ರಾಯಚೂರಗೆ ಏಮ್ಸ್ ಭರವಸೆ, ಉಸ್ತುವಾರಿ ಸಚಿವರಿಗೆ ಧನ್ಯವಾದ

ರಾಯಚೂರ,ಜೂ೧೨:ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಶರಣ ಪ್ರಕಾಶ ಪಾಟೀಲ್ ಅವರು ರಾಯಚೂರಗೆ ಏಮ್ಸ್ ತರುವ ಭರವಸೆ ನೀಡಿರುವುದು ಸ್ವಾಗತಾರ್ಹವೆಂದು ಎಪಿಎಂಸಿ ಮಾಜಿ ಉಪಾಧ್ಯಕ್ಷರಾದ ಬಾಬುರಾವ್ ತಿಳಿಸಿದ್ದಾರೆ.
ವೈದ್ಯಕೀಯ ಸಚಿವನಾಗಿ ರಾಯಚೂರಗೆ ಏಮ್ಸ್ ಕೊಡುವಂತೆ ರಾಜ್ಯದಿಂದ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸುವ ಭರವಸೆ ನೀಡಿದ್ದು, ಖುಷಿ ತಂದಿದೆ ಎಂದು ತಿಳಿಸಿದ್ದಾರೆ. ಈಗಾಗಲೇ ಕಾಂಗ್ರೆಸ ಪಕ್ಷವು ಚುನಾವಣಾ ಘೋಷಣಾ ಪತ್ರದಲ್ಲಿ ಏಮ್ಸ್ ರಾಯಚೂರ ದೊರಕಿಸಿಕೊಡಯವ ಭರವಸೆ ನೀಡಿದ್ದು, ಅದರ ಅನುಷ್ಠಾನ ಶೀಘ್ರ ಆಗಬೇಕೆಂದು ಕೋರಿದ್ದಾರೆ.ಈ ಹಿಂದೆ ರಾಯಚೂರ ಉಸ್ತುವಾರಿಕೆ ವಹಿಸಿಕೊಂಡಾಗ ತಾವು (ಶರಣಪ್ರಕಾಶ ಪಾಟೀಲ್ ) ಉತ್ತಮ ಕೆಲಸ ಮಾಡಿದ್ದು, ರಾಯಚೂರ ಜಿಲ್ಲೆ ಜನ ಮರೆತಿಲ್ಲ.ಉತ್ತಮ ಕೆಲಸಕ್ಕೆ ಜಿಲ್ಲೆಯ ಜನರ ಸಹಕಾರ ಇದ್ದೇ ಇದೆ ಎಂದು ತಿಳಿಸಿದ್ದಾರೆ.