ರಾಮ ಭಕ್ತರಿಗೆ ಅಕ್ಷತೆ ನೀಡಿ ಆಹ್ವಾನ

(ಸಂಜೆವಾಣಿ ವಾರ್ತೆ)
ಸಿಂಧನೂರು ಜ.೧೩ ಬಹು ಜನರ ಬಹು ದಿನದ ಕನಸಾಗಿದ್ದ ಅಯೋದ್ಯಯಲ್ಲಿ ರಾಮ ಮಂದಿರ ನಿರ್ಮಾಣದ ಸಾಕಾರಗೊಂಡಿದೆ .ಜ.೨೨ ರಂದು ಗರ್ಭ ಗುಡಿಯಲ್ಲಿ ರಾಮ ಮೂರ್ತಿ ಪ್ರತಿಷ್ಠಾಪನೆ ನಡೆಯಲಿದ್ದು ತನ್ನಿಮಿತ್ತ ಶ್ರೀ ರಾಮ ಭಕ್ತರಿಗೆ ಅಯೊದ್ಯೆಯಿಂದ ತಂದ ಅಕ್ಷತೆ ನೀಡಿ ಆಹ್ವಾನಿಸಲಾಯಿತು.
ಹಲವು ವಿರೋಧಗಳ ನಡುವೆ ಹಲವಾರು ವರ್ಷಗಳ ಸುಧೀರ್ಘ ಹೋರಾಟದ ಪ್ರತಿಫಲವಾಗಿ ಶ್ರೀ ರಾಮ ಮಂದಿರ ಲೋಕಾರ್ಪಣೆ ಗೊಳ್ಳಲಿದೆ. ಇಂದು ತಾಲೂಕಿನ ಬಾಳೆಗಿಡ, ಭೀಮ ರಾಜ ಕ್ಯಾಂಪ್‌ನಲ್ಲಿನ ೪೨೦ ಮನೆಗಳಿಗೂ ಅಯೋದ್ಯೆಯಿಂದ ಬಂದಂತಹ ಆಹ್ವಾನ ಪತ್ರ, ಅಕ್ಷತೆ, ಶ್ರೀರಾಮ ಭಾವಚಿತ್ರ, ಧ್ವಜ ನೀಡಿ ಶ್ರೀರಾಮ ಘೋಷಣೆಗಳನ್ನು ಕೂಗುತ್ತಾ ನೂರಾರು ಜನರು ಕಾರ್ಯಕ್ರಮಕ್ಕೆ ಆಹ್ವಾನಿಸಿದರು.
ಪ್ರಮುಖವಾಗಿ ಸುರೇಶ ನೆಕ್ಕಂಟಿ, ಸಿಂಹಾದ್ರಿ ವಿಜಯ, ಸುರೇಶ ರಾಮಕೃಷ್ಣ, ದೀಪು, ಪವನ ಸೇರಿದಂತೆ ಮಹಿಳೆಯರು ಪಾಲ್ಗೊಂಡಿದ್ದರು.