ರಾಯಚೂರು ಗಂಜ್‌ನಲ್ಲಿ ಪ್ರಚಾರ

ರಾಯಚೂರು,ಏ.೨೬- ವಿಧಾನಸಭಾ ಚುನಾವಣೆ ಅಂಗವಾಗಿ ರಾಯಚೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ತಿಪ್ಪರಾಜ ಹವಾಲ್ದಾರ್ ಅವರು ನಗರದಲ್ಲಿರುವ ಎಪಿಎಂಸಿ ಮಾರ್ಕೆಟ್ ನಲ್ಲಿ ಪ್ರಚಾರ ಕೈಗೊಂಡು ಹಲವು ವರ್ತಕರನ್ನು ಭೇಟಿನೀಡಿ ಬೆಂಬಲ ಕೋರಿದರು.
ನಿನ್ನೆ ತಿಪ್ಪರಾಜ್ ಅವರು ಮಾರ್ಕೆಟ್ ನಾ ಹಲವು ಪ್ರಮುಖರು ಬಿಜೆಪಿ ಪಕ್ಷಕ್ಕೆ ಸಂಪೂರ್ಣವಾಗಿ ಬೆಂಬಲಿಸುವುದಾಗಿ ಆಶ್ವಾಸನೆಯನ್ನು ನೀಡಿದರು ಎಂದು ತಿಳಿಸಿದರು.
ಪ್ರಚಾರದ ವೇಳೆ ಹಲವಾರು ಗ್ರಾಮ ಪಂಚಾಯತ್ ಸದಸ್ಯರು ಬಿಜೆಪಿ ಅಭ್ಯರ್ಥಿ ತಿಪ್ಪರಾಜ್ ಹವಾಲ್ದಾರ್,
ಪುಂಡ್ಲ ರಾಜೇಂದ್ರರೆಡ್ಡಿ, ಲಿಂಗಾರೆಡ್ಡಿ, ಜನಾರ್ಧನ್ ರೆಡ್ಡಿ, ರಾಮುನಾಯಕ್, ಪಾಳ್ಯ೦ ಮಲ್ಲೇಶ್, ಪುಂಡ್ಲಾ ವಿರೇಶ್, ಮುಕ್ಕಣ ನೇತೃತ್ವದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.