ರಾಮ ನವಮಿ ಆಚರಣೆ

ಮುದಗಲ್,ಮಾ.೩೦- ಲಿಂಗಸುಗೂರು ತಾಲೂಕಿನ ಮುದಗಲ್ ಕರ್ನಾಟಕ ಕ್ಷತ್ರಿಯ ಒಕ್ಕೂಟದದಿಂದ ಭಗವಾನ್ ಶ್ರೀ ರಾಮನವಮಿ ನಿಮಿತ್ಯ ಪಟ್ಟಣದ ಲೈನ್ ಬಜಾರ ಹನುಮಂತ ದೇವಸ್ಥಾನದಲ್ಲಿ ಶ್ರೀ ರಾಮನಿಗೆ ಮಹಾ ಮಂಗಳಾರತಿ ಹಾಗೂ ವಿಶೇಷ ಶ್ರಾದ್ಧ ಭಕ್ತಿಯಿಂದ ಪೂಜೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ರಾಮಣ್ಣ ಚಿತ್ರಗಾರ, ಶ್ರೀನಿವಾಸ, ಹನುಮಂತ ಗೋಳಿ, ಸಂತೋಷ ಚಿತ್ರಗಾರ, ಟಿಪ್ಪು ಸಿಂಗ್, ಶಿವಶರಣ, ಗೋಶಲಪ್ಪ ಮೇಗಳಮನೆ, ಸಂತೋಷ ಸಿಂಗ್, ಶ್ರೀ ಲೇಶ ಚಿತ್ರಗಾರ ಇತರರು ಉಪಸ್ಥಿತರಿದ್ದರು.