ರಾಮ ಮಂದಿರ ನಿರ್ಮಾಣವೇ ಧ್ಯೇಯವಾಗಿರಲಿ : ಕೇಶವ ಹೆಗಡೆ

ಸೇಡಂ :ಜ.7: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗುವ ತನಕ ಒಂದೇ ಧ್ಯೆಯದೊಂದಿಗೆ ಪ್ರತಿಯೊಬ್ಬರೂ ಮುನ್ನಡೆಯಬೇಕು ಎಂದು ವಿಶ್ವ ಹಿಂದೂ ಪರಿಷತ್ ದಕ್ಷಿಣ ಮಧ್ಯ ಕ್ಷೇತ್ರ ಸಂಘಟನಾ ಕಾರ್ಯದರ್ಶಿಗಳಾದ ಕೇಶವಜಿ ಹೆಗಡೆ ಅವರು ಹೇಳಿದರು.

ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಅಯೋಧ್ಯೆ ಶ್ರೀರಾಮ ಜನ್ಮಭೂಮಿ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನ ಕಾರ್ಯಾಲಯವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಯೊಂದು ಮನೆಯಿಂದ ಅಯೋಧ್ಯೆ ರಾಮ ಮಂದಿರಕ್ಕೆ ನಿಧಿ ಹೋಗಬೇಕಿದೆ. ಪ್ರತಿಯೊಬ್ಬರೂ ಸಹ ತಮ್ಮ ಕಾಣಿಕೆಯನ್ನು ಸಮರ್ಪಿಸಬೇಕಾಗಿದೆ. ಇದರಿಂದ ಎಲ್ಲರಲ್ಲೂ ಸಂತೃಪ್ತಿಯ ಭಾವನೆ ಮೂಢಲಿದೆ ಎಂದರು.

ನಿಧಿ ಸಮರ್ಪಣಾ ಕಾರ್ಯಾಲಯದ ಪ್ರಾರಂಭದಿಂದ ಅನೇಕ ಕಾರ್ಯಗಳು ಸರಿಯಾದ ರೀತಿಯಲ್ಲಿ ನಡೆಯಲಿವೆ. ಜೊತೆಗೆ ನಿಧಿಯ ಆಯ ವ್ಯಯಗಳ ಮಾಹಿತಿಯನ್ನು ಸಹ ಸಂಗ್ರಹಿಸುವ ಕೆಲಸ ಕಾರ್ಯಾಲಯದಲ್ಲಿ ನಡೆಯಲಿವೆ ಎಂದು ಹೇಳಿದರು.

ಈ ವೇಳೆಯಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಬೋಳಶೆಟ್ಟಿ, ಕಲಬುರಗಿ ನಗರಾಧ್ಯಕ್ಷ ರಾಜು ನವದಗಿ, ನಗರ ಕಾರ್ಯದರ್ಶಿ ಅಶ್ವಿನಕುಮಾರ, ತಾಲೂಕು ಅಧ್ಯಕ್ಷ ರಾಘವೇಂದ್ರ ಮುಸ್ತಾಜರ್, ನಿಧಿ ಸಂಗ್ರಹ ಸಮಿತಿ ಅಧ್ಯಕ್ಷ ರಾಜಶೇಖರ ನಿಲಂಗಿ, ಹಿರಿಯರಾದ ಡಾ. ಪ್ರಕಾಶಜಿ ಕುಲಕರ್ಣಿ, ಕಾಶಿನಾಥ ನಿಡಗುಂದಾ, ಅವಿನಾಶ, ಚನ್ನಬಸಪ್ಪ ನಿರ್ಣಿ, ರಮೇಶ ಮಾಲಪಾಣಿ, ನಾಗರಾಜ ಮಠ, ಪ್ರೇಮ ಚವ್ಹಾಣ, ಸಚಿನ ಮಿನಕೇರಿ ಆಕಾಶ ಸಕ್ರಿ, ಇನ್ನಿತರರು ಉಪಸ್ಥಿತರಿದ್ದರು.