ರಾಯಚೂರು ಜಿಲ್ಲಾ ಪ್ರಥಮ ಜನಪದ ಸಮ್ಮೇಳನಾಧ್ಯP ಡಾ. ಲಿಂಗಣ್ಣ ಬಿ. ಗಾಣಧಾಳ

ಜನಪದ ಮನಸ್ಸಿನ ಬಂಡಾಯ ಸಾಹಿತಿ ಇಂದು ಲಿಂಗಸೂಗೂರಿನಲ್ಲಿ ನಡೆಯುತ್ತಿರುವ ರಾಯಚೂರು ಜಿಲ್ಲೆಯ ಪ್ರಥಮ ಜನಪದ ಸಮ್ಮೇಳನ ಅಂಗವಾಗಿ ಈ ಲೇಖನ. ಜನಪದ ಸಾಹಿತ್ಯ, ಶರಣ ಸಾಹಿತ್ಯ, ಬಂಡಾಯ ಸಾಹಿತ್ಯ ರಚನೆಯಲ್ಲಿ ಹೆಸರು ಮಾಡಿರುವ ಡಾ. ಲಿಂಗಣ್ಣ ಬಿ.ಗಾಣಧಾಳರವರು ಈ ಸಮ್ಮೇಳನದ ಅಧ್ಯPರಾಗಿರುವ ಈ ಸಂದರ್ಭದಲ್ಲಿ ಅವರ ಕುರಿತಾದ ಸಂಕ್ಷಿಪ್ತ ಪರಿಚಯಾತ್ಮಕ ಲೇಖನ.
ಜಿಲ್ಲೆಯ ಜನಪದ ಹಿರಿಮೆಯನ್ನು ಸಾರುವ ಈ ಸಮ್ಮೇಳನ ಜಾನಪದ ಸಂಸ್ಕೃತಿ, ಜನಪದ ಕಲೆಗಳ ಮತ್ತು ಜನಪದ ಕಲಾವಿದರ ವಾಸ್ತವಿಕ ಬದುಕಿನತ್ತ ಜನರ ಮತ್ತು ಸರ್ಕಾರದ ಗಮನ ಸೆಳೆಯಲಿ ಎಂದು ಆಶಿಸೋಣ.
(ಬಾಕ್ಸ್ ಐಟಂ)
ಅಪ್ಪಟ ಗ್ರಾಮೀಣ ಪರಿಸರದಲ್ಲಿ ಹುಟ್ಟಿ ಬೆಳೆದ ಡಾ. ಲಿಂಗಣ್ಣ ಬಿ. ಗಾಣಧಾಳ ಇವರು ಹಳ್ಳಿಯಲ್ಲಿನ ಎಲ್ಲ ಕಾರ್ಯಚಟುವಟಿಕೆಗಳನ್ನು, ನೀತಿ ನಿಯಮಗಳನ್ನು, ಸಾಂಸ್ಕೃತಿಕ ಬದುಕನ್ನು ಸೂPವಾಗಿ ಗಮನಿಸಿದವರು. ಗ್ರಾಮೀಣ ಕಲೆಗಳಲ್ಲಿ ತೀವ್ರ ಆಸಕ್ತಿ ಹೊಂದಿ ಬಯಲಾಟ, ನಾಟಕ, ಜನಪದ ಗೀತ ಗಾಯನ, ಕೃಷಿ ಸಂಬಂಧಿತ ಹಾಡುಗಳಿಂದ ಪ್ರಭಾವಿತರಾದವರು ಜೊತೆಗೆ ಬಯಲಾಟದ ಪಾತ್ರಗಳನ್ನು, ನಾಟಕದ ಪಾತ್ರಗಳಲ್ಲಿ ನಟಿಸಿ, ನಿರ್ದೇಶಿಸಿದವರು. ಓದಿನ ಜೊತೆಗೆ ಬದುಕು ಕಟ್ಟುವ ಹಂಬಲ ಸಮಾಜ ಚಿಂತನೆಯ ಆವಶ್ಯಕಗಳನ್ನು ಅರಿತವರು. ಅಂತೆಯೇ ಶಿPಣದ ಜೊತೆಗೆ ಜನಪದ ಮತ್ತು ಬಂಡಾಯ ಸಾಹಿತ್ಯದ ಒಡನಾಟದಲ್ಲಿ ಬೆಳೆದವರು. ಅವರು ಅನುಭವಿಸಿದ ಸಾಮಾಜಿಕ ಸಮಸ್ಯೆಗಳನ್ನು ಕಟುವಾಗಿ ಪ್ರತಿರೋಧಿಸಿದವರು. ಅವರು ಕವಿತೆ, ಲೇಖನ, ಯಾವುದೇ ಬರೆಯಲಿ ಅಲ್ಲಿ ಪ್ರತಿರೋಧದ ದನಿ ಎದ್ದು ಕಾಣುತ್ತದೆ. ಅವರು ಆಡುವ ಮಾತುಗಳಲ್ಲಿ ನಿಷ್ಠುರವಾಗಿದ್ದರೂ ಅದನ್ನು ಅಷ್ಟೇ ಗಂಭೀರವಾಗಿ ಹೇಳುತ್ತಾರೆ.
ಡಾ|| ಲಿಂಗಣ್ಣನವರು ತಾವು ಹೇಳುವುದನ್ನು ಪ್ರಸ್ಪುಟವಾಗಿ, ನಿಷ್ಕರ್ಶವಾಗಿ ಹೇಳುತ್ತಾ ಬಂದಿದ್ದಾರೆ. ವಿಷಯ ಯಾವುದೇ ಇರಲಿ, ಸಂದರ್ಭ ಯಾವುದೇ ಇರಲಿ, ಎದುರಿಗೆ ಯಾವ ವ್ಯಕ್ತಿ ಯಾರೇ ಇರಲಿ ಅವರ ಅಭಿಪ್ರಾಯವನ್ನು ಯಾವುದೇ ಸಂಕೋಚವಿಲ್ಲದೇ ಹೇಳುವ ಸ್ವಭಾವ ಅವರದು.
ಲೇಖಕನ ಗುರಿ ಓದುಗರನ್ನು ಖುಷಿ ಪಡಿಸುವ ಅಥವಾ ಕಾಲಕ್ಷೇಪ ಮಾಡುವಂತಹ ವಿಷಯವಾಗಿರಬಾರದು. ಜಗವು ಹೊದ್ದುಕೊಂಡಿರುವ ಮುಸುಗನ್ನು ತೆಗೆದು ನೋಡಬೇಕಾಗುತ್ತದೆ. ರಚನೆ ನಿಸ್ಸಂದೇಹವಾಗಿಯೂ ವಯ್ಯಕ್ತಿಕಾನುಭವವೇ. ವ್ಯಕ್ತಿಗಳು, ಪರಿಸ್ಥಿತಿಗಳು, ಸಂಘಟನೆಗಳು ಎಲ್ಲವನ್ನು ಲೇಖಕ ಅರ್ಥ ಮಾಡಿಕೊಂಡಿರುವ ಕೋನದಿಂದಲೇ ಬರೆಯಬಲ್ಲ. ತನ್ನಲ್ಲಿ ಆದ ’ಸ್ಪಂದನ’ವನ್ನು ಓದುಗರಿಗೆ ಮುಟ್ಟಿಸುವ ಪ್ರಯತ್ನ ಮಾಡುತ್ತಾರೆ. ಇದರಲ್ಲಿ ’ರಾಜಿ’ ಸಂಧಾನಕ್ಕೆ ಅವಕಾಶ ಕೊಟ್ಟಾಗ, ಅಕ್ಷರಗಳು ತೊದಲುತ್ತಾ, ಓದುಗರಿಗೆ ತಲುಪಿಸಬೇಕಾದ ವಿಷಯವನ್ನು ಗೊಂದಲಕ್ಕೆ ಈಡು ಮಾಡುತ್ತವೆ. ಅದು ಲೇಖಕನಿಗೆ ಇರಬಾರದ ಲಕ್ಷಣ. ಅಂತಹುದನ್ನು ಬರೆದರೂ ಉಪಯೋಗವಿರುವುದಿಲ್ಲ. ಏನು ಬರೆಯಬೇಕು? ಎಂಬುದಕ್ಕಿಂತ, ಏನು ಬರೆಯ ಬಾರದು ಎಂದು ತಿಳಿದುಕೊಳ್ಳುವುದು ತುಂಬಾ ಮುಖ್ಯವಾಗುತ್ತದೆ. ನಿತ್ಯಾನುಭವದಲ್ಲಿಯೇ ಇದ್ದರೂ, ನಾವು ಗಮನಿಸದೇ ಇರುವ ವಿಷಯಗಳು ಕೆಲವು ಇರುತ್ತವೆ. ಅವನ್ನು ಲೇಖಕ ಹಿಡಿದುಕೊಳ್ಳಬೇಕು. ಅದು ಲೇಖಕನ ಸೃಜನಾತ್ಮಕ ಸೃಷ್ಠಿಯಾಗುತ್ತದೆ.
ಲಿಂಗಣ್ಣ ನವರು ತಾವು ಲೇಖಕನಾಗಬೇಕೆಂದು ಗುರಿ ಹೊತ್ತವರಲ್ಲ. ಗ್ರಾಮೀಣ ಪರಿಸರದಲ್ಲಿ ಸಾಧಾರಣ ಜೀವನ ಸಾಗಿಸುವ ಕುಟುಂಬದಲ್ಲಿ ಜನಿಸಿ, ಒಕ್ಕಲುತನವನ್ನು ತಂದೆಯಿಂದಲೇ ಕಲೆತು, ಜೊತೆಗೆ ಶಾಲಾ ಅಭ್ಯಾಸವನ್ನು ಸಹಜವಾಗಿ ಸ್ವೀಕರಿಸಿದವರು. ಕಷ್ಟ ಏನೇ ಇರಲಿ ನೀನು ಶಿಕ್ಷಣ ಪಡೆಯಬೇಕೆಂಬ ತಂದೆಯ ಅಭಿಲಾಷೆಯಂತೆ ಛಲ ಬಿಡದೇ ಓದುತ್ತಾರೆ. ಹಳ್ಳಿಯಲ್ಲಿನ ಎಲ್ಲ ಸಾಂಸ್ಕೃತಿಕ, ಜನಪದ ಹವ್ಯಾಸಗಳಲ್ಲಿ ತೊಡಗಿ ಸ್ವತಃ ಅನುಭವಿಸಿ, ಆನಂದಿಸಿ ಬೆಳೆಯುತ್ತಾರೆ. ಇದರೊಂದಿಗೆ ಹಳ್ಳಿಯಲ್ಲಿನ ಜಾತಿ ವ್ಯವಸ್ಥೆಯ ಕ್ರೂರ ಮುಖವನ್ನು, ದೇವರು-ಧರ್ಮದ ಹೆಸರಿನಲ್ಲಿ ನಡೆಯುವ ಮೋಸವನ್ನು ಗಮನಿಸುತ್ತಲೇ ಬೆಳೆದವರು. ಅಸಮಾನತೆಯ ಜೀವನ ಸಂಘರ್ಷದಲ್ಲಿ ನೋವುಂಡ ಮುಗ್ಧ ಮನಸ್ಸು, ಒಮ್ಮಿಂದೊಮ್ಮೆಲೆ ನಗರ ಪ್ರದೇಶಕ್ಕೆ ಬಂದಾಗ ಅಲ್ಲಿನ ವಾತಾವರಣ ಮತ್ತು ಶಿಕ್ಷಣದ ಅಸ್ತ್ರವು ಕೈಗೆ ಸಿಕ್ಕಾಗ ಸಿಡಿದೇಳುತ್ತಾರೆ.
ಶಿಕ್ಷಣ ಕಾಶಿ ಧಾರವಾಡದಲ್ಲಿ ಓದಿನ ಜೊತೆಗೆ ಆಗಾಗ್ಗೆ ತಮ್ಮ ಅನುಭವವನ್ನು ಕವಿತಾ ರೂಪದಲ್ಲಿ ಪ್ರಕಟಿಸಿ, ಹಿರಿಯರ ಮೆಚ್ಚುಗೆ ಪಡೆದು ರಚನಾ ಕೌಶಲ್ಯದಲ್ಲಿ ಮುನ್ನುಗ್ಗುತ್ತಾರೆ. ಅಕ್ಷರವನ್ನು ಖಡ್ಗದಂತೆ ಮಾಡಿಕೊಳ್ಳುತ್ತಾರೆ. ಹಳ್ಳಿಯಲ್ಲಿ ಮೂಕ ಪ್ರೇಕ್ಷಕನಾಗಿ ನೋಡಿದ್ದನ್ನು ಮುಕ್ತವಾಗಿ ಬರೆಯಲಾರಂಭಿಸಿ, ತಾವೊಬ್ಬ ಪ್ರಗತಿಪರ ಆಲೋಚನೆಗಳುಳ್ಳ ಲೇಖಕನೆಂದು ಗುರುತಿಸಿಕೊಳ್ಳುತ್ತಾರೆ. ಇದೇ ಪಯಣದಲ್ಲಿ ಅಂತಹ ಸಮಾನ ಮನಸ್ಸುಳ್ಳವರ ಒಡನಾಟವೂ ಜೊತೆಗೂಡಿ ಇವರ ಲೇಖನ ಮತ್ತಷ್ಟು ಪರಿಪಕ್ವಗೊಳ್ಳುತ್ತದೆ. ಜೀವನ ಸಾಗಿಸಲು ಅದೆಷ್ಟೋ ಕಷ್ಟಪಟ್ಟು ಮಾಸ್ತರರಾಗಿ, ಉಪನ್ಯಾಸಕರಾಗಿ ಕನ್ನಡ ಕಲಿಸುವ ಉಪಾಸಕರಾಗಿದ್ದಾರೆ. ಅವರು ಕವನ ಬರೆಯಲಿ, ಲೇಖನ, ಉಪನ್ಯಾಸ ಏನೇ ಬರೆಯಲಿ ಅಸಮಾನತೆ, ಜಾತಿ ವ್ಯವಸ್ಥೆ, ಸ್ತ್ರೀ ಶೋಷಣೆ ವಿರುದ್ದವೇ ಇವರ ಧ್ವನಿ ಇರುತ್ತದೆ. ಇವರ ಮಹಾ ಪ್ರಬಂಧದಲ್ಲಿಯೂ ಇದೇ ವಿಷಯ ಮುಖ್ಯವಾಗಿಟ್ಟುಕೊಂಡು ಡಾಕ್ಟರೇಟ್ ಪಡೆದವರು, ದೇವರು-ಧರ್ಮದ ಅನಾವರಣವೆಂಬ ಪುಸ್ತಕ ಪ್ರಕಟಿಸಿ ಅಲ್ಲಿಯೂ ಇದೇ ವಿಷಯಗಳ ಕುರಿತು ಪ್ರಶ್ನೆ ಮಾಡುತ್ತಾರೆ.
ಭಾರತ ಇಡೀ ಪ್ರಪಂಚಕ್ಕೆ ಜ್ಞಾನ ನೀಡಿತು. ಎಂದು ಹೇಳಿಕೊಳ್ಳುತ್ತಿದ್ದರೂ, ಸಮಾನತೆಯನ್ನು ಸಾರದೇ ಏನೂ ಪ್ರಯೋಜನವಿಲ್ಲ? ವೆಂದು ಇವರು ಪ್ರಶ್ನೆ ಮಾಡುತ್ತಾರೆ. ಮನುಷ್ಯನನ್ನು ಮನುಷ್ಯನಂತೆ ನೋಡದ ಸಮಾಜ ಅದೆಂತಹ ಸಮಾಜ? ಎನ್ನುತ್ತಾರೆ.
ಲಿಂಗಣ್ಣನವರು ತಮ್ಮ ಇಡೀ ಸಾಹಿತ್ಯ ರಚನೆಯಲ್ಲಿ ದೇಶದ ಜ್ವಲಂತ ಸಮಸ್ಯೆಗಳನ್ನು ಮತ್ತು ಅಸಹಿಷ್ಣುತೆ ತಾಡವವಾಡುತ್ತಿರುವ ಪ್ರತಿಯೊಂದು ಸಂದರ್ಭದಲ್ಲಿ ಅವುಗಳಿಗೆ ಸ್ಪಂದಿಸಿ ಲೇಖನ ಮತ್ತು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಒಟ್ಟಾರೆ ಅವರ ಎಲ್ಲಾ ಪುಸ್ತಕಗಳಲ್ಲಿ ಬಹುತೇಕ ಬರಹಗಳು ಅಸಮಾನತೆ, ಜಾತಿ ವ್ಯವಸ್ಥೆಯ ವಿರುದ್ಧವೇ ಸಮರ ಸಾರಿದ್ದಾರೆ. ಇದು ಅವರ ಬಂಡಾಯ ಧೋರಣೆಯ ಅಂಶಗಳನ್ನು ಸಾರುತ್ತವೆ.
ಲಿಂಗಣ್ಣನವರು ತಮ್ಮ ಹೆಚ್ಚಿನ ಅಧ್ಯಯನನ್ನು ವಚನ ಸಾಹಿತ್ಯ ಮತ್ತು ಜನಪದ ಸಾಹಿತ್ಯಗಳಲ್ಲಿ ಮಾಡಿದ್ದಾರೆ. ಶರಣರ ಮುಖ್ಯ ಗುರಿ ಏನಿತ್ತೊ, ಅದು ಇವರಲ್ಲಿಯೂ ಕಂಡುಬರುತ್ತದೆ. ಶರಣರು ಚಳುವಳಿ ನಡೆಸಿದ್ದು, ಸಮಾಜದಲ್ಲಿನ ಅಸಮಾನತೆಯನ್ನು ಹೋಗಲಾಡಿಸಲು. ಒಬ್ಬ ಇಂಗ್ಲೀಷ್ ಕವಿ ಹೇಳಿದಂತೆ “ನಾನು ಮನುಷ್ಯನನ್ನು ಪ್ರೀತಿಸುತ್ತೇನೆ. ಏಕೆಂದರೆ ನಾನೂ ಮನುಷ್ಯನಲ್ಲವೇ!” ಬಹುಶಃ ಅದೇ ಮನೋಭಾವನೆಯಿಂದಲೇ ಲಿಂಗಣ್ಣನವರು ತಮ್ಮ ಮಾನವ ಪ್ರೀತಿಯನ್ನು ಪ್ರತಿ ಅಕ್ಷರದಲ್ಲಿ ಕನ್ನಡಿಯಂತೆ ನಮಗೆ ತೋರಿಸುತ್ತಾರೆ. ತುಳಿತಕ್ಕೊಳಗಾದವರು, ಸ್ತ್ರೀಯರು ಇವರಿಗೆ ಮುಖ್ಯ ವಸ್ತುವಾಗಿ ಅವರಿಗೆ ಸ್ವಾತಂತ್ರ ಮತ್ತು ಅಭ್ಯುದಯಕ್ಕೆ ಬೇಕಾಗುವ ಪರಿಹಾರಗಳನ್ನು ಹುಡುಕುತ್ತಾರೆ. “ನಿಮ್ಮ ನಿಲುವೇನು?” ಎಂಬ ಪ್ರಶ್ನೆಯನ್ನು ಎತ್ತುತ್ತಾರೆ. ಧಿಕ್ಕಾರವಿದೆ ಅಂತಹ ಸಮಾಜಕ್ಕೆ ’ಎಲ್ಲಿ ಸಮಾನತೆ ಇಲ್ಲವೋ’ ಎನ್ನುತ್ತಾರೆ.
ಅವರೊಂದಿಗೆ ಸನ್ನಿಹಿತ ಒಡನಾಟದಿಂದ ಅನೇಕ ಬಾರಿ ಅವರ ಭಾವನೆಗಳನ್ನು ನಾನು ಪ್ರಶ್ನಿಸುತ್ತಿದ್ದಾಗ, ಅವರಿಂದ ಸಿಗುತ್ತಿದ್ದ ಉತ್ತರವೂ ತೀಕ್ಷ್ಣವಾಗಿರುತ್ತಿತ್ತು. ಕೆಲವೊಮ್ಮೆ ವಿಕೋಪಕ್ಕೋದಾಗಲೂ ಅವರು ವಿಚಲಿತರಾಗದೇ ಅದನ್ನೇ ಮುಂದುವರಿಸಿಕೊಂಡು ಹೋಗುತ್ತಿದ್ದುದು ಅವರ ದಿಟ್ಟತನವನ್ನು ತೋರಿಸುತ್ತದೆ. ಇಲ್ಲಿನ ಲೇಖನಗಳಲ್ಲಿ ವಿಷಯಗಳು ಚರ್ವಿತ ಚರ್ವಾಣವಾಗಿದ್ದರೂ, ಪ್ರತಿಯೊಂದು ಹಂತದಲ್ಲಿ ಅದೇ ವಿಷಯವನ್ನು ಹೇಗೆ ಪ್ರಸ್ತುತ ಪಡಿಸಬಹುದೋ ಎಂಬುದನ್ನು ಮಾತ್ರ ಒಪ್ಪಲೇಬೇಕಾಗುತ್ತದೆ.
ಸಮಾಜದಲ್ಲಿನ ವ್ಯವಸ್ಥೆಗಳಿಗೆ ಆರ್ಥಿಕ, ಸಾಂಸ್ಕೃತಿಕ ಎಂಬ ಎರಡು ಕರ್ತವ್ಯಗಳಿರುತ್ತವೆ. ಆರ್ಥಿಕ, ಕಾರ್ಯಕಲಾಪವೇ ಯಾವುದೇ ವ್ಯವಸ್ಥೆಗೆ ಪ್ರಾಣಪ್ರದವಾದ ಅಂಶ. ಆದರೆ ಮನುಷ್ಯನಿಗಿರುವ ಭಾವೋದ್ವೇಗಗಳಿಗೆ, ಆರ್ಥಿಕ, ಕಾರ್ಯಕಲಾಪಗಳಿಗೆ ಎಂದಿಗೂ ಹಿಡಿಸದು. ಸಮಾಜದಲ್ಲಿ ಭಾವೋದ್ವೇಗ ಮುಂದೆ ಹುಟ್ಟಿ, ಆರ್ಥಿಕ ಕಾರ್ಯ ಕಲಾಪಗಳು ನಂತರ ಬಂದಿವೆ. ಆದ್ದರಿಂದಲೇ ಪ್ರತಿ ವ್ಯವಸ್ಥೆಯಲ್ಲಿ ಆರ್ಥಿಕ ಕಾರ್ಯ ಕಲಾಪಗಳಿಗೆ ಅನುಮೋದನೆಯಾಗಬೇಕಾದಲ್ಲಿ ಅದರ ಮೇಲೆ ಸಾಂಸ್ಕೃತಿಕ ಎಂಬ ಮುಚ್ಚಳಿಕೆಯೋ, ಪರದೇಯನ್ನೋ ಹಾಕಿರುತ್ತಾರೆ. ಏಷಿಯಾ ವಾಸಿಗಳಿಗೆ ಸೆಂಟಿಮೆಂಟ್ಸ್ ಹೆಚ್ಚೆಂದು ಪಾಶ್ಚಾತ್ಯ ದೇಶದವರು ಹೇಳುತ್ತಾರೆ. ಅದರರ್ಥ ಏನೆಂದರೆ, ಏಷಿಯಾ ದೇಶಗಳಲ್ಲಿ (ಅದರಲ್ಲೂ ಇಂಡಿಯಾದಲ್ಲಿ) ಸಾಂಸ್ಕೃತಿಕ ಮುಚ್ಚಳ ಕಬ್ಬಿಣ ಪರದೆಯಂತೆ ಇರುತ್ತದೆ. ಅದನ್ನು ಮೀರಿಸಿ ಅದರಲ್ಲಿ ಅಡಗಿದ ಆರ್ಥಿಕ ಕೋನವನ್ನು ಅರಿತುಕೊಳ್ಳಲು ಬಹುಶಃ ಅಸಾಧ್ಯ. ಮತ-ಧರ್ಮಗಳು ಏಷಿಯಾಖಂಡದಲ್ಲಿಯೇ ಹುಟ್ಟಿರುವುದು ಇದಕ್ಕೆ ಕಾರಣವಾಗಿರಬಹುದು.
ಉತ್ಪಾದನೆ ಹೆಚ್ಚಾದರೆ ಬಡತನ ತಗ್ಗುತ್ತದೆಂದು ನಂಬುವವರು ಕೆಲವರು ಇರುತ್ತಾರೆ. ನಿಜಕ್ಕೆ ಉತ್ಪಾದನೆ ಹೆಚ್ಚಾದಾಗ ವ್ಯಕ್ತಿಗತ ಆದಾಯ ಹೆಚ್ಚುತ್ತದೆ. ವ್ಯಕ್ತಿಗತ ಆಸ್ತಿ ಹೆಚ್ಚಾದಾಗಲೆಲ್ಲ ಮನುಷ್ಯರಲ್ಲಿ ಸ್ವಾರ್ಥ ಬೆಳೆಯುತ್ತದೆ. ಸ್ವಾರ್ಥ ಹೆಚ್ಚಾದಾಗ ಸಮಾಜದಲ್ಲಿ ಬಡತನ ಹೆಚ್ಚುತ್ತದೆ. ಭೂತಾಪ ಜಾಸ್ತಿಯಾಗಿ ಓಜೋನ್ ಪೊರೆಗೆ ರಂದ್ರಗಳು ಬಿದ್ದು ಅತಿ ನೀಲ ಕಿರಣಗಳ ಶಕ್ತಿ ವಿಜೃಂಭಿಸುವಂತೆ, ಮನುಷ್ಯರಲ್ಲಿ ಸ್ವಾರ್ಥ ಹೆಚ್ಚಾದಾಗಲೆಲ್ಲ ಸಾಂಸ್ಕೃತಿಕ ಪೊರೆಗೆ ತೂತುಗಳು ಬಿದ್ದು, ವ್ಯವಸ್ಥೆಯಲ್ಲಿನ ಆರ್ಥಿಕ ಕಾರ್ಯಕಲಾಪಗಳು ಬತ್ತಲಾಗಿ ಹೊರಬೀಳುತ್ತವೆ. ಸಾಂಸ್ಕೃತಿಕ ವಿಭಾಗ ಬಲಿಷ್ಠವಾಗಿದ್ದ ಸಮಾಜದಲ್ಲಿನ ಎಲ್ಲ ವ್ಯವಸ್ಥೆಗಳು ಸುಗಮವಾಗಿ ನಡೆಯುತ್ತದೆ. ಸಾಂಸ್ಕೃತಿಕ ವಿಭಾಗ ಬಲಿಷ್ಠವಾಗಬೇಕಾದರೆ ಮನುಷ್ಯನ ಮನಸ್ಸು ನಿರ್ಮಲವಾಗಿರಬೇಕು. ಕ್ರೂರತ್ವ, ಸ್ವಾರ್ಥರಹಿತ ಸಮಾಜ ನಿರ್ಮಾಣಕ್ಕೆ ಸಮಾನತೆ-ಮಾನವತೆಯೇ ಅದಕ್ಕೆ ಮೂಲ ದ್ರವ್ಯವೆಂದು ನಂಬಿರುವ ಲಿಂಗಣ್ಣನವರು ಬದುಕಿನುದ್ದಕ್ಕೂ ಜನಪದದ ಗುಂಗಿನಲ್ಲಿಯೇ ಇರುತ್ತಾ ಆನಂದ ಪಡುತ್ತಾರೆ. ಜಿಲ್ಲೆಯ ಪ್ರಥಮ ಜನಪದ ಸಮ್ಮೇಳನದ ಸರ್ವಾಧ್ಯP ಸ್ಥಾನವನ್ನು ಅಲಂಕರಿಸಿರುವ ಇವರಿಗೆ ಸಂದಿರುವ ಈ ಗೌರವ ಗ್ರಾಮೀಣ ಸೊಗಡಿನ ಎಲ್ಲ ವಿದ್ಯಾರ್ಥಿಗಳಿಗೆ ಮಾದರಿಯಾಗಲೆಂದು ನಾನು ಭಾವಿಸಿzನೆ.

  • ವೀರ ಹನುಮಾನ