ರಾಮ ಮನೋಹರ ಲೋಹಿಯಾ ಒಬ್ಬ ಸಮಾಜ ವಿಜ್ಞಾನಿ

ವಿಜಯಪುರ:ಮಾ.25: ರಾಜಕೀಯ ಮುತ್ಸದ್ದಿ ರಾಮನೋಹರ ಲೋಹಿಯಾ ಅವರು, ‘ನಮ್ಮ ದೇಶದ ಸಾಮಾಜಿಕ ವ್ಯವಸ್ಥೆ ಎಂಬುದು ಹೆಣ್ಣುಮಕ್ಕಳ, ದಲಿತರ ಮತ್ತು ಶೂದ್ರರ ಶೋಷಣೆಯ ವ್ಯವಸ್ಥೆ’ ಎಂಬುದನ್ನು ನಿಖರವಾಗಿ ಅರ್ಥಮಾಡಿಕೊಂಡಿದ್ದ ಸಮಾಜವಿಜ್ಞಾನಿಗಳೂ ಆಗಿದ್ದರು. 20ನೇ ಶತಮಾನದಲ್ಲಿ ಇವರು ಘೋಷಿಸಿದ ಸಪ್ತ ಕ್ರಾಂತಿಯ ವಿಚಾರಗಳೆಲ್ಲ 12ನೇ ಶತಮಾನದ ಬಸವಣ್ಣನವರ ವಚನಗಳಲ್ಲಿ ಅಡಕವಾಗಿವೆ.

ಲಿಂಗ ಸಮಾನತೆ, ವರ್ಣಭೇದ ನಿರಾಕರಣೆ, ಹುಟ್ಟಿನ ಆಧಾರದ ಅಸಮಾನತೆಗೆ ವಿರೋಧ, ವಿದೇಶಿ ದಬ್ಬಾಳಿಕೆ ಅಂತ್ಯವಾಗಿ ವಿಶ್ವಸರ್ಕಾರ ಸ್ಥಾಪನೆ, ಆರ್ಥಿಕ ಅಸಮಾನತೆ ನಾಶ, ಶಸ್ತ್ರಾಸ್ತ್ರಗಳ ಮೇಲೆ ಹತೋಟಿ, ವೈಯಕ್ತಿಕ ಸ್ವಾತಂತ್ರ್ಯ ರಕ್ಷಣೆ ಇವು ಲೋಹಿಯಾರ ಸಪ್ತಕ್ರಾಂತಿಯ ಅಂಶಗಳಾಗಿದ್ದವು ಎಂದು ಪ್ರಾ. ಎ.ಎಸ್.ಹಿಪ್ಪರಗಿ ಪ್ರತಿಷ್ಠಾನದ ವಾರ್ಷಿಕೋತ್ಸವ ಮತ್ತು ಸನ್ಮಾನ ಸಮಾರಂಭದಲ್ಲಿ ಅ.ಭಾ.ವಿ.ಲಿಂ. ಮಹಾಸಭೆಯ ಸಭಾಭವನದಲ್ಲಿ ಮುಖ್ಯ ಅತಿಥಿಗಳಾಗಿ ವಿದ್ವಾಂಸ ರಂಜಾನ್ ದರ್ಗಾ ಮಾತನಾಡಿದರು.

ಪ್ರಾ. ಎ.ಎಸ್.ಹಿಪ್ಪರಗಿಯವರು ಬರೆದಿರುವ ಮರುಮುದ್ರಣಗೊಂಡ ನನ್ನ ಬದುಕು, ಕನ್ನಡ ಛಂದೋವಾಹಿನಿ, ಕನ್ನಡ ಪ್ರೌಢ ವ್ಯಾಕರಣ ಪುಸ್ತಕಗಳನ್ನು ಬಿಡುಗಡೆ ಮಾಡುತ್ತಾ ಓದಿನ ಹರವು ಬಹಳಷ್ಟು ಕಡಿಮೆಯಾಗಿದೆ. ಸಾಹಿತಿಯು, ವಿದ್ಯಾರ್ಥಿಗಳು, ಶಿಕ್ಷಕರು ಈ ಗ್ರಂಥಗಳನ್ನು ಓದಿ ವ್ಯಾಕರಣ ಅಭ್ಯಾಸ ಮಾಡುವುದು ಕೂಡಾ ಅಷ್ಟೇ ಮಹತ್ವದವುಗಳಾಗಿವೆ ಎಂದು ಮೂರು ಪುಸ್ತಕ ಬಿಡುಗಡೆ ಮಾಡುತ್ತ ನಿ. ಪ್ರಾಚಾರ್ಯರಾದ ಪ್ರೊ. ಮಲ್ಲಿಕಾರ್ಜುನ ಹಿರೇಮಠ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಸಿ. ಚನಬಸಣ್ಣ ರಾಮಮನೋಹರ ಲೋಹಿಯಾ ಅವರ ಹೆಸರಿನಿಂದ ದತ್ತಿ ನಿಧಿ ನೀಡಿದ್ದು, ಲೋಹಿಯಾವರ ವಿಚಾರಗಳು ಪ್ರಸ್ತುತ ಸಂದರ್ಭದಲ್ಲಿ ನಮಗೆ ಅನ್ವಯವಾಗುತ್ತವೆಂದರು. ರಾಷ್ಟ್ರ ಕಟ್ಟುವಲ್ಲಿ ಯುವಕರ ಪಾತ್ರ ಮಹತ್ವದ್ದು ಎಂದು ಅಧ್ಯಕ್ಷತೆ ವಹಿಸಿ ಶಿವಶಂಕರ ಹಿರೇಮಠ ಅವರು ಮಾತನಾಡಿದರು. ವಿಶೇಷ ಸೇವೆ ಸಲ್ಲಿಸಿದ ರಂಗಭೂಮಿ ಕಲಾವಿದರಾದ ಎಸ್.ಎಮ್.ಖೇಡಗಿ, ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಕುಂಬಾರ ಬಸಲಿಂಗಮ್ಮ, ಸಾರಿಗೆ ಮತ್ತು ಕಲಾ ಕ್ಷೇತ್ರದಲ್ಲಿ ಉಮಾದೇವಿ ಶಿವಪುರ ಅವರಿಗೆ ಪ್ರತಿಷ್ಠಾನದ ವತಿಯಿಂದ ಸನ್ಮಾನಿಸಲಾಯಿತು. ಶ್ರೀ ಬಿ.ಎಂ.ಪಾಟೀಲ ಮತ್ತು ಬಿ.ಆರ್.ಬನಸೋಡೆ ವಚನಗಾಯನ ಮಾಡಿದರು. ವಿ.ಸಿ.ನಾಗಠಾಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಎಸ್.ಬಿ.ದೊಡಮನಿಯವರು ಸ್ವಾಗತಿಸಿ ಪರಿಚಯಿಸಿದರು. ಡಾ. ವಿ.ಡಿ.ಐಹೊಳ್ಳಿಯವರು ಸಾಧಕರನ್ನು ಪರಿಚಯಿಸಿದರು. ಕಾರ್ಯಕ್ರಮ ನಿರೂಪಣೆ ಬಿ.ಕೆ.ಗೋಟ್ಯಾಳ ಮಾಡಿದರು. ವಂದನಾರ್ಪಣೆ ಎಸ್.ಎಂ.ಹಿದಿಮೂರು ಮಾಡಿದರು.

ಪ್ರೊ. ಎನ್.ಜಿ.ಕರೂರ, ಮ.ಗು.ಯಾದವಾಡ, ಜೆ.ಎಸ್.ಕಂಚ್ಯಾಣಿ, ಎಸ್.ವಾಯ್.ದೊಡಮನಿ, ಎನ್.ಎಂ.ಮನಗೊಂಡ, ಆರ್.ಎನ್.ದಿಂಡೂರ, ಜೆ.ಜಿ.ಅಳ್ಳೊಳ್ಳಿ, ಸಂಗಪ್ಪ ಶಿವಣಗಿ, ಜಿ.ಬಿ.ಸಾಲಕ್ಕಿ, ಎ.ಎಸ್.ಪೂಜಾರಿ, ಸಂಗೊಂಡಿಮಠ, ಶ್ರೀಮತಿ ಶಕುಂತಲಾ ದೊಡಮನಿ, ಭಾರತಿ ಭೂಯ್ಯಾರ, ದಂಪತಿಗಳಾದ ಎಸ್.ಬಿ.ಗೆಣ್ಣೂರ, ಕೆ.ಎಸ್.ಅಂಕಲಗಿ, ವಿ.ಡಿ.ಐಹೊಳ್ಳಿ, ಎಸ್.ಬಿ.ಡೊಮನಾಳ, ಹಿರೇಮಠ, ಇಜೇರಿ ಉಪಸ್ಥಿತರಿದ್ದರು. ಚೌದರಿ, ಡಾ. ಬಸವರಾಜ ಪಾಟೀಲ, ಡಂಬಳ, ಎಸ್.ಜಿ.ನಾಡಗೌಡರ, ಈರಣ್ಣ ತೊಂಡಿಕಟ್ಟಿ, ಶಿವಪುತ್ರಪ್ಪ ಪೋಳ, ಪರಶುರಾಮ ಪೋಳ, ಡಾ. ಎಂ.ಎಸ್.ಮದಭಾವಿ, ಡಾ. ವಿ.ವಿ.ಮಳಗಿ, ಬಿ.ಎಚ್.ಬಾದರಬಂಡಿ, ಶಿವಾನಂದ ಇಂಗಳೇಶ್ವರ, ಡಿ.ಎನ್.ಹಳ್ಳಿ, ಅಶೋಕ ಮತ್ತು ಸಂಗು ಹಿಪ್ಪರಗಿ ಮುಂತಾದವರು ಉಪಸ್ಥಿತರಿದ್ದರು.