ರಾಯಚೂರು ವಿವಿ : ವಿದ್ಯಾರ್ಥಿಗಳಿಂದ ನೀರಿನ ಅರವಟ್ಟಿಗೆ

ರಾಯಚೂರು,ಏ.೧೭-ನೀರು ನಮ್ಮ ಜೀವಾಳ ಯಾರು ನೀರನ್ನು ಕೊಡುತ್ತಾರೆ ಅವರು ಸ್ವರ್ಗವನ್ನು ಸೇರುತ್ತಾರೆ ಎಂಬ ವಾಡಿಕೆ ಇದೆ. ವಿಶ್ವವಿದ್ಯಾಲಯದ ಜೀವಾಳ ಎತ್ತಿ ಹಿಡಿಯುವ ಒಂದು ಮಹತ್ತರ ಕಾರ್ಯ ಇಲ್ಲಿನ ಅರ್ಥಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಮಾಡಿದ್ದಾರೆ ಹಾಗು ಜಿ.ಪಂ ಸಹಯೋಗದೊಂದಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಮುಂಬರುವ ದಿನಗಳಲ್ಲಿ ಪಡೆಯಬಹುದು ಎಂದು ರಾಯಚೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಹರೀಶ ರಾಮಸ್ವಾಮಿ ಹರ್ಷ ವ್ಯಕ್ತಪಡಿಸಿದರು.
ತಾಲೂಕಿನ ರಾಯಚೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿದ್ಯಾರ್ಥಿಗಳು ಇತ್ತೀಚೆಗೆ ಪಕ್ಷಿಗಳಿಗೆ ನೀರಿನ ದಾಹ ತೀರಿಸುವ ಮಹತ್ತರ ಕಾರ್ಯ ಮಾಡಿದ್ದು, ಈಗ ಅರ್ಥಶಾಸ್ತ್ರ ವಿಭಾಗದ ವಿದ್ಯಾರ್ಥಿಗಳ ವತಿಯಿಂದ ಶುದ್ಧ ಕುಡಿಯುವ ನೀರಿನ ಅರವಟ್ಟಿಗೆಯನ್ನು ವಿಶ್ವವಿದ್ಯಾಲಯದ ಆವರಣದಲ್ಲಿ ಸ್ಥಾಪಿಸಿದ್ದು ಕುಲಪತಿ ಮತ್ತು ಕುಲಸಚಿವರು ಉದ್ಘಾಟಿಸಿದರು.
ಕುಲಸಚಿವ ಪ್ರೊ.ವಿಶ್ವನಾಥ ಎಂ. ಮಾತನಾಡಿ, ಯಾಚಿದೇ ಕೆಲಸ ಮಾಡಿದರು ಅದು ನಿಲ್ಲದೇ ನಿರಂತರವಾಗಿ ಸಾಗುತ್ತಿರಬೇಕು ನೀರು ಸ್ವಚ್ಛತೆಯಿಂದ ಬಳಸಿ ಮತ್ತು ಈ ಕಾರ್ಯವನ್ನು ಬೆಳೆಸಿಕೊಂಡು ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಮಾಜಿಕ ಕಾರ್ಯಚಟುವಟಿಕೆಗಳನ್ನು ಮಾಡಬೇಕು ಎಂದು ಹರಸಿದರು.
ಈ ಸಂದರ್ಭದಲ್ಲಿ ಸ್ನಾತಕೋತ್ತರ ಕೇಂದ್ರದ ವಿಶೇಷಾಧಿಕಾರಿ ಪ್ರೊ.ಪಾರ್ವತಿ ಸಿ.ಎಸ್, ಪ್ರೊ.ನುಸ್ರತ್ ಫಾತೀಮಾ, ಪ್ರೊ.ಪಿ.ಭಾಸ್ಕರ್, ಡಾ.ಜಿ.ಎಸ್.ಬಿರಾದರ ಹಾಗೂ ವಿವಿಧ ವಿಭಾಗಗಳ ಅತಿಥಿ ಉಪನ್ಯಾಸಕರು ವಿದ್ಯಾರ್ಥಿಗಳ ಈ ಒಂದು ಉತ್ತಮ ಕಾರ್ಯಕ್ಕೆ ಹರ್ಷ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.