ರಾಯಚೂರು.ಅ.೦೮- ರಾಯಚೂರು-ನಾಂದೇಡ್ ನಡುವೆ ಅ.೧೦ ರಂದು ಹೊಸ ರೈಲ್ ಸಂಚಾರ ಮಾಡಲಿದೆ ಎಂದು ರೈಲ್ವೆ ಬೋರ್ಡ್ ಸದಸ್ಯ ಬಾಬುರಾವ್ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಸರಕಾರ ನಿರ್ಧಾರದಂತೆ ತೆಲಂಗಾಣ, ಮಹಾರಾಷ್ಟ್ರ ಮತ್ತು ಕರ್ನಾಟಕದ ನಡುವೆ ರೈಲು ಸಂಪರ್ಕ ಕಲ್ಪಿಸಲು ಸೌಲಭ್ಯ ನೀಡುವ ಭರವಸೆಯಂತೆ ಪ್ರಸ್ತುತ ರಾಯಚೂರಿಗೆ ೧೭೬೬೩, ೧೭೬೬೪ ತಾಂಡೂರ್ ಹಜೂರ್ ಸಾಹಿಬ ನಾಂದೇಡ್ ಎಕ್ಸ್‌ಪ್ರೆಸ್ ದಿನನಿತ್ಯ ಪರಭಣಿಯಿಂದ- ತಾಂಡೂರ್- ರಾಯಚೂರುವರೆಗೆ ಸುಮಾರು ೧೭೮ ಕಿ.ಮೀ. ವಿಸ್ತರಣೆ ಮಾಡಿ ರೈಲ್ವೆ ಇಲಾಖೆ ಆದೇಶಿಸಿದೆ.
ಪ್ರತಿನಿತ್ಯ ಪರಭಣಿಯಿಂದ ತಾಂಡೂರ್‌ವರೆಗೆ ಸಂಚಾರಿಸುವ ರೈಲ್ವೆ ನಂ. ೧೭೬೬೪, ೧೭೬೬೩ ಹಜೂರ್ ಸಾಹಿಬ ನಾಂದೇಡ್ ಎಕ್ಸ್‌ಪ್ರೆಸ್ ರೈಲ್ವೆ ಅ.೯ ರಂದು ರಾಯಚೂರುವರೆಗೆ ಸಂಚಾರಕ್ಕೆ ವಿಸ್ತರಣೆ ಮಾಡಲಾಗಿದೆ. ಈ ರೈಲ್ವೆ ಸದರಿ ದಿನದಂದು ಸಿಕಿಂದ್ರಾಬಾದ್ ರೈಲ್ವೆ ನಿಲ್ದಾಣದಿಂದ ಜಿ. ಕಿಷನ್ ರೆಡ್ಡಿ ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಇವರು ರಿಮೋಟ್ ವೀಡಿಯೋ ಲಿಂಕ್ ಮೂಲಕ ತಾಂಡೂರ್ ಸ್ಥಳೀಯ ರೈಲ್ವೆ ನಿಲ್ದಾಣದ ರೈಲಿಗೆ ಹಸಿರು ನಿಶಾನೆ ತೋರಲಿದ್ದಾರೆ. ಈ ರೈಲ್ವೆ ಪರಭಣಿ-ನಾಂದೇಡ್-ತಾಂಡೂರ್‌ನಿಂದ ಬೆಳಿಗ್ಗೆ ೯ ಗಂಟೆಗೆ ಆರಂಭಗೊಂಡು ಸುಲೇಹಳ್ಳಿ-ಸೇಡಂ, ಚಿತಾಪುರ, ಯಾದಗಿರಿ ಮೂಲಕ ರಾಯಚೂರುಗೆ ೧೨.೧೫ ಕ್ಕೆ ತಲುಪುತ್ತದೆ. ಅ.೧೦ ರಂದು ರೈಲ್ವೆ ನಂ.೧೭೬೪೪ ರಾಯಚೂರು ೩.೩೦ಕ್ಕೆ ಹೊರಟು ಯಾದಗಿರಿ- ಚಿತಾಪುರ-ಸೇಡಂ-ಸುಲೇಹಳ್ಳಿ-ತಾಂಡೂ-ನಾಂದೇಡ್ ಮೂಲಕ ಪರಭಣಿಗೆ ಮರುದಿನ ಬೆಳಿಗ್ಗೆ ೬.೩೫ಕ್ಕೆ ತಲುಪುತ್ತದೆ.ರೈಲ್ವೆ ಆರಂಭದಿಂದ
ರಾಯಚೂರಿನ ಸಾರ್ವಜನಿಕರಿಗೆ, ಉದ್ಯಮಿಗಳಿಗೆ, ಪ್ರವಾಸಿಗರಿಗೆ ಹಾಗೂ ದಿನ ನಿತ್ಯ ದುಡಿಯುವ ಕೂಲಿ ಕಾರ್ಮಿಕರಿಗೆ ಅನುಕೂಲವಾಗುತ್ತದೆ ಎಂದು ಬಾಬುರಾವ್ ತಿಳಿಸಿದರು.