
ರಾಯಚೂರು,ಆ.೨೩-
ರಾಯಚೂರು ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಚಂದ್ರಯಾನ-೩ ನೇರ ಪ್ರಸಾರದಲ್ಲಿ ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಸರಿಯಾಗಿ ಸಂಜೆ ೬ ಗಂಟೆ ೪ ನಿಮಿಷಕ್ಕೆ ಚಂದ್ರನ ದಕ್ಷಿಣ ಧ್ರುವದ ಮೇಲೆ ಸುರಕ್ಷಿತವಾಗಿ ಇಳಿಯುವ ಮೂಲಕ ಯಶಸ್ವಿಯಾಗಿದ್ದನ್ನು ಕಂಡು ಈ ಐತಿಹಾಸಿಕ ಕ್ಷಣವನ್ನು ರಾಯಚೂರು ವಿಶ್ವವಿದ್ಯಾಲಯವು ಹರ್ಷ ವ್ಯಕ್ತಪಡಿಸಿ ಭಾರತದ ಬಾಹ್ಯಕಾಶದ ಸಾಧನೆಗೆ ಹಾಗೂ ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆಯ ಮಹಾಪೂರ ಸಲ್ಲಿಸಿದ್ದಾರೆ.