ರಾಯಚೂರಿನ ಶ್ರೀದೇವಿ ಸಿವಿಲ್ ಜಡ್ಜ್

ರಾಯಚೂರು.ಫೆ೨೪: ಜಿಲ್ಲೆಯ ಸಿಂಧನೂರು ತಾಲೂಕಿನ ರಾಘಲಪರ್ವಿ ಗ್ರಾಮದ ಯುವತಿ ಶ್ರೀದೇವಿ ಅವರು ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ.
೨೦೨೩ ರ ನವೆಂಬರ್ ತಿಂಗಳಲ್ಲಿ ಲಿಖಿತ ಪರೀಕ್ಷೆಗಳು ಹಾಗೂ ೨೦೨೪ ರ ಜನವರಿ ೩೦ ರಿಂದ ಫೆಬ್ರುವರಿ ೦೧ ರವರೆಗೆ ನಡೆದ ವೈವಾ ಎದುರಿಸಿ ಆಯ್ಕೆಯಾಗಿದ್ದಾರೆ. ಶ್ರೀದೇವಿ ಅವರು ರಾಯಚೂರಿನ ಸೇರ್ ಚುನಿಲಾಲ್ ಅಮರಚಂದ ಬೊಹರಾ ಕಾನೂನು ಮಹಾವಿದ್ಯಾಲಯಲ್ಲಿ ಎಲ್ ಎಲ್ ಬಿ ವ್ಯಾಸಂಗ ಮುಗಿಸಿದ್ದರು. ಕಠಿಣ ಅಭ್ಯಾಸ, ಸತತ ಪ್ರಯತ್ನದಿಂದ ಆಯ್ಕೆಗೊಂಡಿದ್ದಾರೆ.