕಮ್ಯಾಂಡ ಸೂಚನೆ ಮೇರಗೆ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಯಾಗಿ ಡಿ.ಕೆ ಶಿವುಕುಮಾರ ಅಧಿಕಾರ ಸ್ವೀಕರಿಸಿದು ಅವರ ನಿರ್ದೇಶನ ಮೆರಗೆ ವೈದ್ಯಕೀಯ ಸಚಿವ ಡಾ ಶರಣು ಪ್ರಕಾಶ ಪಾಟೀಲರನ್ನು ರಾಯಚೂರ ಜಿಲ್ಲಾ ಸಚಿವರಾಗಿ ನೇಮಿಸಿದಕ್ಕೆ ಸ್ವಾಗತಿಸುದಾಗಿ ಮುಖಂಡ ಶರಣಪ್ಪಮೇಟಿ ತಿಳಿಸಿರುವರು.
ಅವರ ಪತ್ರಿಕಾ ಗೂಷ್ಠೀಯಲ್ಲಿ ಮಾತನಾಡುತ ಡಾ. ಶರಣುಪ್ರಕಾಶ ಪಾಟೀಲರಿಗೆ ಈ ಹಿಂದೆ ರಾಯಚೂರ ಜಿಲ್ಲಾ ಉಸ್ತವಾರಿ ಸಚಿವರಾಗಿ ಕಾರ್ಯ ಮಾಡಿದ ಅನುಭವ ಇದೆ ಜಿಲ್ಲೆಯ ಅಧಿವೃದ್ಧಿ ವಿಶ್ವ ವಿದ್ಯಾಲಯದ ಅನುದಾನ ಹಾಗೂ ಏಮ್ಸ ಸಂಸ್ಥೆ ಸ್ಥಾಪಿಸಲು ಅವರು ಸರಕಾರದ ಮೇಲೆ ಒತ್ತಡ ಹಾಕಿ ಶ್ರಮಿಸಬೇಕು.
ರಾಯಚೂರು ಜಿಲ್ಲೆಯಲ್ಲಿ ಅನೇಕ ಮೂಲಬೂತ ಸಮಸ್ಯೆಗಳಿದ್ದು ಹಾಗೂ ರೈತರ ಅನೇಕ ಸಮಸ್ಯೆಗಳಿದ್ದು ಇವರ ಆಡಳಿತದಲ್ಲಿ ರಾಯಚೂರ ಜಿಲ್ಲೆ ಹಿಂದುಳಿದ ಪ್ರದೇಶ ಎಂಬ ಹಣ್ಣೆ ಪಟ್ಟಿ ತಗೆದುಹಾಕಬೇಕು ಜಿಲ್ಲೆ ಸಚಿವರಿಗೆ ಉಸ್ತವಾರಿ ನೀಡದರೆ ಇನೂ ಹೆಚ್ಚಿನ ಪ್ರಗತಿ ಅಭಿವೃದ್ಧಿ ಆಗಬಹುದಿತ್ತು ಎಂದು ಶರಣಪ್ಪ ಮೇಟಿ ತಿಳಿಸಿರುವರು.
ಈಸಂದರ್ಭದಲ್ಲಿ ಪಿಕಾರ್ಡ ಬ್ಯಾಂಕ ಅಧ್ಯಕ್ಷ ಬಸನಗೌಡಮೇಟಿ,ಪುರಸಭೆ ಸದಸ್ಯ ಶಿವಯ್ಯ ದೆಗಲುಮರಡಿ, ಅಂಬರೇಶ, ಸಿದ್ದಪ್ಪ ಪರಂಗಿ ಇದ್ದರು.