ರಾಯಚೂರು: ರಾಷ್ಟ್ರೀಯ ದಂತವೈದ್ಯಕೀಯ ಸಪ್ತಾಹ

ಕಲಬುರಗಿ,ಜೂ 26: ರಾಯಚೂರಿನ ನವೋದಯ ದಂತ ಕಾಲೇಜು ಮತ್ತು ಆಸ್ಪತ್ರೆಯ
ಸಾರ್ವಜನಿಕ ಆರೋಗ್ಯ ದಂತವೈದ್ಯ ವಿಭಾಗದಿಂದ ರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ದಂತವೈದ್ಯಕೀಯ ಸಪ್ತಾಹದ ಅಂಗವಾಗಿ ಜೂ 19 ರಿಂದ 25 ರವರೆಗೆ ಸರಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ನಗರದ ಕೆಎಸ್‍ಆರ್‍ಟಿಸಿ ಬಸ್ ಡಿಪೋ , ಕ್ಯಾರಮೆಲ್ ಪಬ್ಲಿಕ್ ಸ್ಕೂಲ್‍ನಲ್ಲಿ
ದಂತ ತಪಾಸಣೆ ಮತ್ತು ಬಾಯಿ ಆರೋಗ್ಯ ಜಾಗೃತಿ ಶಿಬಿರವನ್ನು ಆಯೋಜಿಸಲಾಯಿತು.ರಾಷ್ಟ್ರೀಯ ಮಟ್ಟದ ಆನ್‍ಲೈನ್ ರಸಪ್ರಶ್ನೆ ಸ್ಪರ್ಧೆಯನ್ನು ನಡೆಸಲಾಯಿತು. ದೇಶಾದ್ಯಂತ ಒಟ್ಟು 150 ಅಭ್ಯರ್ಥಿಗಳು ಈ ಸಮಾರಂಭದಲ್ಲಿ ಭಾಗವಹಿಸಿದ್ದರು. ರಾಷ್ಟ್ರೀಯ ಮಟ್ಟದ ರೀಲ್ಸ್‍ಸ್ಪರ್ಧೆಯನ್ನು ಸಹ ನಡೆಸಲಾಯಿತು.24 ರಂದು ಸಿಡಿಎ ಕಾರ್ಯಕ್ರಮವನ್ನು ಆಯೋಜಿಸಲಾಯಿತು.ಡಾ ಮನೀಷ್,ಡಾ.ಗಿರೀಶ್ ಕಟ್ಟಿ, ಡಾ.ಸುರೇಶ್ ಬಾಬು ಅವರು ಸೇರಿದಂತೆ ಅನೇಕರು ಪಾಲ್ಗೊಂಡರು.