ರಾಯಚೂರು – ನಾಂದೇಡ್ ಹೊಸ ರೈಲು ಆರಂಭ

ರಾಯಚೂರು.ಆ.೧೦- ತೆಲಂಗಾಣ, ಮಹಾರಾಷ್ಟ್ರ ಮತ್ತು ಕರ್ನಾಟಕದ ನಡುವೆ ರೈಲು ಸಂಪರ್ಕವನ್ನು ಹೆಚ್ಚಿಸುವ ಸೌಲಭ್ಯ ನೀಡುವ ಭರವಸೆಯಂತೆ ೧೭೬೬೩/ ೧೭೬೬೪ ಹದೂರ ಸಾಹಿಬ ನಾಂದೇಡ್ ಎಕ್ಸ್‌ಪ್ರೆಸ್ (ದಿನನಿತ್ಯ) ರೈಲಿಗೆ ರಾಯಚೂರುನಲ್ಲಿ ಮಧ್ಯಾಹ್ನ ೩.೩೦ ಕ್ಕೆ ಬಾಬುರಾವ್ ರೈಲ್ವೆ ಬೋರ್ಡ್ ಸದಸ್ಯರು ಹಾಗೂ ಸಿ.ಅಶೋಕ್ ಕುಮಾರ, ಮೀನಾ, ಸ್ಟೇಷನ್ ಮಾಸ್ಟರ ಇವರು ಹಸಿರು ನಿಶಾಲೆ ತೋರುವ ಮೂಲಕ ಚಾಲನೆ ನೀಡಿದರು.
ಈ ಟ್ರೈನ್ ಪರಭಣಿ- ನಾಂದೇ ಡ-ತಾಂಡೂರ ಸುಲೇಹಳ್ಳಿ-ಸೇಡಂ ಚಿತಾಪುರ, ಯಾದಗಿರಿ ಮೂಲಕ ರಾಯಚೂರುಗೆ ಟ. ೧೨.೧೫ಕ್ಕೆ ತಲು ಪುತ್ತದೆ. ನಂತರ ಹಿಂದಿರುಗಿ ರಾಯಚೂರು (ಅಪರಾಹ್ನ ೩.೩೦ ಕ್ಕೆ ಬಿಟ್ಟು) ಯಾದಗಿರಿ-ಚಿತಾಪುರ- ಸೇಡಂ-ಸುಲೇಹಳ್ಳಿ-ತಾಂಡೂರ, ವಿಕಾರಬಾದ್, ಸಿಕಿಂದ್ರಾ ಬಾದ್ – ನಾಂದೇಡ್ ಮೂಲಕ ಪರಭಣಿ (ಮರುದಿನ ಬೆಳಿಗ್ಗೆ ೬.೩೦ಕ್ಕೆ) ತಲುಪುತ್ತದೆ. ಈ ರೈಲಿನ ಉದ್ಘಾಟನೆ ಸಮಾರಂಭದಲ್ಲಿ ಅಭಿಷೇಕ್ ಕುಮರ ಐಪಿಎಫ್, ರೈಲ್ವೆ ನಿರಂಜನ್ ಕುಮಾರ ಸಿಸಿಐ, ರೈಲ್ವೆ ಎಸ್ ಜೆ ಚೌಹಾನ್’ ಚೀಪ್ ಬುಕಿಂಗ್ ಸೂಪರ್ ವೈಸರ, ನಾಗೇಶ್ವರ ರಾವ್, ಅಶೋಕ್ ಪಾಟೀಲ್ ಲೈಯನ್ಸ್ ಕ್ಲಬ್ ಅಧ್ಯಕ್ಷರು ಬಸವರಾಜ ಅಸ್ಕಿಹಾಳ್ ಶ್ರೀನಿವಾಸರಾವ್ ಲೋಕಸಭಾ ಸದಸ್ಯರ ಆಪ್ತ ಸಹಾಯಕರು ಶ್ರೀನಿವಾಸಲು ಎಐಓಆರ್‌ಪಿಎಫ್ ನಾಗರಾಜ್, ಎಎಸ್‌ಐಜಿಆರ್‌ಓ ರಾಯಚೂರು ಸೇರಿದಂತೆ ಅನೇಕರಿದ್ದರು.