
ಯಚೂರು,ಮಾ.೧೭- ರಾಯಚೂರಿನ ಲೋಕಸಭೆಯ ಮತದಾರ ಬಾಂಧವರ ಋಣ ತೀರಿಸಬೇಕಾದರೆ ಸಂಸದರ ರಾಜೀನಾಮೆ ಬಹಳ ಮುಖ್ಯಾಗಿದೆ ಜಿಲ್ಲಾ ಏಮ್ಸ್ ಹೋರಾಟ ಸಮಿತಿಯ ಪ್ರಧಾನ ಸಹ ಸಂಚಾಲಕ ಅಶೋಕ್ ಕುಮಾರ್ ಸಿ.ಕೆ ಜೈನ್ ಹೇಳಿದರು.
ಸಂಸದ ರಾಜಾ ಅಮರೇಶ್ವರ ನಾಯಕರೆ, ರಾಯಚೂರಿಗೆ ಏಮ್ಸ್ ಬರಲು ರಾಜಕೀಯ ಇಚ್ಛಾಶಕ್ತಿ ತೋರಬೇಕಾದರೆ ತಾವು ಮೊದಲು ರಾಜೀನಾಮೆಯನ್ನು ನೀಡಿ ಹೊರಗಡೆ ಬನ್ನಿ. ಏಕೆಂದರೆ ನಿಮ್ಮ ರಾಜೀನಾಮೆಯು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಲಿದೆ, ಪತ್ರಿಕಾಗೋಷ್ಠಿಯಲ್ಲಿ ಮಂತ್ರಾಲಯದ ಶ್ರೀಗಳು ವೇದಿಕೆಗೆ ಬಂದು ಬೆಂಬಲಿಸಿದ್ದನ್ನು ಸ್ವಾಗತವನ್ನು ಕೋರಿದ್ದು, ಏಮ್ಸ್ ಹೋರಾಟಕ್ಕೆ ಬಹಳ ಸಂತೋಷವಾಗಿದೆ. ಆದರೆ ತಾವು ೩೦೮ ದಿನಗಳಾದರೂ ನಮ್ಮ ವೇದಿಕೆಗೆ ಬಂದು ಬೆಂಬಲಿಸಲಿಲ್ಲ. ಸುಮಾರು ೫೯ ದಿನಗಳಿಂದ ಸರದಿ ಉಪವಾಸ ಸತ್ಯಾಗ್ರಹ ಸಂದರ್ಭದಲ್ಲಿ ೨೪ ತಾಸುಗಳು ಉಪವಾಸಕ್ಕೆ ಕೂತಿದ್ದರು, ತಾವು ಬಂದು ಈ ಸರದಿ ಹೋರಾಟಗಾರರಿಗೆ ಸಮಾಧಾನ ಹೇಳಲಿಲ್ಲ.ಸಮಾಧಾನ ಪಡಿಸುವುದು ನಿಮ್ಮ ಕರ್ತವ್ಯವಾಗಿತ್ತು.ಆದರೆ ಯಾಕೆ ಮಾಡಿಲ್ಲ ಎಂದು ಪ್ರಶ್ನಿಸಿದರು. ಕೂಡಲೇ ಸಂಸದ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿ ಹೊರಗಡೆ ಬನ್ನಿ ತಮ್ಮ ಈ ರಾಜಿನಾಮೆಯು, ಚುನಾವಣೆ ಸಂದರ್ಭದಲ್ಲಿ ಸರ್ಕಾರಕ್ಕೆ ಬಿಸಿ ಮೂಡೂತ್ತದೆಂಬುದನ್ನ ನಿಮ್ಮ ರಾಜೀನಾಮೆ ನಂತರ ತಿಳಿದು ಬರುತ್ತದೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.