ರಾಮ ಮಂದಿರ ವಿಷಯದಲ್ಲಿ ಕಾಂಗ್ರೆಸ್ಸಿಗರಿಗೆ ಫಲ; ಕಾಲ ನಿರ್ಧರಿಸಲಿದೆ : ಡಾ: ಜಿ.ಎಂ.ಸಿದ್ದೇಶ್ವರ

  ಸಂಜೆವಾಣಿ ವಾರ್ತೆ

ದಾವಣಗೆರೆ.ಜ.೨೧; ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಶ್ರೇಯಸ್ಸನ್ನು ಅದರ ಫಲವನ್ನು ಬಿ.ಜೆ.ಪಿಯವರು ಪಡೆಯುತ್ತಿದ್ದಾರೆ ಎಂದು ಕೆಲವರು ಬೊಬ್ಬೆ ಹೊಡೆಯುತ್ತಿದ್ದಾರೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವಲ್ಲಿ ಬಿ.ಜೆ.ಪಿ. ಪಕ್ಷದ ಪಾತ್ರ ಏನಿತ್ತು, ಅದರ ಶ್ರಮ ಎಷ್ಟಿತ್ತು  ಎಂಬುದು ಈ ದೇಶದ ಜನರಿಗೆ ಗೊತ್ತಿದೆ.   ಅದೇ ರೀತಿ, ಇದೇ ವಿಷಯದಲ್ಲಿ  ಕಾಂಗ್ರೆಸ್ ಪಕ್ಷದ ನಿಲುವು ಏನಾಗಿತ್ತು  ಎಂಬುದು ಕೂಡ ಎಲ್ಲರಿಗೂ ಗೊತ್ತಿದೆ. ಯಾರು ಹೋರಾಟ ಮಾಡಿದ್ದಾರೋ ಅವರಿಗೆ ಫಲ ಸಿಕ್ಕೇ ಸಿಗುತ್ತದೆ.   ಯಾರು ರಾಮಮಂದಿರ ನಿರ್ಮಾಣವನ್ನು ವಿರೋಧ ಮಾಡಿದ್ದರೋ, ಯಾರು ಶ್ರೀರಾಮಚಂದ್ರ ಪ್ರಭುವಿನ ಅಸ್ತಿತ್ವವನ್ನು ಪ್ರಶ್ನೆ ಮಾಡಿದ್ದರೋ, ಯಾರು ಶ್ರೀ ರಾಮ ಕೇವಲ ಕಾಲ್ಪನಿಕ ಎಂದು ಬೊಬ್ಬೆ ಹೊಡೆದಿದ್ದರೋ ಅವರಿಗೂ ಕೂಡ ಅದರ ಫಲ ಸಿಗುತ್ತದೆ, ಆದರೆ, ಆ ಫಲ ಯಾವ ರೀತಿಯದ್ದು ಎಂಬುದನ್ನು ಕಾಲ ನಿರ್ಧರಿಸಲಿದೆ ಎಂದು ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಆಶಯದಂತೆ ಜನವರಿ ೧೪ ರಿಂದ ೨೨ ವರೆಗೆ ಧಾರ್ಮಿಕ ಕೇಂದ್ರಗಳ ಬಳಿ ಸ್ವಚ್ಚತಾ ಆಂದೋಲನದ  ಭಾಗವಾಗಿ ಇಂದು ದಾವಣಗೆರೆ ನಗರದ ವಿನೋಬನಗರದ ಚೌಡೇಶ್ವರಿ ದೇವಸ್ಥಾನದಲ್ಲಿ ಸ್ವಚ್ಚತಾ ಕಾರ್ಯಕ್ರಮದಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ ಅವರು ಪಾಲ್ಗೊಂಡು ಮಾತನಾಡಿದರು.ಈ ದೇಶದ ನೂರು ಕೋಟಿ ಹಿಂದುಗಳ ಆರಾಧ್ಯ ದೈವ,  ಅಯೋಧ್ಯಾಧಿಪತಿ ಶ್ರೀ ರಾಮಚಂದ್ರ ಪ್ರಭು ಇಂದು ಕೇವಲ ಭಾರತದಲ್ಲಿ ಅಷ್ಟೆ ಅಲ್ಲ ಇಡೀ ಪ್ರಪಂಚದ ತುಂಬಾ ಸುದ್ದಿಯಾಗಿದ್ದಾರೆ. ಶತಮಾನಗಳ ಭಾರತೀಯರ ಕನಸು ಇದೀಗ ನನಸಾಗುತ್ತಿದೆ, ಹಿಂದುಗಳ ಶ್ರದ್ದಾ ಕೇಂದ್ರ ಅಯೋಧ್ಯೆ ಇಂದು ಪ್ರತಿಯೊಬ್ಬ ಭಾರತೀಯರ ಮನೆ. ಮನಗಳನ್ನು ಆವರಿಸಿದೆ ಎಂದರು.  ದೇಶ ವಿದೇಶಗಳಲ್ಲಿ ಜನವರಿ ೨೨ ರ ಕಾರ್ಯಕ್ರಮವನ್ನು ಹಬ್ಬದ ರೀತಿಯಲ್ಲಿ ಆಚರಿಸಲು ಸಿದ್ದತೆ ನಡೆದಿದೆ.   ಭಾರತದಲ್ಲಿಯೂ ಕೂಡ ಪ್ರತಿಯೊಬ್ಬರೂ ಅತ್ಯಂತ ಸಡಗರ ಸಂಭ್ರಮದಿAದ ರಾಮಚಂದ್ರ ಪ್ರಭುವಿನ ಪ್ರಾಣ ಪ್ರತಿಷ್ಟಾನ ಕಾರ್ಯಕ್ರಮವನ್ನು ತಮ್ಮ ಮನೆಯ ಕಾರ್ಯಕ್ರಮವೇನೋ ಎನ್ನುವ ರೀತಿಯಲ್ಲಿ ಅತ್ಯಂತ ಕಾತುರದಿಂದ ಕಾಯುತ್ತಿದ್ದಾರೆ.ದಾವಣಗೆರೆ ಜಿಲ್ಲೆಯಲ್ಲಿಯೂ ಕೂಡ ಪ್ರತಿಯೊಂದು ಗ್ರಾಮಗಳಲ್ಲಿ, ನಗರಗಳಲ್ಲಿ ಆ ದಿನ ಹಬ್ಬದ ವಾತಾವರಣ ಸೃಷ್ಟಿಯಾಗಲಿದೆ. ದಾವಣಗೆರೆ ನಗರ ಸಹ ರಾಮೋತ್ಸವಕ್ಕೆ ತೆರೆದುಕೊಂಡಿದೆ. ಈ ಒಂದು ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡು ಇದರ ಒಂದು ಭಾಗವಾಗುವುದು ಕೂಡ ನಮ್ಮ ಸೌಭಾಗ್ಯ ಎಂದು ನಾನು ಭಾವಿಸಿದ್ದೇನೆ ಎಂದರು.ದೇವಸ್ಥಾನದ ಬಳಿ ಸ್ವಚ್ಚತಾ ಕಾರ್ಯದಲ್ಲಿ ಶಾಸಕರಾದ ಶ್ರೀ ಬಿ.ಪಿ.ಹರೀಶ್. ಬಿ.ಜೆ.ಪಿ. ಜಿಲ್ಲಾಧ್ಯಕ್ಷರಾದ ವಿರೇಶ್ ಹನಗವಾಡಿ, ಮುಖಂಡರುಗಳಾದ ಯಶವಂತರಾವ್ ಜಾಧವ್. ಜಿಲ್ಲಾ ಪ್ರಧಾನಕಾರ್ಯದರ್ಶಿ ಬಿ.ಎಸ್.ಜಗದೀಶ್. ಮಾಜಿ ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಪಾಲಿಕೆ ವಿರೋಧ ಪಕ್ಷದ ನಾಯಕ ಪ್ರಸನ್ನಕುಮಾರ್. ಮುಖಂಡರಾದ ಶ್ರೀನಿವಾಸ್ ದಾಸಕರಿಯಪ್ಪ, ಪಾಲಿಕೆ ಸದಸ್ಯರಾದ ಶಿವಪ್ರಕಾಶ್. ಮಹಿಳಾ ಮೋರ್ಚಾ ಪುಷ್ಪಾ ವಾಲಿ, ದೂಡಾ ಮಾಜಿ ಸದಸ್ಯ ಗೌರಮ್ಮ ಪಾಟೀಲ್, ಸಚಿನ್ ವರ್ಣೇಕರ್, ಲಾಯರ್ ದಿವಾಕರ್, ಲಾಯರ್ ರಾಘವೇಂದ್ರ, ವಿದ್ಯಾನಗರ ವಿನಯ್, ಕರಾಟೆ ತಿಮ್ಮೇಶ್, ಪುನಿತ್, ಪ್ರವೀಣ್, ಯಲ್ಲೇಶ್, ಯುವಮೋರ್ಚಾ ಶ್ರೀಧರ್. ಸೇರಿದಂತೆ ಹಲವರು ಉಪಸ್ಥಿತರಿದ್ದರು.