ರಾಯಚೂರು,ಜು.೨೯-
ರಾಯಚೂರು ಜನರಿಗೆ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು, ರಸ್ತೆ, ಚರಂಡಿ, ಯುಜಿಡಿ, ಶೌಚಾಲಯ, ಸ್ವಚ್ಛತೆ, ವಸತಿ, ನಿರಾಶ್ರಿತರಿಗೆ ನಿವೇಶನ, ಶಿಕ್ಷಣ ಸೇರಿ ಜಿಲ್ಲೆಯಲ್ಲಿಯೇ ಎಮ್ಸ್ ಮಂಜೂರು ಮಾಡಲು ಪ್ರಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವರಾದ ಎನ್‌ಎಸ್ ಬೋಸರಾಜು ಅವರು ತಿಳಿಸಿದರು.
ರಾಯಚೂರಿನ ಯರಮರಸನಲ್ಲಿರುವ ವಿವಿಐಪಿ ಸರ್ಕ್ಯುಟ್ ಹೌಸ್‌ನಲ್ಲಿ ನಡೆದ, ಎಡೆದೊರೆ ನಾಡು- ಭತ್ತದ ಬೀಡು ರಾಯಚೂರಿನ ಸಮಗ್ರ ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರೊಂದಿಗೆ ರೀ-ಬೂಟ್ ರಾಯಚೂರು ಎಂಬ ಶೀರ್ಷಿಕೆಯಡಿಯಲ್ಲಿ ಮುಕ್ತ ಸಂವಾದ ನಡೆಸಿದರು.
ಸಂವಾದದಲ್ಲಿ ಕಾಂಗ್ರೆಸ್ ಸರ್ಕಾರದ ೫ ಗ್ಯಾರಂಟಿ ಯೋಜನೆಗಳ ಅನುಷ್ಠಾನ, ರಾಯಚೂರು ಜನತೆಗೆ ಸಮರ್ಪಕ ಶುದ್ಧ ಕುಡಿಯುವ ನೀರು, ರಸ್ತೆ, ಕಾರ್ಮಿಕರ ಸಮಸ್ಯೆಗಳು, ರೈತರ ಸಮಸ್ಯೆಗಳು, ನಿವೇಶನ ಹಕ್ಕುಪತ್ರ ಸೇರಿದಂತೆ ಅನೇಕ ವಿಷಯಗಳನ್ನು ಪಕ್ಷದ ಹಿರಿಯ ಮುಖಂಡರು ಗಂಭೀರವಾಗಿ ಚರ್ಚಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್‌ನ ಹಿರಿಯ ಮುಖಂಡರು ಕಾಂಗ್ರೆಸ್ ಸರ್ಕಾರ ನೀಡಿರುವ ೫ ಜನಪರ ಗ್ಯಾರಂಟಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನಂತರ ೫ ಯೋಜನೆಗಳ ಅನುಷ್ಠಾನ ಬಗ್ಗೆ ಮುಕ್ತ ಸಮಾಲೋಚನೆ ನಡೆಸಿದರು.
ಅಲ್ಲದೆ ಮುಂಬರುವ ಲೋಕಸಭೆ ಚುನಾವಣೆಯ ಪೂರ್ವ ಸಿದ್ಧತೆ ಹಾಗೂ ತಳಮಟ್ಟದಿಂದ ಪಕ್ಷ ಸಂಘಟನೆ ಸೇರಿ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಶಾಸಕರು, ಹಿರಿಯರು, ಸ್ಥಳೀಯ ಮಟ್ಟದ ನಾಯಕರು ಸೇರಿದಂತೆ ಎಲ್ಲರನ್ನು ವಿಶ್ವಸಕ್ಕೆ ತೆಗೆದುಕೊಂಡು ಚುನಾವಣೆಗೆ ಸಿದ್ದರಾಗುವಂತೆ ಸಂವಾದದಲ್ಲಿ ಮುಖಂಡರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್‌ನ ಬ್ಲಾಕ್ ಅಧ್ಯಕ್ಷರಾದ ಬಸವರಾಜ ರಡ್ಡಿ, ಕುರಬದೊಡ್ಡಿ ಅಂಜನೆಯ್ಯ, ಹಿರಿಯರಾದ ಜಯಣ್ಣ, ಕೆ.ಶಾಂತಪ್ಪ, ಮೊಹ್ಮದ್ ಶಾಲಂ, ಅಮರೇಗೌಡ ಹಂಚಿನಾಳ, ಜಿ ಶಿವಮೂರ್ತಿ ರುದ್ರಪ್ಪ ಅಂಗಡಿ,ನಿರ್ಮಲಾ ಬೆಣ್ಣೆ, ಬಶೀರುದ್ದಿನ್, ತಿಮ್ಮಾರಡ್ಡಿ, ಬಿ.ರಮೇಶ್, ಶೇಖರ್ ರಡ್ಡಿ, ಸುರೇಶ, ಗೋವಿಂದ ರಡ್ಡಿ, ಜಾವೀದ್ ಉಲ್ ಹಕ್, ಅಫಜಲ್ ನಾಯಕ್, ಈರಣ್ಣ ಕೆಳಗೇರಿ, ಪಂಜಾಬಿ ನಜೀರ್ ಸಾಬ್, ರಜಾಕ್ ಉಸ್ತಾದ್, ಅಶೋಕ್ ಪೋತಗಲ್ , ನರಸಿಂಹಲು ಮಾಡಗಿರಿ, ಸಣ್ಣ ನರಸರಡ್ಡಿ, ಹನುಮಂತ ಹೊಸೂರು, ಶರಣಗೌಡ ಮಲ್ಲಾಪೂರು ಸೇರಿದಂತೆ ಅನೇಕರು ಇದ್ದರು.