ರಾಮ ಮಂದಿರ ಉದ್ಘಾಟನೆಯ ಹಿನ್ನೆಲೆ !!ಪಟ್ಟಣದ ದೇವಸ್ಥಾನಗಳಲ್ಲಿ ಸ್ವಚ್ಛತಾ ಕಾರ್ಯ

ಭಾಲ್ಕಿ:ಜ.17:ಹಳೇ ಪಟ್ಟಣದಲ್ಲಿರುವ ವಿಠ್ಠಲ ರುಕ್ಮಿಣಿ ಹಾಗೂ ಹಳೆಯ ರಾಮ ಮಂದಿರ ದೇವಸ್ಥಾನಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ ಬಿಜೆಪಿ ನಾಯಕರ ಮೂಲಕ ನಡೆಯಿತು. ದೇಶದ ಹಿಂದೂ ಧರ್ಮದ ಪವಿತ್ರ ಕ್ಷೇತ್ರವೆಂದೇ ಹೇಳಲಾಗುವ ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಿ ಜನವರಿ 22ರಂದು ಉದ್ಘಾಟನೆಯಾಗುತ್ತಿದೆ.
ಅಯೋಧ್ಯೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸ್ವಚ್ಛ ತೀರ್ಥಅಭಿಯಾನಕ್ಕೆ ಕರೆ ನೀಡಿದ್ದು, ನಮ್ಮ ದೇಶದ ಅಸ್ಮಿತೆಯಾಗಿರುವ ಶ್ರೀರಾಮಚಂದ್ರರು ಇಡೀ ವಿಶ್ವಕ್ಕೆ ಮಾದರಿ. ರಾಮ ಜನ್ಮಭೂಮಿ ಉಳಿವಿಗಾಗಿ ನಮ್ಮ ಹಿರಿಯರು ತುಂಬಾ ಪ್ರಯತ್ನಿಸಿದ್ದಾರೆ. ಆದರೆ ಇಂದು ಸಫಲವಾಗಿದೆ. ಈ ಸಮಯದಲ್ಲಿ ಎಲ್ಲಾ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ರಾಮನ ಮೇಲಿನ ಭಕ್ತಿ ಸಮರ್ಪಿಸಲಾಗುತ್ತಿದೆ. ಶ್ರೀ ರಾಮಲಲ್ಲಾ ಮೂರ್ತಿಯ ಪ್ರತಿಷ್ಠಾಪನೆಯ ನಿಮಿತ್ಯ ಮನೆಯ ಅಂಗಳದಲ್ಲಿ ರಂಗೋಲಿ ಹಾಕಿ, ಉತ್ತರಾಭಿಮುಖವಾಗಿ ದೀಪ ಹಚ್ಚಿ ದೇವಸ್ಥಾನಗಳಲ್ಲಿ ಭಜನೆ ಸಮರ್ಪಿಸಿದರೆ ರಾಮಚಂದ್ರನಿಗೆ ಹರಿಕೆ ಸಲ್ಲಿಕೆಯಾಗುತ್ತದೆ ಎನ್ನುವುದು ನಂಬಿಕೆ.
ಮಾಜಿ ಶಾಸಕ ಪ್ರಕಾಶ ಖಂಡ್ರೆ ಮಾತನಾಡಿ ಹಿಂದೂಗಳಿಗೆ ಅಯೋಧ್ಯೆ ಭಕ್ತಿ ಕೇಂದ್ರವಾಗಿದೆ. ಹಲವಾರು ವರ್ಷಗಳ ಹೋರಾಟದ ಫಲವಾಗಿ ಶ್ರೀ ರಾಮನ ಮಂದಿರ ಉದ್ಘಾಟನೆಯಾಗುತ್ತಿದೆ. ಧರ್ಮವನ್ನು ನಾವು ಕಾಪಾಡಿದರೆ ಅದು ನಮ್ಮನ್ನು ಕಾಯುತ್ತದೆ ಎಂಬುದಕ್ಕೆ ಈ ಕ್ಷಣ ಸಾಕ್ಷಿಯಾಗಿದೆ ಎಂದರು.
ರಾಮಾಯಣದಲ್ಲಿ ಸಾಮಾನ್ಯ ಜನರ ಜೀವನದ ಹಲವಾರು ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಬದುಕಿನಲ್ಲಿ ಯಾವ ರೀತಿ ಇರಬೇಕು ಎನ್ನುವುದನ್ನು ರಾಮಾಯಣ ತಿಳಿಸುತ್ತದೆ. ರಾಮ ಎಲ್ಲರಿಗೂ ಆದರ್ಶನಾಗಿದ್ದಾನೆ. ರಾಮನಲ್ಲಿ ಎಲ್ಲಾ ರೀತಿಯ ಒಳ್ಳೆ ಗುಣಗಳಿವೆ. ಸುದೀರ್ಘವಾದ ಹೋರಾಟ ನಡೆದಿದ್ದು ಶ್ರೀರಾಮ ಮಂದಿರ ನಿರ್ಮಾಣಕ್ಕೆ ಎಂದು ತಿಳಿಸಿ ‘ಭಾಲ್ಕಿಯಲ್ಲಿ ಹನ್ನೆರಡು ಜ್ಯೋತಿರ್ ಲಿಂಗಗಳಿವೆ ಪ್ರತಿಯೊಂದನ್ನು ಪ್ರತಿ ದಿನ ಮುಂಜಾನೆ ಎಂಟು ಗಂಟೆಗೆ ಸ್ವಚ್ಛತೆ ಮಾಡಲಾಗುತ್ತದೆ.’ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಬರಬೇಕು ಎಂದು ಬಿಜೆಪಿ ಮುಖಂಡ ಚನ್ನಬಸವಣ್ಣ ಬಳತೆ ನುಡಿದರು.
ಈ ಸಂದರ್ಭದಲ್ಲಿ ಶಿವರಾಜ ಗಂದಗೆ, ಗೋವಿಂದರಾವ್ ಬಿರಾದಾರ್, ಪಂಡಿತ ಶಿರೋಳಿ, ಸುಭಾಷ್ ಬಿರಾದಾರ್, ಬಾಬುರಾವ್ ಭೂಪೆ, ಜೈರಾಜ್ ಕೊಳ್ಳಾ, ಸಂಜುಕುಮಾರ್ ಶಿಂಧೆ ಹಾಗೂ ಯುವ ಮೋರ್ಚಾದ ಮುಖಂಡರು ಕಾರ್ಯಕರ್ತರು ಎಲ್ಲರೂ ಉಪಸ್ಥಿತರಿದ್ದರು.