ರಾಮ ನವಮಿ ನಿಮಿತ್ತ ಅಧ್ಯಯನಕ್ಕಾಗಿ ಯೋಗ

ವಿಜಯಪುರ,ಏ.18:ಇಲ್ಲಿಯ ನವಭಾರತ ಫೌಂಡೇಶನ್ ಮತ್ತು ವೀರೇಸ್ ಫಿಲ್ಮ ಅಕಾಡೆಮಿ ಇವರ ಸಂಯುಕ್ತ ಆಶ್ರಯದಲ್ಲಿ ರಾಮ ನವಮಿ ನಿಮಿತ್ತ ವಿದ್ಯಾಲೋಕ ಕೋಚಿಂಗ್ ಸೆಂಟರ್‍ನಲ್ಲಿ ಬುಧವಾರ ವಿದ್ಯಾರ್ಥಿಗಳಿಗಾಗಿ ಅಧ್ಯಯನಕ್ಕಾಗಿ ಯೋಗ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ನವಭಾರತ ಫೌಂಡೇಶÀನ್ ಅಧ್ಯಕ್ಷÀ ರಾಜಶೇಖರ ಜಂಬಗಿ ಅವರು ಯುವ ಜನತೆಗೆ ಯೋಗದ ಮಹತ್ವ ತಿಳಿಸುತ್ತಾ, ಯೋಗದಿಂದ ರೋಗ ಮುಕ್ತರಾಗಬಹುದು. ಜೊತೆಗೆ ವಿದ್ಯಾರ್ಜನೆಯಲ್ಲಿ ವಿದ್ಯಾರ್ಥಿಗಳು ಏಕಾಗ್ರತೆ ಹೆಚ್ಚಿಸಿಕೊಳ್ಳಬಹುದು. ಯೋಗದ ಜೊತೆಗೆ ಸರಿಯಾದ ಆಹಾರ ಸೇವನೆ ಸಹ ಅತ್ಯಗತ್ಯ ಎಂದು ಹೇಳಿದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾಲೋಕ ಕೋಚಿಂಗ್ ಸೆಂಟರ್‍ನ ಅಧ್ಯಕ್ಷ ರೇವಣಸಿದ್ಧ ವಾಲಿಕಾರ ವಹಿಸಿದ್ದರು. ವೀರೇಶಗೌಡ ಬಿರಾದಾರ, ಬಿ ಎಸ್ ಪೂಜಾರಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನವಭಾರತ ಫೌಂಡೇಶನ್ ವತಿಯಿಂದ ನವಭಾರತ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿದ ರೇವಣಸಿದ್ಧ ವಾಲಿಕಾರ ಇವರಿಗೆ “ಯೋಗ ಪೋಷಣಾ ಮಿತ್ರ” ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮಲ್ಲಿಕಾರ್ಜುನ ದಳವಾಯಿ ನಿರೂಪಿಸಿದರು. ಶ್ರೀಕಾಂತ ಮಂಗಣ್ಣವರ ವಂದಿಸಿದರು.