
ರಾಯಚೂರು, ಆ.೦೩- ನಗರದ ರೈಲು ನಿಲ್ದಾಣದಲ್ಲಿ ಕೃಷ್ಣ ಮತ್ತು ಮಹೆಬೂಬುನಗರ ಮಾರ್ಗವಾಗಿ ಸಂಚಾರಿಸುವ ಕಾಚಿಗೂಡ ರಾಯಚೂರು ಕಾಚಿಗೂಡ ಡೆಮೋ ರೈಲು ಓಡನಾಡಕ್ಕೆ ರೈಲ್ವೆ ಬೋರ್ಡ್ ಸದಸ್ಯ ಬಾಬುರಾವ್ ಅವರು ಹಸಿರು ನಿಶಾನೆ ತೋರಿದರು.
ಈ ರೈಲ್ ಸಂಖ್ಯೆ ೦೭೪೭೭/೭೮ ಅಗಿದೆ. ರೈಲು ಬೋರ್ಡ ಸದಸ್ಯರಾದ ಬಾಬುರಾವ್ ಮತ್ತು ಇಲಾಖೆ ಅದಿಕಾರಿಗಳು ಪೂಜೆ ನೇರವೇರಿಸಿ, ಈಸುಗಾಯಿ ಒಡೆದು ಹಸಿರು ನಿಶಾನೆ ತೋರಿಸಿದರು.ಬಾಬುರಾವ್ ಅವರು ಮಾತನಾಡಿ, ಪ್ರಯಾಣಿಕರು ಇದರ ಪ್ರಯೋಜನ ಪಡೆಯಲು ಕೋರಿದರು.ಈ ರೈಲು ಕಡಿಮೆ ಅವಧಿಯಲ್ಲಿ ಹೈದ್ರಾಬಾದ ತಲುಪುತ್ತದೆ.ಇದು ಕೃಷ್ಣ, ಮಹಬೂಬ ನಗರ ಮತ್ತು ದೇವರಖದ್ರ ಮೂಲಕ ಕಾಚಿಗೂಡಕ್ಕೆ ಹೋಗುತ್ತದೆ.ಇದು ರಾಯಚೂರ ಮಧ್ಯಾಹ್ನ ೩/೩೦ ಕ್ಕೆ ಹೊರಟು ರಾತ್ರಿ ೯/೧೦ ಕ್ಕೆ ಕಾಚಿಗೂಡಕ್ಕೆ ತಲುಪುತ್ತದೆ. ಈ ಹೊಸ ಮಾರ್ಗವು ಗದ್ವಾಲ್ ಮಾರ್ಗಕ್ಕೆ ಹೊಲಿಸಿದರೆ, ೩೦. ಕೀಲೋ ಮಿಟರ ಕಡಮೆಯಾದರೆ, ಸೇಡಂ ಮಾರ್ಗದಿಂದ ಹೊಲಿಸಿದರೆ, ೮೦ ಕಿಲೋ ಮೀಟರ ಅವಧಿ ಕಡಮೆಯಾಗುತ್ತದೆ.ಹೈದ್ರಾಬಾದಗೆ ಹೊರಡುವ ರಾಯಚೂರ ಪ್ರಯಾಣಿಕರಿಗೆ ಇದು ತುಂಬಾ ಅನುಕೂಲಕರವಾಗಿದೆ ಎಂದು ಬಾಬುರಾವ್ ತಿಳಿಸಿದರು.ಇದು ರಾಯಚೂರ ಜನರ ಬಹು ವರ್ಷಗಳ ಬೇಡಿಕೆಯಾಗಿತ್ತು.ಇವತ್ತು ಲೋಕಸಭಾ ಸದಸ್ಯರಾದ ರಾಜಾ ಅಮರೇಶ್ವರ ನಾಯಕ ಮತ್ತು ನನ್ನ ಪರಿಶ್ರಮ ಬಹಳ ಇದೆ ಎಂದರು. ಇದರ ಸಮಯ ಶೀಘ್ರ ಬದಲಾಗಿ ರಾಯಚೂರನಿಂದ ಬೆಳಿಗ್ಗೆ ಹೊರಡುವ ವ್ಯವಸ್ಥೆಗೆ ಇಲಾಖಾ ವಿಭಾಗೀಯ ವ್ಯವಸ್ಥಾಪಕ ಮನೀಶ ಅಗರವಾಲ್ ಆಶ್ವಾಸನೆ ಕೊಟ್ಟಿದ್ದಾರೆ ಎಂದು ಬಾಬುರಾವ್ ತಿಳಿಸಿದರು.ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಬಸವರಾಜ ಅಸ್ಕಿಹಾಳ ಮತ್ತು ಅಧಿಕಾರಿಗಳು ಇದ್ದರು.