
ರಾಯಚೂರು,ಏ.೦೯- ರಾಯಚೂರು ಗ್ರಾಮೀಣ ಕ್ಷೇತ್ರ ಪ.ಪಂಗಡ ಮೀಸಲು ಕ್ಷೇತ್ರವಾಗಿದ್ದು ಬಿಜೆಪಿಯಿಂದ ಹಲವಾರು ಜನ ಟಿಕೆಟ್ ಆಕಾಂಕ್ಷಿಯಾಗಿದ್ದು, ಅದರಲ್ಲಿ ಯುವ ವಕೀಲರಾದ ರಾಘವೇಂದ್ರ ನಾಯಕ ಕೂಡ ಟಿಕೆಟ್ ಆಕಾಂಕ್ಷಿಯಾಗಿ ದ್ದಾರೆಂದು ತಿಳಿದು ಬಂದಿದೆ.
ರಾಘವೇಂದ್ರ ನಾಯಕ ವೃತ್ತಿಯಲ್ಲಿ ವಕೀಲರಾದರು ಸಹ ತಮ್ಮ ವೃತ್ತಿಯ ಜೊತೆಗೆ ಬಿಜೆಪಿಯ ಪಕ್ಷದಲ್ಲಿ ಸಕ್ರಿಯ ಕಾರ್ಯಕರ್ತರಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುವ ಮೂಲಕ ಜಿಲ್ಲೆಯ ಹಾಗೂ ರಾಜ್ಯ ಮಟ್ಟದ ಮುಖಂಡರ ಪ್ರೀತಿ ವಿಶ್ವಾಸ ಗಳಿಸಿದ್ದಾರೆ. ಗ್ರಾಮೀಣ ಭಾಗದಿಂದ ಬರುವ ಬಡವರ ನೋವು, ಕಷ್ಟಗಳಿಗೆ ಸ್ಪಂದಿಸಿ ಉಚಿತವಾಗಿ ಅವರ ಕೆಲಸ ಕಾರ್ಯಗಳನ್ನು ಮಾಡುವ ಮೂಲಕ ಗ್ರಾಮೀಣ ಭಾಗದ ಜನರ ಮನಸು ಗೆದ್ದ ಯುವ ಮುಖಂಡರಾಗಿದ್ದಾರೆ.
೨೦೦೮ ರಿಂದ ೧೮ ರವರೆಗೆ ಬಿಜೆಪಿಯ ಜಿಲ್ಲಾ ಪ.ಪಂಗಡದ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಈಗ ಪ್ರಕೊಷ್ಟದಲ್ಲಿ ಸಂಚಾಲಕರಾಗಿ ಕೆಲಸ ಮಾಡುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನಪರ ಯೋಜನೆಗಳನ್ನು ಜನರಿಗೆ ತಲುಪಿಸಿ ಪಕ್ಷದ ಸಂಘಟನೆಯನ್ನು ಜಿಲ್ಲೆಯಲ್ಲಿ ಮಾಡುತ್ತಿದ್ದಾರೆ.
೨೦೨೩ ರಾಜ್ಯ ವಿಧಾನ ಸಭೆಯ ಚುನಾವಣೆಯಲ್ಲಿ ರಾಯಚೂರು ಗ್ರಾಮೀಣ ಕ್ಷೇತ್ರದ ಬಿಜೆಪಿಯ ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿದ್ದು, ಅಲ್ಲದೆ ಗ್ರಾಮೀಣ ಭಾಗದಲ್ಲಿ ಅಪಾರ ಸಂಖ್ಯೆಯ ಬಂದು ಬಳಗ ಹೊಂದಿದ್ದು, ಅಲ್ಲದೆ ಇವರ ಅಭಿಮಾನಿಗಳು ಸಹ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಇವರಿಗೆ ಪಕ್ಷ ಟಿಕೆಟ್ ಕೊಟ್ಟರೆ ಗೆಲ್ಲುವ ಸಾಮರ್ಥ್ಯ ಇದೆ. ಇವರಿಗೆ ಟಿಕೆಟ್ ಕೊಡುವಂತೆ ಇವರ ಅಭಿಮಾನಿಗಳು ಹಾಗೂ ಗ್ರಾಮೀಣ ಭಾಗದ ಪಕ್ಷದ ಕಾರ್ಯಕರ್ತರು ಮುಖಂಡರ ಮೇಲೆ ಒತ್ತಡ ಹಾಕಿ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ರಾಘವೇಂದ್ರ ನಾಯಕ ವಕೀಲರು ಮಾಜಿ ಮುಖ್ಯ ಮಂತ್ರಿಯಾದ ಬಿ.ಎಸ್ ಯಡಿಯೂರಪ್ಪ, ಪಕ್ಷದ ಅಧ್ಯಕ್ಷರಾದ ನಳೀನ ಕುಮಾರ ಕಟೀಲು, ಮಾಜಿ ಮಂತ್ರಿಯಾದ ಕೆ.ಎಸ್.ಈಶ್ವರಪ್ಪ, ಮಾಜಿ ರಾಜ್ಯ ಸಭಾ ಸದಸ್ಯರಾದ ಅಶೋಕ ಗಸ್ತಿ, ಮಾಜಿ ಶಾಸಕರಾದ ಪಾಪರೆಡ್ಡಿ, ಮಾಜಿ ಎಂ.ಎಲ್‌ಸಿ. ಎನ್ ಶಂಕರಪ್ಪ ವಕೀಲರು, ಬಂಡೇಶ ವಲ್ಕಂದಿನ್ನಿ ಇವರ ಬೆಂಬಲಿಗರಾಗಿದ್ದಾರೆ.
ಬಿಜೆಪಿಯಲ್ಲಿ ಸುಮಾರು ವರ್ಷಗಳಿಂದ ಕೆಲಸ ಮಾಡುತ್ತಾ ಪಕ್ಷದ ವಿವಿಧ ಸ್ಥಾನ ಮಾನಗಳನ್ನು ಪಡೆದುಕೊಂಡು ಪಕ್ಷಕ್ಕೆ ಯಾವುದೆ ರೀತಿಯ ಕಳಂಕ ತರುವ ಕೆಲಸ ಮಾಡದೆ ಪಕ್ಷದ ಶಿಸ್ತಿನ ಸಿಪಾಯಿಯಾಗಿ ದುಡಿಯುವ ಮೂಲಕ ಪ್ರಾಮಾಣಿಕ ಕಾರ್ಯಕರ್ತರಾಗಿ ಕೆಲಸ ಮಾಡಿ ಜಿಲ್ಲೆಯ ಪಕ್ಷದ ಎಲ್ಲ ಮುಖಂಡರ ಜೊತೆ ಉತ್ತಮ ಒಡನಾಟ ಇಟ್ಟುಕೊಂಡಿದ್ದು, ರಾಘವೇಂದ್ರ ನಾಯಕ ವಕೀಲರಿಗೆ ರಾಯಚೂರು ಗ್ರಾಮೀಣ ಕ್ಷೇತ್ರದ ಟಿಕೆಟ್ ಸಿಗುವ ವಿಶ್ವಾಸದಿಂದ ಗುಪ್ತವಾಗಿ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಹಾಗೂ ಪ್ರಚಾರ ಕೂಡ ಕೂಡ ನಡೆಸಿದ್ದಾರೆ.
ಈ ಕುರಿತು ಪತ್ರಿಕೆ ರಾಘವೇಂದ್ರ ನಾಯಕ ವಕೀಲರನ್ನು ಮಾತನಾಡಿಸಿದಾಗ ನಾನು ಕೂಡ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದು ಪಕ್ಷ ಟಿಕೆಟ್ ನೀಡುವ ವಿಶ್ವಾಸ ಇದೆ. ಪಕ್ಷ ಟಿಕೆಟ್ ಕೊಟ್ಟರೆ ಪಕ್ಷದ ಎಲ್ಲ ಮುಖಂಡರು ಹಾಗೂ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುವ ಮೂಲಕ ಗೆದ್ದು ಬರುವೆ. ಒಂದು ವೇಳೆ ಪಕ್ಷದ ಹೈಕಮಾಂಡ ಯಾರಿಗೂ ಟಿಕೆಟ್ ನೀಡಿದರು ಸಹ ಎಲ್ಲರು ಒಂದಾಗಿ ಒಗ್ಗಟ್ಟಿನಿಂದ ಕೆಲಸ ಮಾಡಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.