ರಾಮ ನವಮಿ: ಶ್ರೀರಾಮ ಸೇನೆಯಿಂದ ಮೆರವಣಿಗೆ

ಬೀದರ್:ಮಾ.31: ರಾಮ ನವಮಿ ಅಂಗವಾಗಿ ಶ್ರೀರಾಮ ಸೇನೆ ವತಿಯಿಂದ ನಗರದಲ್ಲಿ ಅಲಂಕೃತ ವಾಹನದಲ್ಲಿ ರಾಮ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು.

ನಗರದ ಜೆಸ್ಕಾಂ ಕಚೇರಿ ಸಮೀಪದ ಹನುಮಾನ ಮಂದಿರ ಬಳಿಯಿಂದ ಆರಂಭಗೊಂಡ ಮೆರವಣಿಗೆಯು ಪ್ರಮುಖ ಬೀದಿಗಳ ಮೂಲಕ ಹಾಯ್ದು ಓಲ್ಡ್ ಸಿಟಿಯ ರಾಮ ಮಂದಿರಕ್ಕೆ ತಲುಪಿ ಮುಕ್ತಾಯಗೊಂಡಿತು.

ಮೆರವಣಿಗೆ ಉದ್ದಕ್ಕೂ ಸೇನೆ ಕಾರ್ಯಕರ್ತರು ಹಾಗೂ ಯುವಕರು ಜೈ ಶ್ರೀರಾಮ ಘೋಷಣೆ ಕೂಗುತ್ತ ಸಾಗಿದರು. ಸಂಗೀತದ ತಾಳಕ್ಕೆ ತಕ್ಕಂತೆ ಕುಣಿದು ಕುಪ್ಪಳಿಸಿದರು.

ಪ್ರಮುಖರಾದ ಪಪ್ಪು ಪಾಟೀಲ ಖಾನಾಪುರ, ಶಂಕರ ಖ್ಯಾಮಾ, ಪಂಡಿತ ಜಾಧವ್, ನಾಗೇಶ ಜಾಬಶೆಟ್ಟಿ, ಆಕಾಶ ಕೋಡಗೆ, ಮಾಣಿಕ ಯರನಳ್ಳೆ, ಸಚಿನ್ ಬೀದರ್, ಅಭಿನಯ, ಪ್ರತೀಕ ಠಾಕೂರ್, ಮಹೇಶ ನಿಂಬುರೆ, ಬಸು ಬಬುಲಗೆ ಮೊದಲಾದವರು ಪಾಲ್ಗೊಂಡಿದ್ದರು.