ರಾಯಚೂರು, ಮೇ.೨೧- ನಗರದ ಎಕ್ಲಾಸಪೂರ ರಸ್ತೆಯಲ್ಲಿರುವ

ವಿದ್ಯುತ್ ಕಡಿತ: ಸೂಕ್ತ ವ್ಯವಸ್ಥೆಗೆ ಸಾಧಿಕ್ ಹುಸೇನ್ ಒತ್ತಾಯ
ಬಂದಾನವಾಜ್ ಕಾಲೋನಿ,ನಿಜಾ ಮೋದ್ದಿನ್,ವಿವೇಕಾನಂದ ದೇವರಾಜ ಅರಸು ಎಸ್. ಟಿ ಹುಸೇನ್ ಲೇ ಔಟ್ ಸೇರಿದಂತೆ ಅನೇಕ ಕಾಲೋನಿ ಗಳಿದ್ದು ಕಾಲೋನಿಯ ನಿವಾಸಿಗಳಿಗೆ ೨ ತಿಂಗಳಿಂದ ಸಮರ್ಪಕವಾಗಿ ವಿದ್ಯತು ಪೂರೈಕೆ ಯಾಗುತಿಲ್ಲ ಕೂಡಲೇ ವಿದ್ಯುತ್ ಕಡಿತವಾಗದಂತೆ ಸೂಕ್ತ ವ್ಯವಸ್ಥೆಯನ್ನು ಮಾಡಬೇಕೆಂದು ಸಮಾಜ ಕಾರ್ಯಕರ್ತ ಸಾಧಿ ಹುಸೇನ್ ಜೆಸ್ಕಾಂ ಕಾರ್ಯ ಮತ್ತು ಪಾಲನಾ ಉಪವಿಭಾಗ ಸಹಾಯಕ ನಿರ್ವಾಹಕ ಅಭಿಯಂತರರಿಗೆ ಒತ್ತಾಯಿಸಿದರು.
ಕಾಲೋನಿ ಗಳಲ್ಲಿ ಸುಮಾರು ೨ ತಿಂಗಳಿಂದ ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ ದಿನದ ೨೪ ಗಂಟೆಯಲ್ಲಿ ೫ , ೬ ತಾಸು ಮಾತ್ರ ವಿದ್ಯತ್ ಪೂರೈಕೆಯಾಗುತ್ತಿದೆ. ಇದರಿಂದ ಬಹಳಷ್ಟು ಸಮಸ್ಯೆಯಾಗುತ್ತಿದೆ. ಬೇಸಿಗೆಯ ಕಾಲದಲ್ಲಿ ಮನೆಯಲ್ಲಿಯ ಜನ ಬೇಸಿಗೆಯ ತಾಪದಿಂದ ನರಳಬೇಕಾಗಿದ ಪ್ರಸಂಗ ಒದಗಿ ಬಂದಿರುತ್ತದೆ. ನಳದ ನೀರು ಬಂದಾಗ ಕರೆಂಟ್ ಇಲ್ಲದೇ ತುಂಬಾ ಸಮಸ್ಯೆ ಯಾಗುತ್ತಿದೆ .ಈ ಬಗ್ಗೆ ಸೆಕ್ಷನ್ ಆಫೀಸರ್ ಹಾಗೂ ಇತರೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಂಪರ್ಕಿಸಿದಾಗ ಈ ಕುರಿತು ಸೂಕ್ತ ಕ್ರಮ ವಹಿಸದೇ ಇರುವುದರಿಂದ ಜನ ಬಹಳಷ್ಟು ತೊಂದರೆಯನ್ನು ಅನುಭವಿಸಬೇಕಾಗಿ ಬಂದಿದೆ ಕೂಡಲೇ ವಿದ್ಯುತ್ ಕಡಿತ ವಾಗದಂತೆ ಸೂಕ್ತ ವ್ಯವಸ್ಥೆಯನ್ನು ಮಾಡಬೇಕೆಂದು ಒತ್ತಾಯಿಸಿದರು.